ದುಬೈ:ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಮಾಡುವ ಕೆಲವೊಂದು ಪೋಸ್ಟ್​ಗಳು ತುಂಬಾ ನಿಗೂಢವಾಗಿದ್ದು, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್​​ ಮಲಿಕ್ ಜತೆಗಿನ ತಮ್ಮ ವೈವಾಹಿಕ ಜೀವನದ ಕುರಿತು ನಾನಾ ಚರ್ಚೆಗಳನ್ನು ಹುಟ್ಟುಹಾಕುತ್ತಿವೆ. ಸಾನಿಯಾ, ಇದೀಗ ಮತ್ತೊಂದು ಪೋಸ್ಟ್​ ಮಾಡಿದ್ದು, ಮತ್ತೊಮ್ಮೆ ಮತ್ತೊಮ್ಮೆ ಸ್ಟಾರ್​ ದಂಪತಿಯ ಡಿವೋರ್ಸ್​ ವಿಚಾರ ಸದ್ದು ಮಾಡುತ್ತಿದೆ.
ತಮ್ಮ ಮಗ ಇಜಾನ್‌ ಮಿರ್ಜಾ ಮಲ್ಲಿಕ್​ನ 5ನೇ ವರ್ಷದ ಹುಟ್ಟುಹಬ್ಬವನ್ನು ಪತಿ ಶೋಹಿಬ್​ ಮಲಿಕ್​ ಜತೆ ದುಬೈನಲ್ಲಿ ಅ.29ರಂದು ಆಚರಣೆ ಮಾಡಿದ್ದಾರೆ. ಇದಾದ ಒಂದು ದಿನದ ಬಳಿಕ ಅಂದರೆ, ಅ. 30ರಂದು ಸಾನಿಯಾ, ತಮ್ಮ ಇನ್​ಸ್ಟಾಗ್ರಾಂನಲ್ಲಿ ನಿಗೂಢ ಪೋಸ್ಟ್​ ಒಂದನ್ನು ಶೇರ್​ ಮಾಡಿಕೊಂಡಿದ್ದು, ನಾನಾ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಏನಿದೆ?ಪ್ರತಿಯೊಬ್ಬ ಬಲವಾದ, ಸ್ವತಂತ್ರ ಮಹಿಳೆಯ ಹಿಂದೆ ಒಬ್ಬ ಪುಟ್ಟ ಹುಡುಗಿ ನಿಂತಿದ್ದಾಳೆ. ಅವಳು ಇತರರನ್ನು ಅವಲಂಬಿಸದೆ ಏಕಾಂಗಿಯಾಗಿ ನಿಲ್ಲಲು ಕಲಿಯಬೇಕಾಗಿತ್ತು ಎಂದು ಸಾನಿಯಾ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಬರ್ತಡೇ ಆಚರಣೆಗೆ ಸಂಬಂಧಿಸಿದ ಕೆಲವೊಂದು ಫೋಟೋಗಳನ್ನು ಸಹ ಸಾನಿಯಾ ಶೇರ್​ ಮಾಡಿಕೊಂಡಿದ್ದಾರೆ. ಕೇಕ್ ಕತ್ತರಿಸುವ ಸಮಾರಂಭದಲ್ಲಿ ಅವಳು ತನ್ನ ಮಗನ ಜೊತೆ ಪೋಸ್ ನೀಡುತ್ತಿರುವುದನ್ನು ಅದು ತೋರಿಸಿದೆ. ಅಲ್ಲದೆ, ಫೋಟೋಗಳಲ್ಲಿ ಸಾನಿಯಾ ಅವರ ಸಹೋದರಿ ಅನಮ್ ಮಿರ್ಜಾ ಅವರ ಪುತ್ರಿ ದುವಾ ಕೂಡ ಕಾಣಿಸಿಕೊಂಡಿದ್ದಾರೆ.

