ಮುಂಬೈ:ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ(ಎನ್​​ಸಿಬಿ)ದ ಮುಂಬೈ ವಲಯ ನಿರ್ದೇಶಕ ಸಮೀರ್​ ವಾಂಖೆಡೆ ಅವರ ತಂದೆ ಧ್ಯಾನ್​​ದೇವ್​ ಕಚ್ರೂಜಿ ವಾಂಖೆಡೆ ಅವರು, ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್​ ವಿರುದ್ಧ ಬಾಂಬೆ ಹೈಕೋರ್ಟ್​​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತಮ್ಮ ಪುತ್ರನ ವಿರುದ್ಧ ನಿತ್ಯ ಒಂದೊಂದು ಆರೋಪ ಮಾಡುತ್ತಾ ಬಂದಿರುವ ಮಲಿಕ್​​ರಿಂದ 1.25 ಕೋಟಿ ರೂಪಾಯಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಕ್ರೂಸ್​ ಶಿಪ್​ ಡ್ರಗ್ಸ್​ ಪಾರ್ಟಿ ಕೇಸಿನಲ್ಲಿ ಬಾಲಿವುಡ್​ ನಟ ಶಾರುಖ್​ ಖಾನ್​ರ ಪುತ್ರ ಆರ್ಯನ್​ ಖಾನ್​ ಅವರನ್ನು ಬಂಧಿಸಿದಾಗಿನಿಂದ ಆ ಪ್ರಕರಣದ ಮೇಲ್ವಿಚಾರಣೆ ವಹಿಸಿದ್ದ ಅಧಿಕಾರಿ ಸಮೀರ್​​ ವಾಂಖೆಡೆ ವಿರುದ್ಧ ಹಲವು ರೀತಿಯ ವೈಯಕ್ತಿಕ ಆರೋಪಗಳನ್ನು ನವಾಬ್​ ಮಲಿಕ್ ಮಾಡಿದ್ದಾರೆ. ಇದರಿಂದಾಗಿ ಸಮೀರ್​​ರ ಹೆಸರು ಮತ್ತು ವ್ಯಕ್ತಿತ್ವಕ್ಕೆ ಹಾಗೂ ನಮ್ಮ ಇಡೀ ಕುಟುಂಬದ ಸಾಮಾಜಿಕ ವರ್ಚಸ್ಸಿಗೆ ಸರಿಪಡಿಸಲಾಗದ ಹಾನಿ ಉಂಟಾಗಿದೆ ಎಂದು ಧ್ಯಾನ್​ದೇವ್ ವಾಂಖೆಡೆ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:‘ನಾನು ಜಯಲಲಿತಾರ ಮಗಳು… ಮೈಸೂರಿನವಳು… ಸಾಕ್ಷಿ ಸಮೇತ ಸಾಬೀತು ಪಡಿಸುವೆ…’
ಜೊತೆಗೆ, ಸಚಿವ ಮಲಿಕ್​, ಅವರ ಪಕ್ಷದ ಇತರ ನಾಯಕರು ಅಥವಾ ಅವರ ಆಣತಿಯಂತೆ ವರ್ತಿಸುವ ಯಾರೊಬ್ಬರೂ ಸಮೀರ್​ ಬಗ್ಗೆ ಇನ್ನು ಮುಂದೆ ಮಾತನಾಡದಂತೆ ಹಾಗೂ ಮಾಧ್ಯಮಗಳಲ್ಲಿ ತಮ್ಮ ಕುಟುಂಬದ ಬಗ್ಗೆ ಬರೆಯುವುದಕ್ಕೆ ಅಥವಾ ಪ್ರಸಾರ ಮಾಡುವುದಕ್ಕೆ ನಿರ್ಬಂಧ ವಿಧಿಸುವಂತೆಯೂ ಕೋರಿರುವ ಧ್ಯಾನ್​ದೇವ್​ ವಾಂಖೆಡೆ, ತಮ್ಮ ಕುಟುಂಬವನ್ನು ವಂಚಕರೆಂಬಂತೆ ಮತ್ತು ಹಿಂದೂಗಳಲ್ಲ ಎಂದು ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೊಕದ್ದಮೆಯು ನ.8 ರ ಸೋಮವಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.(ಏಜೆನ್ಸೀಸ್)
“ಆ ದಿನ ಪುನೀತ್​ ಮೊದಲು ಹೋದ ಕ್ಲಿನಿಕ್​​ನ ಸಿಸಿಟಿವಿ ಫೂಟೇಜ್​ ಬಿಡುಗಡೆ ಮಾಡಿ”

ಬಾಲ ಹೊಂದಿದ ಮಗು ಜನನ! ಅಪರೂಪದ ಸಂಗತಿಗೆ ಬೆರಗಾದ ವೈದ್ಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + thirteen =
Remember me
