ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ರಾಜಕೀಯ ಶುರುವಾಗಿದೆ. ಈ ಘಟನೆಯ ಬಗ್ಗೆ ಉದ್ಧವ್ ಸೇನೆಯ ನಾಯಕ ಸಂಜಯ್ ರಾವತ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ:VIDEO | ಗ್ರೌಂಡ್​​ನಲ್ಲೇ ಅಭಿಮಾನಿಯೊಂದಿಗೆ ಜಗಳಕ್ಕಿಳಿದ ಪಾಕ್​​ ಬ್ಯಾಟ್ಸ್​ಮನ್​​ !
ಕೆಲವರು ಮತ ಹಾಕುತ್ತಾರೆ. ಕೆಲವರು ಕಪಾಳಮೋಕ್ಷ ಮಾಡುತ್ತಾರೆ. ನಿಜವಾಗಿಯೂ ಏನಾಯಿತು ಎಂದು ನನಗೆ ತಿಳಿದಿಲ್ಲ. ನಾನು ಈ ವಿಷಯವನ್ನು ಪರಿಶೀಲಿಸಿ ನಂತರ ಮಾತನಾಡುತ್ತೇನೆ. ಅದರೂ ಈ ರೀತಿ ಕಾನೂನನ್ನು ಒಬ್ಬರು ಕೈಗೆ ತೆಗೆದುಕೊಳ್ಳಬಾರದು ಎಂದರು.
ರೈತ ಪ್ರತಿಭಟನೆ ವೇಳೆ ಕಂಗನಾ ರಣಾವತ್ ಮುಂಬೈಯನ್ನು ಪಾಕಿಸ್ತಾನ ಎಂದು ಕರೆದಿದ್ದರು ಎನ್ನಲಾಗಿದೆ. ರೈತರ ಪ್ರತಿಭಟನೆ ಬಗ್ಗೆ ಕಂಗನಾ ಅವರು ಮಾಡಿದ್ದ ಕಾಮೆಂಟ್​ನಿಂದ ನೋವಾಗಿದೆ ಎಂದು ಕಪಾಳಮೋಕ್ಷ ಮಾಡಿದ್ದ ಸಿಐಎಸ್​ಎಫ್​ ಮಹಿಳಾ ಕಾನ್​ಸ್ಟೇಬಲ್​​ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್​ ರಾವತ್​, ರೈತರ ಪ್ರತಿಭಟನೆಯಲ್ಲಿ ಕುಳಿತಿದ್ದ ಹೆಣ್ಣುಮಕ್ಕಳು ಮತ್ತು ಹೆಂಗಸರು ಕೂಡ ಭಾರತಮಾತೆಯ ಸಾಕಾರರೂಪವಾಗಿದ್ದರು. ಭಾರತಮಾತೆಯೂ ತಾಯಿಯೇ.. ನೀವು ಭಾರತಮಾತೆಯನ್ನು ಅಪಮಾನಿಸಿದರೆ ನೀವು ಅದರ ಬಗ್ಗೆ ಕೇಳಬೇಕು. ಆ ಮಹಿಳೆ ತಾಯಿಗಾಗಿ ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ. ರೈತರ ಚಳವಳಿಯ ಬಗ್ಗೆ ಜನರು ಇನ್ನೂ ಹೇಗೆ ಕೋಪಗೊಂಡಿದ್ದಾರೆ ಎಂಬುದನ್ನು ಈ ಘಟನೆ ತೋರಿಸುತ್ತದೆ. ಆದರೂ ಸಂಸದರ ಮೇಲೆ ಕೈ ಎತ್ತಬಾರದು ಎಂದಿದ್ದಾರೆ. (ಏಜೆನ್ಸೀಸ್​​)
ಈ ವಾರಾಂತ್ಯ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ ಬ್ಲಾಕ್​ಬಸ್ಟರ್​ ಸಿನಿಮಾ-ವೆಬ್​ ಸರಣಿ: ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − one =
Remember me