ಇದೀಗ ಸಾನಿಯಾ ಮಿರ್ಜಾರ ಇನ್​ಸ್ಟಾಗ್ರಾಂ ಸ್ಟೋರಿ ನಾನಾ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಬಲವಾದ ಮತ್ತು ಸ್ವತಂತ್ರ ಮಹಿಳೆ ಹಾಗೂ ಏಕಾಂಗಿಯಾಗಿ ನಿಲ್ಲುವುದನ್ನು ಕಲಿಯಬೇಕಾಗಿತ್ತು ಎಂದು ಹೇಳುವುದನ್ನು ನೋಡಿದರೆ, ಶೋಯಿಬ್​ ಮತ್ತು ಸಾನಿಯಾ ನಡುವೆ ಎಲ್ಲವೂ ಸರಿಯಿಲ್ಲ ಎಂದು ಕಾಣುತ್ತಿದೆ. ಪ್ರತಿ ಬಾರಿಯೂ ಸಾನಿಯಾ ಮಹಿಳೆಯರ ಹಕ್ಕು, ಶಕ್ತಿ ಮತ್ತು ಸಾಮರ್ಥ್ಯಗಳ ಬಗ್ಗೆ ಮಾತನಾಡುವುದನ್ನು ನೋಡಿದರೆ, ದಂಪತಿ ನಡುವೆ ಬಿರುಕು ಮೂಡಿರುವುದು ನಿಜವೆಂದು ಹೇಳಲಾಗುತ್ತಿದೆ.
ಅಂದಹಾಗೆ ಸಾನಿಯಾ ಮತ್ತು ಶೋಯಿಬ್​ 2018ರಲ್ಲಿ ಮಗ ಇಜಾನ್​ನನ್ನು ಸ್ವಾಗತಿಸಿದರು. ದುಬೈನಲ್ಲಿ ನಡೆದ ಹುಟ್ಟುಹಬ್ಬದ ಸಂಭ್ರಮದ ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಸಾನಿಯಾ, ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ನಮ್ಮ ಜೀವನದ ಪ್ರಕಾಶಮಾನವಾದ ನಕ್ಷತ್ರಕ್ಕೆ ಜನ್ಮದಿನದ ಶುಭಾಶಯಗಳು. ನನ್ನ ಸುತ್ತಲೂ ಎಷ್ಟೇ ಕತ್ತಲಿದ್ದರೂ, ನಿನ್ನ ನಗು ಎಲ್ಲವನ್ನೂ ಉತ್ತಮಗೊಳಿಸುತ್ತದೆ. ನಿನ್ನೊಂದಿಗೆ ನನ್ನನ್ನು ಆಶೀರ್ವದಿಸಿದ್ದಕ್ಕಾಗಿ ನಾನು ಅಲ್ಲಾಹನಿಗೆ ತುಂಬಾ ಕೃತಜ್ಞಳಾಗಿದ್ದೇನೆ. ಬೇಷರತ್ತಾದ ಪ್ರೀತಿಯ ನಿಜವಾದ ಅರ್ಥವನ್ನು ನನಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು. ನೀನು ನನ್ನ ಹೃದಯವನ್ನು ಎಂದೆಂದಿಗೂ ಹೊಂದಿದ್ದೀಯನನ್ನ ಮಗು ಎಂದು ಸಾನಿಯಾ ಪೋಸ್ಟ್​ ಮಾಡಿದ್ದಾರೆ.

ಶೋಯಿಬ್​ ಸಹ ಇಜಾನ್​ ಜತೆಗಿನ ಮತ್ತು ಸಾನಿಯಾ ಹಿಂದೆ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಹ್ಯಾಪಿ ಬರ್ತಡೇ ಬೇಟಾ, ಬಾಬ ಲವ್ಸ್​ ಯು ಎಂದು ಬರೆದುಕೊಂಡಿದ್ದಾರೆ. ಆದರೆ, ಬರ್ತಡೇ ಫೋಟೋಗಳಲ್ಲೂ ಸಾನಿಯಾ ಮತ್ತು ಶೋಯಿಬ್​ ಅಂತರ ಕಾಯ್ದುಕೊಂಡಂತೆ ಕಾಣುತ್ತಿದೆ.

ಡಿವೋರ್ಸ್​ ವದಂತಿ ಆರಂಭವಾಗಿದ್ದು ಯಾವಾಗ?ಕಳೆದ ವರ್ಷ ನವೆಂಬರ್​ 11ರಂದು ಸಾನಿಯಾ ಮಿರ್ಜಾ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್​ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಜಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್​​ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು.
