ಮುಂಬೈ:ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಬಾಲಿವುಡ್ ನಟ ಸಂದೀಪ್ ನಹರ್, ಹೆಂಡತಿ ಮತ್ತು ಅತ್ತೆಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡರೆ ? ಅಥವಾ ಮತ್ತಾವುದಾದರೂ ಕಾರಣವಿತ್ತೆ ? ಇದೀಗ ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಅಕ್ಷಯಕುಮಾರ್​ರೊಂದಿಗೆ ‘ಕೇಸರಿ’ ಚಿತ್ರದಲ್ಲಿ ಮತ್ತು ಖುದ್ದು ನಿಗೂಢವಾಗಿ ಪ್ರಾಣ ಕಳೆದುಕೊಂಡ ಸುಶಾಂತ್ ಸಿಂಗ್ ರಾಜಪೂತ್ ಅವರೊಂದಿಗೆ ‘ಎಂ.ಎಸ್.ಧೋಣಿ : ದ ಅನ್​ಟೋಲ್ಡ್ ಸ್ಟೋರಿ’ ಚಿತ್ರದಲ್ಲಿ ನಟಿಸಿದ್ದ ಸಂದೀಪ್ ನಹರ್, ಫೆಬ್ರವರಿ 15 ರ ರಾತ್ರಿ ಸಾವಪ್ಪಿದ್ದರು. ಮುಂಬೈನ ಗೋರೆಗಾವ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಸಂದೀಪ್, ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಸತ್ತಿರುವುದನ್ನು ಅವರ ಹೆಂಡತಿ ಕಂಚನ್ ಶರ್ಮ ಪೊಲೀಸರಿಗೆ ವರದಿ ಮಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಒಂದೆಡೆ ಹೆತ್ತಾಕೆ… ಇನ್ನೊಂದೆಡೆ ಜೀವದ ಗೆಳತಿ… ಇಬ್ಬರನ್ನೂ ಒಟ್ಟಿಗೆ ಆಯ್ಕೆ ಮಾಡುವಂತಿಲ್ಲ: ಏನು ಮಾಡಲಿ?
ಈಗ ನಹರ್​​ರ ತಂದೆ ಆತ್ಮಹತ್ಯೆ ಮಾಡಿಕೊಳ್ಳಲು ಅವರ ಹೆಂಡತಿ ಮತ್ತು ಅತ್ತೆಯು ನೀಡುತ್ತಿದ್ದ ಕಿರುಕುಳವೇ ಕಾರಣವಾಗಿದೆ ಎಂದು ದೂರು ನೀಡಿದ್ದಾರೆ. ಸೆಕ್ಷನ್ 306 ರಡಿ ಆತ್ಮಹತ್ಯೆ ಪ್ರಚೋಧನೆಯ ಕೇಸು ದಾಖಲಿಸಿದ್ದು, ತನಿಖೆ ಆರಂಭಿಸಲಾಗಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸಾಯುವ ಕೆಲವೇ ಕ್ಷಣಗಳ ಮುಂಚೆ ನಹರ್ ಫೇಸ್​ಬುಕ್​ನಲ್ಲಿ ದೀರ್ಘವಾದ ಪತ್ರ ಬರೆದು, ವೀಡಿಯೋ ಹಾಕಿ, ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಅವರ ಆಪ್ತರು ತಕ್ಷಣ ಅವರನ್ನು ಸಂಪರ್ಕಿಸಲು ಪ್ರಯತ್ನ ಪಟ್ಟರೂ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ.
“ಚೆನ್ನಾಗಿದ್ದ ನನ್ನ ಜೀವನ ಮದುವೆಯಿಂದಾಗಿ ಹಾಳಾಗಿಹೋಯಿತು… ನನ್ನ ಹೆಂಡತಿ ಕಂಚನ್ ಶರ್ಮ ಮತ್ತು ಅತ್ತೆ ವಿನು ಶರ್ಮ ನನ್ನನ್ನು ಅರ್ಥ ಮಾಡಿಕೊಳ್ಳದೆ ಹೋದರು… ಕಂಚನ್​ ನನ್ನೊಂದಿಗೆ ಯಾವಾಗಲೂ ಜಗಳ ಆಡುತ್ತಾಳೆ. ನನಗೆ ಮರ್ಯಾದೆ ಕೊಡಲ್ಲ… ನನ್ನ ನೋವಿನ ಬಗ್ಗೆ ಜನರ ಮುಂದೆ ಇಮೇಜ್ ಉಳಿಸಿಕೊಳ್ಳುವುದಕ್ಕೋಸ್ಕರ ಈ ಮುನ್ನ ಏನೂ ಹೇಳಿರಲಿಲ್ಲ… ಆದರೆ ಈಗ ಸಹಿಸಲಾಗುತ್ತಿಲ್ಲ…” ಎಂದೆಲ್ಲಾ ನಹರ್ ಬರೆದಿದ್ದರು ಎನ್ನಲಾಗಿದೆ.(ಏಜೆನ್ಸೀಸ್)
ಬಾಲಿವುಡ್ ನಟಿ ದಿಯ ಮಿರ್ಜಾ ಮದುವೆ ಮಾಡಿಸಿದ್ದು ಯಾರು ಗೊತ್ತಾ?!
ಮತ್ತೆ ಹಬ್ಬುತ್ತಿದೆ ಕರೊನಾ… ಮತ್ತೊಬ್ಬ ಸಚಿವರಲ್ಲಿ ಕರೊನಾ ಸೋಂಕು ಪತ್ತೆ !


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
