ಮಹಾರಾಷ್ಟ್ರ:ಪಕ್ಷ ವಿರೋಧಿ ಚುಟವಟಿಕೆಗಳಲ್ಲಿ ಸಂಜಯ್​ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್​ ಎರಡು ದಿನಗಳ ಹಿಂದೆ ಹೈಕಮಾಂಡ್​ಗೆ ದೂರು ನೀಡಿತ್ತು. ಇದರ ಅನ್ವಯ ನಿನ್ನೆ ರಾತ್ರಿ ಕಾಂಗ್ರೆಸ್​ನ ಹಲವು ಮುಖಂಡರ ಜತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಇದೀಗ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದೆ.
ಇದನ್ನೂ ಓದಿ:Nisha Yogeshwar; ಕಾಂಗ್ರೆಸ್​ ಸೇರ್ಪಡೆ ವದಂತಿ ಬಗ್ಗೆ ನಿಶಾ ಯೋಗೇಶ್ವರ್​ ಸ್ಪಷ್ಟನೆ!
ಈ ಬೆನ್ನಲ್ಲೇ ಮಾತನಾಡಿದ ಸಂಜಯ್ ನಿರುಪಮ್, “ಹಾಗೇನು ಇಲ್ಲ. ನನ್ನ ರಾಜೀನಾಮೆ ಪತ್ರವನ್ನು ಪಡೆದ ನಂತರ ಗ್ರ್ಯಾಂಡ್ ಓಲ್ಡ್ ಪಕ್ಷವು ನನ್ನನ್ನು ಉಚ್ಚಾಟಿಸಿದೆ” ಎಂದು ಹೇಳಿದರು. ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಪ್ರತಿನಿಧಿಸಿದ್ದ ಮಾಜಿ ಸಂಸದ ನಿರುಪಮ್​, ಮುಂಬರುವ ಲೋಕಸಭೆ ಚುನಾವಣೆಗೆ ಶಿವಸೇನೆಯೊಂದಿಗೆ (ಯುಬಿಟಿ) ಸೀಟು ಹಂಚಿಕೆಯ ವಿಷಯದಲ್ಲಿ ಪಕ್ಷದ ನಿಲುವನ್ನು ಪ್ರಶ್ನಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಪಕ್ಷದಿಂದ ಹೊರಹಾಕಲಾಗಿದೆ.
“ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನನ್ನ ರಾಜೀನಾಮೆ ಪತ್ರ ಸಲ್ಲಿಸಿದೆ. ಕಳೆದ ರಾತ್ರಿ ನನ್ನ ರಾಜೀನಾಮೆ ಪತ್ರವನ್ನು ಪಕ್ಷವು ಸ್ವೀಕರಿಸಿದ ತಕ್ಷಣ, ಅವರು ನನ್ನನ್ನು ಉಚ್ಚಾಟಿಸಲು ನಿರ್ಧರಿಸಿದ್ದಾರೆಂದು ತೋರುತ್ತಿದೆ. ಇಂದು (ಏ.04) ಬೆಳಗ್ಗೆ ವಿವರವಾದ ಹೇಳಿಕೆ ನೀಡುತ್ತೇನೆ” ಎಂದು ನಿರುಪಮ್ ಹೇಳಿದ್ದಾರೆ.
ಇದನ್ನೂ ಓದಿ:ತೈವಾನ್‌ನಲ್ಲಿ ಪ್ರಬಲ ಭೂಕಂಪನ; 9 ಜನರು ದುರ್ಮರಣ, 50 ಮಂದಿ ನಾಪತ್ತೆ! ಇಬ್ಬರು ಭಾರತೀಯರು ಕಾಣೆ
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮುಂಬೈ ವಾಯುವ್ಯ ಕ್ಷೇತ್ರ ಸೇರಿದಂತೆ ಮುಂಬೈನ ಆರು ಲೋಕಸಭಾ ಕ್ಷೇತ್ರಗಳ ಪೈಕಿ ನಾಲ್ಕು ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್‌ನ ರಾಜ್ಯ ನಾಯಕತ್ವದ ವಿರುದ್ಧ ಸಂಜಯ್​ ವಾಗ್ದಾಳಿ ನಡೆಸಿದ್ದರು. ತನ್ನನ್ನು ಕೈಬಿಟ್ಟು ಶಿವಸೇನೆ ಅಭ್ಯರ್ಥಿಗೆ ಮಣೆ ಹಾಕಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು,(ಏಜೆನ್ಸೀಸ್).
2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + one =
Remember me
