ಮುಂಬೈ:ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರ ಮಗ ಇಜಾನ್ ತನ್ನ ತಂದೆಯ ಮೂರನೇ ಮದುವೆಯ ನಂತರ ಶಾಲೆಯಲ್ಲಿ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ ಎಂದು ನ್ಯಾಷನಲ್​ ಮೀಡಿಯಾಗಳು ಸುದ್ದಿ ಮಾಡಿವೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಸಾಮಾಜಿಕ ಮಾಧ್ಯಮದಲ್ಲಿ ಸಾನಿಯಾ ಮಿರ್ಜಾರಿಂದ ವಿಚ್ಛೇದನವನ್ನು ನೀಡಿದ ಬೆನ್ನಲ್ಲೇ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದ ಫೋಟೋ ಹಾಕಿದ್ದರು. ಬಳಿಕ ಇವರಿಬ್ಬರ ವಿಚ್ಚೇದನ ಸಾಕಷ್ಟು ಸುದ್ದಿಯಾಗುತ್ತಲೇ ಇದೆ.
ಇತ್ತೀಚಿನ ವರದಿಗಳ ಪ್ರಕಾರ, ಸಾನಿಯಾ ಮತ್ತು ಶೋಯೆಬ್ ಅವರ ಮಗ ಇಜಾನ್ ತನ್ನ ತಂದೆಯ ಮೂರನೇ ಮದುವೆಯ ನಂತರ ಶಾಲೆಯಲ್ಲಿ ಬೆದರಿಸುವಿಕೆಯನ್ನು ಎದುರಿಸುತ್ತಿದ್ದಾನೆ, ಆತ ಶಾಲೆಗೆ ಹೋಗಲೇ ಒಪ್ಪುತ್ತಿಲ್ಲವಂತೆ. ತಂದೆಯ ಈ ಕೃತ್ಯ ಸಾನಿಯಾ ಪುತ್ರ 5 ವರ್ಷದ ಇಝಾನ್ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮ ಬೀರುತ್ತಿದೆಯಂತೆ ಎಂದು ವರದಿಯಾಗಿದೆ.
ಪಾಕಿಸ್ತಾನಿ ಪತ್ರಕರ್ತರೊಬ್ಬರು ಸಾನಿಯಾ ಅವರು ತಮ್ಮ ಮಗನ ಮಾನಸಿಕ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಅವರ ತಂದೆಯ ಮೂರನೇ ಮದುವೆಯ ಸುತ್ತಲಿನ ಸುದ್ದಿಯು ಅವರಿಗೆ ಭಾವನಾತ್ಮಕ ಯಾತನೆ ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸಾನಿಯಾ ಶೋಯೆಬ್ ದಂಪತಿ ದುಬೈನಲ್ಲಿ ವಾಸವಾಗಿದ್ದರು. ವಿಚ್ಚೇದನ ನಂತರ ಸಾನಿಯಾ ಹೈದರಾಬಾದ್‌ನ ತವರುಮನೆಯಲ್ಲಿದ್ದಾರೆ. ಮಗನನ್ನು ಕೂಡಾ ಇಲ್ಲಿಯ ಶಾಲೆಗೆ ಸೇರಿಸಿದ್ದಾರೆ. ಆದರೆ, ಶಾಲೆಯಲ್ಲಿ ಅವನ ಸಹಪಾಠಿಗಳು ಮತ್ತು ಇತರರು ಅವನನ್ನು ತಂದೆಯ ಮದುವೆಯ ಬಗ್ಗೆ ಕೇಳುತ್ತಲೇ ಇರುತ್ತಾರೆ. ಹಾಗೂ ಕೆಲವರು ಟೀಸ್ ಮಾಡುತ್ತಾರೆ. ಈ ಕಾರಣದಿಂದ ಆತ ಇನ್ನು ಮುಂದೆ ಶಾಲೆಗೆ ಹೋಗುವುದಿಲ್ಲ ಎಂದು ಹಟ ಹಿಡಿದಿದ್ದಾನಂತೆ.
ಭಾರತದ ಟೆನಿಸ್ ತಾರೆ ಸಾನಿಯಾ ಶೋಯೆಬ್‌ ವಿವಾಹವಾದ 8 ವರ್ಷಗಳ ಬಳಿಕ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಂಪತಿಗೆ 2018ರ ಅಕ್ಟೋಬರ್ 30ರಂದು ಪುತ್ರ ಇಝಾನ್‌ ಜನಿಸಿದ್ದ. ಸಾನಿಯಾ ಆಗಾಗ ಮಗನೊಂದಿಗಿನ ಚಿತ್ರಗಳನ್ನು ಹಂಚಿಕೊಳ್ಳುತ್ತಾ, ಈತ ತಮ್ಮ ಜೀವನದ ಲೈಫ್‌ಲೈನ್, ಕಷ್ಟದ ಕತ್ತಲಲ್ಲಿ ಕಾಣುವ ಬೆಳಕು ಎಂದೆಲ್ಲ ಕ್ಯಾಪ್ಶನ್ ಕೊಡುತ್ತಿರುತ್ತಾರೆ.
ದಯವಿಟ್ಟು ಬಾಳೆಹಣ್ಣಿನ ಸಿಪ್ಪೆ ಬಿಸಾಡಬೇಡಿ.. ಹೀಗೆ ಮಾಡಿ ನಂತರ ಅದ್ಬುತ ನೋಡಿ..

ಪತ್ನಿಯ ನಗ್ನ ಬೆನ್ನಿನ ಫೋಟೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಶೇರ್​ ಮಾಡಿದ ಖ್ಯಾತ ನಟ

ಈ ಊರಲ್ಲಿ ಹೆಂಗಸರು ಬಟ್ಟೆಯನ್ನೇ ಹಾಕುವುದಿಲ್ಲ!; ನೀವು ಈ ಊರಿಗೆ ಹೋದ್ರು ಬಟ್ಟೆ ಇಲ್ಲದೆನೆ ಬದುಕಬೇಕು..


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 9 =
Remember me
