ಮುಂಬೈ:ಕರೊನಾ ವೈರಸ್​ ದೇಶದ ಜನರಿಗೆ ಯಮರೂಪಿಯಾಗಿ ಕಾಡಲಾರಂಭಿಸಿದೆ. ಆದರೆ ಮಧ್ಯಪ್ರದೇಶದ ಕಾಂಗ್ರೆಸ್​ಗೆ ಮಾತ್ರ ಕರೊನಾಕ್ಕಿಂತ ಭಯಾನಕವಾಗಿ ಬಿಜೆಪಿ ಕಾಡಲಾಂಭಿಸಿದೆ. ಕಾಂಗ್ರೆಸ್​ನ ಮಾಜಿ ಕೇಂದ್ರ ಸಚಿವಾ ಜ್ಯೋತಿರಾದಿತ್ಯ ಸಿಂಧ್ಯಾ ಸೇರಿದಂತೆ ಒಟ್ಟು 22 ಶಾಸಕರು ಕೈಗೆ ಕೈ ಕೊಟ್ಟು ಪಕ್ಷದಿಂದ ಹೊರನಡೆದಿದ್ದಾರೆ. ಶಾಸಕರ ಈ ನಡೆಗೆ ಅಕ್ಕ ಪಕ್ಕದ ರಾಜ್ಯಗಳಲ್ಲಿಯೂ ಸಹ ಭಯ ಹುಟ್ಟಿದ್ದು, ನೆರೆ ರಾಜ್ಯಗಳು ತಮ್ಮ ಸರ್ಕಾರದ ಬಲವನ್ನು ಸಮರ್ಥಿಸಿಕೊಳ್ಳಲಾರಂಭಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಪಕ್ಷಗಳ ಮೈತ್ರಿ ಆಡಳಿತದಲ್ಲಿದೆ. ತಮ್ಮ ಮೈತ್ರಿ ಸರ್ಕಾರದ ಬಲದ ಕುರಿತಾಗಿ ಇಂದು ಶಿವಸೇನೆಯ ಮುಖಂಡ ಸಂಜಯ್​ ರಾವತ್​ ಮಾತನಾಡಿದ್ದಾರೆ. ಮಧ್ಯಪ್ರದೇಶದ ವೈರಸ್​ ಮಹಾರಾಷ್ಟ್ರಕ್ಕೆ ಬರಲು ಸಾಧ್ಯವಿಲ್ಲ. ಇಲ್ಲಿನ ಶಕ್ತಿ ವಿಭಿನ್ನವಾಗಿದೆ ಎಂದು ಅವರು ತಿಳಿಸಿದ್ದಾರೆ.
ನೂರು ದಿನಗಳ ಹಿಂದೆ ಇದೇ ರೀತಿಯ ತಂತ್ರ ಇಲ್ಲಿ ನಡೆದಿದ್ದು, ಆ ತಂತ್ರ ವಿಫಲವಾಗಿದೆ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಾಚರಣೆಗಳು ನಮ್ಮನ್ನು ಉಳಿಸಿದೆ ಎಂದು ಅವರು ಟ್ವಿಟ್ಟರ್​ನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್​ನ ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಸೋಮವಾರ ರಾತ್ರಿ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಮಂಗಳವಾರದಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಮಾಜಿ ಸಚಿವನ ರಾಜೀನಾಮೆಯ ಬೆನ್ನಲ್ಲೇ 21 ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.(ಏಜೆನ್ಸೀಸ್)
महाराष्ट्राची 'पाॅवर' वेगळी आहे. एक ऑपरेशन शंभर दिवसापूर्वी फसले आहे.त्यानंतर महाविकास आघाडीने बायपास ऑपरेशन करून महाराष्ट्र वाचवला.मधयप्रदेशचा वायरस महाराष्ट्रत घुसणार नाही. चिंता नसावी.जय महाराष्ट्र
— Sanjay Raut (@rautsanjay61)March 11, 2020

‘ಕೈ’ ಬಿಡಿಸಿಕೊಂಡು ಹೋಗಿ ‘ಕಮಲ’ ಹಿಡಿದ ಜ್ಯೋತಿರಾದಿತ್ಯ ಸಿಂಧಿಯಾ…ಅಂತೂ ಬಿಜೆಪಿಗೆ ಸೇರ್ಪಡೆಯಾಗಿಯೇ ಬಿಟ್ಟರು…

ಪ್ರಪಂಚದ ಕೊನೆಯ ಬಿಳಿ ಜಿರಾಫೆಯ ಕುಟುಂಬವೀಗ ಬರಿದು: ಕಳ್ಳ ಬೇಟೆಗಾರರಿಗೆ ಬಲಿಯಾದ ತಾಯಿ-ಮಗು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + two =
Remember me
