ಮುಂಬೈ:ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನಿಂದ ಹೊರಬರಲು ಶಿವಸೇನೆ ಶತಾಯ ಗತಾಯ ಪ್ರಯತ್ನ ಮಾಡುತ್ತಲೇ ಇದೆ. ಕೊನೇ ಗಳಿಗೆಯಲ್ಲಾದರೂ ಬಂಡಾಯ ಶಾಸಕರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಆದರೆ ಶಿವಸೇನೆಯಿಂದ ಸಂಪೂರ್ಣ ಸಂಪರ್ಕ ಕಡಿದುಕೊಂಡಿರುವ ರೆಬೆಲ್​ ಶಾಸಕರಿಗೆ ಕೊನೆಯ ಬಾರಿ ಎಚ್ಚರಿಕೆ ನೀಡಿಲಾಗಿದೆ. ಎಷ್ಟು ದಿನಾ ಅಂತ ಗುವಾಹಟಿಯಲ್ಲಿ ಅಡಗಿಕೊಳ್ಳುತ್ತೀರಾ, ಅಖಾಡಕ್ಕೆ ಬರಲೇಬೇಕಲ್ಲವೇ ಎಂದು ಶಿವಸೇನೆ ಸಂಸದ ಸಂಜಯ್​ ರಾವತ್​ ಟ್ವೀಟ್​ ಮಾಡಿದ್ದಾರೆ.
16 ಶಾಸಕರನ್ನು ಅನರ್ಹಗೊಳಿಸಿ ವಿಧಾನಸಭಾ ಉಪಸಭಾಪತಿಯಿಂದ ನೋಟಿಸ್ ಜಾರಿಗೊಳಿಸಲಾಗಿದ್ದು, ಸೋಮವಾರ ಸಂಜೆಯೊಳಗೆ ಉತ್ತರಿಸಲೇಬೇಕಿದೆ. ಅದು ಯಾವ ರೀತಿ ಪ್ರತಿಕ್ರಿಯೆ ನೀಡುತ್ತೀರಾ ಎಂದು ಸವಾಲು ಎಸೆದಿದ್ದಾರೆ.
ಈ ಮಧ್ಯೆ ಗುವಾಹಟಿಯಲ್ಲೇ ಶಿವಸೇನೆ ಬಂಡಾಯ ಶಾಸಕರಿದ್ದು, ಕೆಲ ಬಂಡಾಯ ಶಾಸಕರಲ್ಲೇ ಕೆಲವು ಅಸಮಾಧಾನಗಳಿವೆ ಎಂದು ಶಿವಸೇನೆ ಆರೋಪಿಸಿದೆ. ಸದ್ಯ ಏಕನಾಥ್​ ಶಿಂಧೆ ಬಣ ಯಾವ ರೀತಿ ಹೆಜ್ಜೆ ಇಡಲಿದೆ ಎಂಬುದನ್ನು ನಾಳೆ ಸಂಜೆವರೆಗೂ ಕಾದು ನೋಡಬೇಕಿದೆ.(ಏಜೆನ್ಸೀಸ್​)
ನೀವೇನಾದ್ರೂ ಮಾಡ್ಕೊಳಿ, ಆದರೆ ಬಾಳಾ​ಸಾಹೇಬ್​ಠಾಕ್ರೆ ಹೆಸರು ಬಳಸುವಂತಿಲ್ಲ: ರೆಬೆಲ್​ ಶಾಸಕರಿಗೆ ಉದ್ಧವ್​ ಎಚ್ಚರಿಕೆ

ನಿಮ್ಮ ದ್ರೋಹ ಎಂದಿಗೂ ಮರೆಯಲ್ಲ, ರೆಬೆಲ್​ ಶಾಸಕರಿಗೆ ಸಚಿವ ಆದಿತ್ಯ ಠಾಕ್ರೆ ವಾರ್ನಿಂಗ್​​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + 10 =
Remember me