ಇನ್​ಸ್ಟಾಗ್ರಾಂ ಬಯೋಕೆಲವು ತಿಂಗಳುಗಳ ಹಿಂದೆ ಶೋಯಿಬ್​ ಮಲಿಕ್​ ಅವರ ಇನ್​ಸ್ಟಾಗ್ರಾಂ ಬಯೋದಲ್ಲಾಗಿರುವ ಬದಲಾವಣೆ ಸಹ ಡಿವೋರ್ಸ್​ ವದಂತಿಗೆ ಪುಷ್ಠಿ ನೀಡಿತು ಮತ್ತು ಡಿವೋರ್ಸ್​ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿತ್ತು. ಈ ಮೊದಲು ಬಯೋದಲ್ಲಿ ಸೂಪರ್​ವುಮ್ಯನ್​ ಸಾನಿಯಾ ಮಿರ್ಜಾರ ಪತಿ ಎಂದು ಶೋಯಿಬ್​ ಬರೆದುಕೊಂಡಿದ್ದರು. ಆದರೆ, ಅದನ್ನು ತೆಗೆದಿದ್ದಾರೆ. ಹೀಗಾಗಿ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿರುವುದು ಖಚಿತ ಎನ್ನಲಾಗಿದೆ.
ಬೇರೆ ಬೇರೆ ವಾಸಮೂಲಗಳ ಪ್ರಕಾರ ಸಾನಿಯಾ ಮತ್ತು ಶೋಯಿಬ್​​ ಬೇರೆ ಬೇರೆ ವಾಸ ಮಾಡುತ್ತಿದ್ದು, ತಮ್ಮ ಮಗ ಇಜಾನ್​ಗೆ ಸಹ ಪಾಲಕರಾಗಿದ್ದಾರೆ ಎಂದು ಹೇಳಲಾಗಿದೆ. ಡಿವೋರ್ಸ್​ ಬಗ್ಗೆ ಸಾಕಷ್ಟು ವದಂತಿಗಳು ಮುನ್ನೆಲೆಗೆ ಬಂದರೂ ಈ ಬಗ್ಗೆ ಅಧಿಕೃತವಾಗಿ ಇಬ್ಬರಿಂದಲೂ ಈವರೆಗೂ ಯಾವುದೇ ಹೇಳಿಕೆ ಬಂದಿಲ್ಲ. ಅಭಿಮಾನಿಗಳು ಕೂಡ ಇಬ್ಬರ ಹೇಳಿಕೆಗಾಗಿ ಕಾಯುತ್ತಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ನಿಗೂಢ ಪೋಸ್ಟ್​ ಹೊರತಾಗಿ ಯಾವುದೇ ಬೆಳವಣಿಗೆ ಕಾಣುತ್ತಿಲ್ಲ.
ಅಂದಹಾಗೆ ಸಾನಿಯಾ ಮತ್ತು ಮಲಿಕ್​, ಕ್ರೀಡಾಲೋಕದ ಅತ್ಯಂತ ಸುಂದರವಾದ ಜೋಡಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಂಪ್ರದಾಯಿಕ ಎದುರಾಳಿ ಆಟಗಾರರಿಬ್ಬರ ಪ್ರೇಮವಿವಾಹವು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟರೂ ಎಲ್ಲ ವಿವಾದಗಳನ್ನು ಬದಿಗೊತ್ತಿ 2010ರಲ್ಲಿ ಇಬ್ಬರೂ ಮದುವೆ ಆಗಿದ್ದಾರೆ. ಆದರೆ, ಇದೀಗ ಡಿವೋರ್ಸ್​ ವಿಚಾರ ಹೆಚ್ಚು ಚರ್ಚೆಯಾಗುತ್ತಿರುವುದು ಅಭಿಮಾನಿಗಳಿಗೆ ಬಹಳ ನಿರಾಸೆ ಉಂಟು ಮಾಡುತ್ತಿದೆ.(ಏಜೆನ್ಸೀಸ್​)
ನಾನು ಮುಗಿಸಿದ್ದೇನೆ! ಡಿವೋರ್ಸ್​ ವದಂತಿಗೆ ಮತ್ತೆ ಪುಷ್ಠಿ ನೀಡಿದ ಸಾನಿಯಾ ಮಿರ್ಜಾ ನಿಗೂಢ ಪೋಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
