ಚೆನ್ನೈ:ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಘೆಗೆ ಹೋಲಿಕೆ ಮಾಡುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್​ ಅವರು ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಇದಕ್ಕೆ ಬಿಜೆಪಿಯ ಐಟಿ ಸೆಲ್​ ಮುಖ್ಯಸ್ಥ ಅಮಿತ್​ ಮಾಳವೀಯ ಅವರು ಸಹ ಖಡಕ್​ ತಿರುಗೇಟನ್ನು ನೀಡಿದ್ದಾರೆ.
ಶನಿವಾರ ಚೆನ್ನೈನಲ್ಲಿ ನಡೆದ ಸನಾತನ ನಿರ್ಮೂಲನ ಸಮ್ಮೇಳನವನ್ನು ಉದ್ದೇಶಿ ಮಾತನಾಡಿದ ಉದಯನಿಧಿ ಸ್ಟಾಲಿನ್​, ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವೊಂದು ವಿಚಾರಗಳನ್ನು ಕೇವಲ ವಿರೋಧಿಸಿದರೆ ಸಾಲದು, ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ನಾವು ಡೆಂಘೆ, ಮಲೇರಿಯಾ ಅಥವಾ ಕರೊನಾವನ್ನು ವಿರೋಧ ಮಾಡಬಾರದು, ಅವುಗಳನ್ನು ಶಾಶ್ವತವಾಗಿ ತೊಡೆದುಹಾಕಬೇಕು. ಅದರಂತೆ ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದು ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಇದನ್ನೂ ಓದಿ:ಏಷ್ಯಾಕಪ್​ ಹಾಕಿ ಫೈವ್ಸ್​ ಫೈನಲ್​ನಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿ ಪ್ರಶಸ್ತಿ ಗೆದ್ದ ಭಾರತ; ಏನಿದು ಹಾಕಿ ಫೈವ್ಸ್​?
ಈ ಹೇಳಿಕೆಯನ್ನು ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್​ ಮಾಳವೀಯ ಖಂಡಿಸಿದ್ದು, ಉದಯನಿಧಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಹೇಳಿಕೆಯ ಮೂಲಕ ಶೇ. 80 ರಷ್ಟು ಜನಸಂಖ್ಯೆಯ ನರಮೇಧಕ್ಕೆ ಉದಯನಿಧಿ ಅವರು ಕರೆ ನೀಡುತ್ತಿದ್ದಾರೆ ಎಂದಿದ್ದಾರೆ.
ಉದಯನಿಧಿ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಅವರ ಪುತ್ರ ಮತ್ತು ಡಿಎಂಕೆ ಸರ್ಕಾರದ ಸಚಿವರು. ಇವರು ಸನಾತನ ಧರ್ಮವನ್ನು ಮಲೇರಿಯಾ, ಡೆಂಘೆಗೆ ಹೋಲಿಕೆ ಮಾಡಿದ್ದಾರೆ. ಸನಾತನ ಧರ್ಮವನ್ನು ವಿರೋಧಿಸುವುದು ಮಾತ್ರವಲ್ಲದೆ, ಸಂಪೂರ್ಣ ನಿರ್ಮೂಲನೆ ಮಾಡಬೇಕೆಂಬುದು ಅವರ ಅಭಿಪ್ರಾಯವಾಗಿದೆ. ಅದರರ್ಥ ಭಾರತದಲ್ಲಿ ಸನಾತನ ಧರ್ಮವನ್ನು ಅನುಸರಿಸುವ ಶೇ. 80 ರಷ್ಟು ಮಂದಿಯ ನರಮೇಧಕ್ಕೆ ಉದಯನಿಧಿ ಕರೆ ನೀಡಿದ್ದಾರೆ. ಡಿಎಂಕೆ ಪಕ್ಷವು ಕಾಂಗ್ರೆಸ್​ನ ದೀರ್ಘಕಾಲ ಮಿತ್ರಪಕ್ಷವಾಗಿದೆ. ಮುಂಬೈನಲ್ಲಿ ನಡೆದ ಇಂಡಿಯಾ ವಿಪಕ್ಷ ಕೂಟದಲ್ಲಿ ಇದು ಒಪ್ಪಿಗೆಯಾಗಿದೆಯೇ? ಎಂದು ಅಮಿತ್​ ಮಾಳವೀಯ ಎಕ್ಷ್​ನಲ್ಲಿ ಪ್ರಶ್ನೆ ಮಾಡಿದ್ದಾರೆ.
Udhayanidhi Stalin, son of Tamilnadu CM MK Stalin, and a minister in the DMK Govt, has linked Sanatana Dharma to malaria and dengue… He is of the opinion that it must be eradicated and not merely opposed. In short, he is calling for genocide of 80% population of Bharat, who…pic.twitter.com/4G8TmdheFo
— Amit Malviya (@amitmalviya)September 2, 2023

