ನವದೆಹಲಿ:ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಉಂಟಾಗಿರುವ ಸಂಘರ್ಷದಲ್ಲಿ ಸದ್ಯ ಈ ಹಿಂದಿನ ನಿರ್ಣಯಕ್ಕೇ ಮನ್ನಣೆ ಸಿಕ್ಕಿದೆ. ಈ ಮೂಲಕ ಕರ್ನಾಟಕ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದು ಅನಿವಾರ್ಯವಾಗಿದೆ.
ಎಸ್.ಕೆ.ಹಲ್ದಾರ್ ನೇತೃತ್ವದಲ್ಲಿ ಇಂದು ದೆಹಲಿಯಲ್ಲಿ ಕಾವೇರಿ ನದಿ ಪ್ರಾಧಿಕಾರದ ಸಭೆ ನಡೆದಿದ್ದು, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ತಮ್ಮ ವಾದ ಮಂಡಿಸಿದವು. ಕರ್ನಾಟಕದ ಪರವಾಗಿ ಹಿರಿಯ ಅಧಿಕಾರಿ ರಾಕೇಶ್‌ ಸಿಂಗ್‌ ವರ್ಚುವಲ್‌ ಆಗಿ ಭಾಗವಹಿಸಿದ್ದರೆ, ತಮಿಳುನಾಡಿನ ಪರವಾಗಿ ಅಲ್ಲಿನ ಎಸಿಎಸ್‌ ಸಂದೀಪ್ ಸಕ್ಸೇನಾ ಭಾಗಿಯಾಗಿದ್ದರು.
ಕಾವೇರಿ ನದಿ ನೀರು ವಿಚಾರದಲ್ಲಿ ಪ್ರಾಧಿಕಾರವು ಕಾವೇರಿ ನೀರು ನಿಯಂತ್ರಣ ಸಮಿತಿ ಸೋಮವಾರ ಮಾಡಿದ್ದ ಶಿಫಾರಸನ್ನೇ ಎತ್ತಿಹಿಡಿದಿದೆ. ಪರಿಣಾಮವಾಗಿ, ಮುಂದಿನ 15 ದಿನಗಳ ಕಾಲ ದಿನಕ್ಕೆ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕಾಗಿದೆ.
ಮುಂದಿನ 15 ದಿನಗಳಿಗೆ ಅನ್ವಯಿಸುವಂತೆ ನಿತ್ಯವೂ 5 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸೋಮವಾರ ಸೂಚಿಸಿತ್ತು. ಇಂದು ಕಾವೇರಿ ನದಿ ಪ್ರಾಧಿಕಾರ ಕೂಡ ಸಮಿತಿಯ ನಿರ್ಣಯವನ್ನೇ ಒತ್ತಿ ಹೇಳಿದೆ.
ಐದು ಸಾವಿರ ಕ್ಯೂಸೆಕ್​ ನೀರು ತುಂಬಾ ಕಡಿಮೆ ಎಂದಿರುವ ತಮಿಳುನಾಡು, 24 ಸಾವಿರ ಕ್ಯೂಸೆಕ್ ನೀರು ಕೇಳಿತ್ತು. ಆದರೆ ಸದ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುವ ಬಗ್ಗೆಯಷ್ಟೇ ಆದೇಶ ಹೊರಬಿದ್ದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸೆ.1ರಂದು ನಡೆಯುವ ಸುಪ್ರೀಂಕೋರ್ಟ್‌ನ ವಿಶೇಷ ಪೀಠದ ಮುಂದೆ ರಾಜ್ಯ ಸರ್ಕಾರ ತನ್ನ ವಿವರಣೆ ನೀಡಬಹುದಾಗಿದೆ.
ಅಪಾರ್ಟ್​​ಮೆಂಟ್​ನ 12ನೇ ಮಹಡಿಯಿಂದ ಹಾರಿ ಪ್ರಾಣ ಕಳ್ಕೊಂಡ್ಲು 10ನೇ ತರಗತಿ ವಿದ್ಯಾರ್ಥಿನಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 5 =
Remember me
