ಹೈದರಾಬಾದ್​:ಮರ ಬೆಳೆಸಿ ಕಾಡು ಉಳಿಸಿ ಎಂದು ಸರ್ಕಾರವೇ ಅಭಿಯಾನ ಮಾಡುತ್ತದೆ. ಆದರೆ, ಅದೇ ಸರ್ಕಾರ ಮೂಲ ಸೌಕರ್ಯ ಮತ್ತು ರಸ್ತೆ ಅಗಲೀಕರಣ ಹೆಸರಿನಲ್ಲಿ ಮರಗಳನ್ನು ಕಡಿಯುತ್ತದೆ. ಸಾಕಷ್ಟು ಮರಗಳ ಮಾರಣ ಹೋಮ ನಡೆದರೂ ಕೆಲವೊಮ್ಮೆ ಜನರು ನೋಡಿಯೂ ನೋಡದಂತೆ ಸುಮ್ಮನಿರುತ್ತಾರೆ. ಆದರೆ, ಇಲ್ಲೋಬ್ಬ ಬಾಲಕ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದು, ಜನರ ಜೀವನಾಡಿ ಮರ ಉಳಿಸಲು ತನ್ನ ಪ್ರಾಣವನ್ನು ಅರ್ಪಿಸಲು ಮುಂದಾಗಿದ್ದಾರೆ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ರಾಮಚಂದ್ರಪುರಂ ಪಟ್ಟಣದ ಕಾಕತಿಯನಗರದ ಅನಿರುದ್ಧ್ ಹೆಸರಿನ 12 ವರ್ಷದ ಬಾಲಕ ಜಿಲ್ಲೆಯಲ್ಲಿ ಇದೀಗ ಭಾರಿ ಸುದ್ದಿಯಾಗಿದ್ದಾನೆ. ಬಾಲಕ ವಾಸವಿರುವ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಮಾಡಲು ಗುತ್ತಿಗೆದಾರರೊಬ್ಬರು ಮರ ಕತ್ತರಿಸಲು ಬಂದಿದ್ದರು. ಕೆಲವೊಂದು ಮರಗಳನ್ನು ಕಟಾವು ಕೂಡ ಮಾಡಿದ್ದರು. ಇದೆಲ್ಲವನ್ನು ಗಮನಿಸಿದ ಅನಿರುದ್ಧ್, ಮರ ಕಡಿಯುವುದನ್ನು ತಡೆಯಲು ಮರವನ್ನೇರಿ, ಸುಮಾರು 7 ಗಂಟೆಗಳವರೆಗೆ ಊಟ, ನೀರು ಸೇವನೆ ಮಾಡದೆ ಪ್ರತಿಭಟನೆ ನಡೆಸಿದನು.

ನನ್ನ ಜೀವ ಹೋದರು ಸಹ ನಾನು ಮರವನ್ನು ಬಿಟ್ಟು ಇಳಿಯುವುದಿಲ್ಲ. ಅಧಿಕಾರಿಗಳು ಇಲ್ಲಿಗೆ ಬಂದು ಮರ ಕತ್ತರಿಸುವುದಿಲ್ಲ ಎಂದು ಆರ್ಡರ್​ ಕಾಪಿ ನೀಡಿದರೆ ಮಾತ್ರ ನಾನು ಮರದಿಂದ ಕೆಳಗೆ ಇಳಿಯುತ್ತೇನೆ. ಅಲ್ಲಿಯವರೆಗೆ ನೀವು ಏನೇ ಪ್ರಯತ್ನ ಮಾಡಿದರೂ ನಾನಂತೂ ಮರದಿಂದ ಕೆಳಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದನು.
ಅಂದಹಾಗೆ ಅನಿರುದ್ಧ್​ ತಂದೆ ಓರ್ವ ರಿಯಲ್​​ ಎಸ್ಟೇಟ್​ ಉದ್ಯಮಿ ಮತ್ತು ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅನಿರುದ್ಧ್​, ಸ್ಧಾನಿಕಾ ನಾರಾಯಣ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಪ್ರಾಣಿ ಮತ್ತು ಸಸ್ಯಗಳ ಮೇಲೆ ಅಗಾಧವಾದ ಪ್ರೀತಿ ಹಾಗೂ ಕಾಳಜಿ ಹೊಂದಿರುವ ಅನಿರುದ್ಧ್​, ಗಿಡಗಳನ್ನು ನೆಡುವುದು ಪರಿಸರಕ್ಕೆ ಒಳತೇ ಹೊರತು ಅವುಗಳನ್ನು ನಾಶ ಮಾಡುವುದಲ್ಲ ಎಂದು ಪರಿಸರ ಕಾಳಜಿಯ ಪಾಠ ಮಾಡಿದ್ದಾನೆ. ಇದೀಗ ಅನಿರುದ್ಧ್​ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.(ಏಜೆನ್ಸೀಸ್​)
‘ಕರೊನಾ ಬಗ್ಗೆ ಜಾಗರೂಕರಾಗಿರಿ, ಭಯಪಡುವ ಅಗತ್ಯವಿಲ್ಲ’: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ

ಬುಧವಾರವೂ ಮುಂದುವರಿದ ಸಂಸದರ ಅಮಾನತು ಕ್ರಮ: ಸಸ್ಪೆಂಡ್​ ಆದ ಎಂಪಿಗಳ ಸಂಖ್ಯೆ ಎಷ್ಟು ಗೊತ್ತೆ?

‘ನಮಗೆಷ್ಟು ಸಮಯವಿದೆ ಯಾರಿಗೆ ಗೊತ್ತು…’ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಸ್ಮೃತಿ ಇರಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 14 =
Remember me