ಅಮಿತ್​ ಮಾಳವೀಯ ಹೇಳಿಕೆಗೆ ಉದಯನಿಧಿ ಸ್ಪಷ್ಟನೆ ನೀಡಿದ್ದು, ಸನಾತನ ಧರ್ಮವನ್ನು ಅನುಸರಿಸುವ ಜನರ ನರಮೇಧಕ್ಕೆ ನಾನು ಕರೆಯನ್ನೇ ಕೊಟ್ಟಿಲ್ಲ. ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಸನಾತನ ಧರ್ಮ ಕಾರಣದಿಂದಾಗಿ ಬದಿಗೆ ಸರಿದಿರುವ ಬಡ ಸಮುದಾಯಗಳ ಪರವಾಗಿ ನಾನು ಮಾತನಾಡಿದ್ದೇನೆ. ನನ್ನ ಹೇಳಿಕೆಗೆ ಸಂಬಂಧಿಸಿದ ಯಾವುದೇ ಕಾನೂನು ಸವಾಲನ್ನು ನಾನು ಎದುರಿಸಲು ಸಿದ್ಧನಾಗಿದ್ದೇನೆ. ಡಿಎಂಕೆ ಸರ್ಕಾರವು ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಮತ್ತು ಸಮಾನತೆಯ ಸಮಾಜವನ್ನು ಸ್ಥಾಪಿಸಲು ಹೋರಾಡುತ್ತದೆ.
ಇದನ್ನೂ ಓದಿ:ಅತಿಯಾದ ಉಪ್ಪು ಸೇವನೆಯಿಂದ ಅಧಿಕ ರಕ್ತದೊತ್ತಡ ಮಾತ್ರವಲ್ಲ ಈ ಕಾಯಿಲೆಗಳೂ ಬರಬಹುದು!
I never called for the genocide of people who are following Sanatan Dharma. Sanatan Dharma is a principle that divides people in the name of caste and religion. Uprooting Sanatan Dharma is upholding humanity and human equality.
I stand firmly by every word I have spoken. I spoke…https://t.co/Q31uVNdZVb
— Udhay (@Udhaystalin)September 2, 2023

ಇಂತಹ ಸಾಮಾನ್ಯ ಕೇಸರಿ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಪೆರಿಯಾರ್, ಅಣ್ಣಾ ಮತ್ತು ಕಲೈಂಜರ್ ಅವರ ಅನುಯಾಯಿಗಳಾದ ನಾವು, ನಮ್ಮ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಮತ್ತು ಸಮಾನತೆಯ ಸಮಾಜವನ್ನು ಸ್ಥಾಪಿಸಲು ಶಾಶ್ವತವಾಗಿ ಹೋರಾಡುತ್ತೇವೆ ಎಂದಿದ್ದಾರೆ.(ಏಜೆನ್ಸೀಸ್​)
Bring it on. I am ready to face any legal challenge. We will not be cowed down by such usual saffron threats. We, the followers of Periyar, Anna, and Kalaignar, would fight forever to uphold social justice and establish an egalitarian society under the able guidance of our…https://t.co/nSkevWgCdW
— Udhay (@Udhaystalin)September 2, 2023

ಮಾಲ್ಡೀವ್ಸ್​ನಲ್ಲಿ ಮೈಚಳಿ ಬಿಟ್ಟು ಕ್ಯಾಮೆರಾಗೆ ಪೋಸ್​ ನೀಡಿದ ಸೋನು ಶ್ರೀನಿವಾಸ ಗೌಡ: ನೆಟ್ಟಿಗರು ಹೇಳಿದ್ದಿಷ್ಟು…

ಜಯದ ಒತ್ತಡದಲ್ಲಿ ಬಾಂಗ್ಲಾದೇಶ:ಶುಭಾರಂಭದ ನಿರೀಕ್ಷೆಯಲ್ಲಿ ಅಪ್ಘಾನಿಸ್ತಾನ

Sign in to your account
Please enter an answer in digits:twelve − 2 =
Remember me
