ಮುಂಬೈ:ವೀರ ಸಾವರ್ಕರ್​ ಅವರಿಗೆ ಭಾರತ ರತ್ನ ನೀಡಲು ವಿರೋಧಿಸುವವರನ್ನು ಅಂಡಮಾನ್​ ಜೈಲಿನಲ್ಲಿ ಎರಡು ದಿನ ಇಡಬೇಕು ಎಂದು ಶಿವಸೇನಾ ಮುಖಂಡ ಸಂಜಯ್​ ರಾವತ್​ ಕಿಡಿ ಕಾರಿದ್ದಾರೆ.
ಸಾವರ್ಕರ್​ ಅವರನ್ನು ವಿರೋಧಿಸುವವರು ಯಾವ ಪಕ್ಷದವರೇ ಆಗಲಿ, ಯಾವ ಸಿದ್ಧಾಂತದವರೇ ಆಗಲಿ ಅವರನ್ನು ಸಾವರ್ಕರ್​ ಅವರನ್ನು ಬ್ರಿಟಿಷರು ಇರಿಸಿದ್ದ ಅಂಡಮಾನ್​ ಜೈಲಿನಲ್ಲಿ ಇಡಬೇಕು. ಆಗ ಅವರಿಗೆ ಗೊತ್ತಾಗುತ್ತದೆ, ಸಾವರ್ಕರ್​ ಅವರ ದೇಶಕ್ಕೆ ಕೊಡುಗೆ ಏನು ಎಂದು ಎಂದಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್​ ಅವರಿಗೆ ಭಾರತ ರತ್ನ ನೀಡಬೇಕು ಮತ್ತು ಬೇಡ ಎಂದು ವಾದ ವಿವಾದಗಳು ಎದ್ದಿವೆ. ಈ ಮೊದಲು ರಾಹುಲ್​ ಗಾಂಧಿ ವೀರ ಸಾವರ್ಕರ್​ ಬಗ್ಗೆ ಸಲ್ಲದ ಮಾತುಗಳನ್ನಾಡಿ ವಿವಾದಕ್ಕೊಳಗಾಗಿದ್ದರು.
ಇದಕ್ಕೆ ವೀರ ಸಾವರ್ಕರ್​ ಮೊಮ್ಮಗ ರಂಜಿತ್​ ಸಾವರ್ಕರ್​ ರಾಹುಲ್ ಗಾಂಧಿಯವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಹುಲ್​ ಗಾಂಧಿಯವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಸಾರ್ವಜನಿಕವಾಗಿ ಥಳಿಸಬೇಕು. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ರಾಹುಲ್​ ಗಾಂಧಿ ದೇಶ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ರಾಹುಲ್​ ಗಾಂಧಿ ಇಂತಹ ಅವಹೇಳನ ಮಾಡುತ್ತಿರುವುದು ಇದೇ ಮೊದಲ ಬಾರಿಗೆ ಅಲ್ಲ. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ರಂಜಿತ್​ ಹೇಳಿದರು.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight + 14 =
Remember me
