ಬೆಂಗಳೂರು:ಸಾಮಾನ್ಯವಾಗಿ ಎಲ್ಲರೂ ದಿನಾಂಕದ ಪ್ರಕಾರ ಜನ್ಮದಿನ ಆಚರಿಸಿಕೊಳ್ಳುತ್ತಾರೆ. ಇನ್ನು ಕೆಲವರು ಜನ್ಮನಕ್ಷತ್ರ, ತಿಥಿ ಪ್ರಕಾರ ಆಚರಿಸಿಕೊಳ್ಳುತ್ತಾರೆ. ಆದರೆ ಜನ್ಮದಿನಾಂಕ ಹಾಗೂ ಜನ್ಮನಕ್ಷತ್ರದ ದಿನ ಒಂದೇ ಆಗಿ ಬರುವುದು ಅತ್ಯಪರೂಪ. ಹೀಗಾಗಿ ಕೆಲವರು ವರ್ಷದಲ್ಲಿ ಎರಡೆರಡು ಸಲ ಜನ್ಮದಿನದ ಖುಷಿ ಅನುಭವಿಸುತ್ತಾರೆ. ಕೆಲವೊಂದು ವಿಶೇಷ ವರ್ಷಗಳಲ್ಲಿ ಎರಡೂ ಒಂದೇ ದಿನ ಬರುವುದಿರುತ್ತದೆ.
ಅಂಥದ್ದೇ ಒಂದು ಕಾಕತಾಳೀಯ ಈ ಸಲದ ಸ್ವಾತಂತ್ರ್ಯೋತ್ಸವದ ವಿಷಯದಲ್ಲಿಯೂ ನಡೆದಿದೆ. 1947ರ ಆಗಸ್ಟ್ 15ರಂದು ಯಾವ ತಿಥಿ-ನಕ್ಷತ್ರ ಇತ್ತೋ 77ನೇ ಸ್ವಾತಂತ್ರ್ಯೋತ್ಸವದ ದಿನವಾದ ಇವತ್ತೂ ಅದೇ ತಿಥಿ-ನಕ್ಷತ್ರವಿದೆ. ಹೀಗಾಗಿ ಕೆಲವರು ಈ ಸ್ವಾತಂತ್ರ್ಯೋತ್ಸವವನ್ನು ವಿಶೇಷ ಎಂಬಂತೆ ಸಂಭ್ರಮಿಸುತ್ತಿದ್ದಾರೆ.
ಪಂಚಾಂಗವೊಂದರ ಮಾಹಿತಿ ಪ್ರಕಾರ 1947ರ ಆಗಸ್ಟ್ 15ರಂದು ಕೃಷ್ಣಪಕ್ಷವಾಗಿದ್ದು, ತಿಥಿ ಚತುರ್ದಶಿ, ಪುಷ್ಯ ನಕ್ಷತ್ರವಾಗಿತ್ತು. ಮಾತ್ರವಲ್ಲ, ಅದು ಅಧಿಕ ಶ್ರಾವಣ ಕೂಡ ಆಗಿತ್ತು. ಅಚ್ಚರಿ ಎಂಬಂತೆ ಈ ಸಲವೂ ಅಧಿಕ ಶ್ರಾವಣವಾಗಿದ್ದು, ತಿಥಿ ಚತುರ್ದಶಿಯಾಗಿದ್ದು, ನಕ್ಷತ್ರ ಪುಷ್ಯವಾಗಿದೆ.

#Vijayavani#Panchanga#ವಿಜಯವಾಣಿ#KannadaNewspic.twitter.com/glnQtY9Q2i— Vijayavani Digital (@Vijayavani_Digi)August 15, 2023
#Vijayavani#Panchanga#ವಿಜಯವಾಣಿ#KannadaNewspic.twitter.com/glnQtY9Q2i
ಇಲ್ಲಿನ ಶಿಕ್ಷಕರು ಉದ್ಯೋಗಕ್ಕೆ ಸೇರುವ ಮುನ್ನ ಈ ಕೆಲಸ ಮಾಡಲೇಬೇಕು: ಏನಿದು ಲ್ಯಾಬ್​ ಸ್ಕೂಲ್?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
