ನವದೆಹಲಿ:ಕೋವಿಡ್​ ರೋಗಿಗಳ ಚಿಕಿತ್ಸೆಗಾಗಿ ಜಗತ್ತಿನಲ್ಲೇ ಅತಿ ದೊಡ್ಡ ಚಿಕಿತ್ಸಾ ಕೇಂದ್ರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರ್ಮಾಣಗೊಂಡಿದೆ. ಏಕಕಾಲಕ್ಕೆ 10,000 ರೋಗಿಗಳಿಗೆ ಇಲ್ಲಿ ಚಿಕಿತ್ಸೆ ದೊರೆಯಲಿದೆ.
ದಕ್ಷಿಣ ದೆಹಲಿಯ ಛತ್ತರಪುರ್​ದಲ್ಲಿರುವ ರಾಧಾ ಸಓಮಿ ಸತ್ಸಂಗ ಬಿಯಾಸ್​ ಕೇಂದ್ರದ 300 ಎಕರೆ ಪ್ರದೇಶದಲ್ಲಿ ಇದನ್ನು ಸ್ಥಾಪಿಸಲಾಗಿದೆ. ಇಂಡೋ ಟಿಬೇಟಿಯನ್​ ಬಾರ್ಡರ್​ ಫೋರ್ಸ್​ನ (ಐಟಿಬಿಪಿ) ಹಾಗೂ ಇತರ ಕೇಂದ್ರೀಯ ಪಡೆಗಳ ವೈದ್ಯರು, ನರ್ಸ್​ಗಳು ಸೇರಿ 3,000ಕ್ಕೂ ವೈದ್ಯಕೀಯ ಸಿಬ್ಬಂದಿ ಇಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ:ಕರೊನಾದಷ್ಟೇ ಮಾರಕವಾಗಿದ್ದ ಈ ಕಾಯಿಲೆ ಕೊನೆಗೂ ತೊಲಗಿದೆ…!
ಇದನ್ನೂ ಓದಿ:ದೆಹಲಿಯಲ್ಲಿ ಕೋವಿಡ್​ ರೋಗಿಗಳಿಗಾಗಿ ಸಜ್ಜಾಗಿದೆ ಜಗತ್ತಿನಲ್ಲಿಯೇ ಅತಿದೊಡ್ಡ ಚಿಕಿತ್ಸಾ ಕೇಂದ್ರ…!
* ಪ್ರತಿ ರೋಗಿಗೆ ಪ್ರತ್ಯೇಕ ಹಾಸಿಗೆ, ಕುರ್ಚಿ, ಪ್ಲಾಸ್ಟಿಕ್​ ಕಬೋರ್ಡ್​, ಡಸ್ಟ್​ಬಿನ್​, ಸೋಪು, ಪೇಸ್ಟ್​ ಕಿಟ್​ ಹಾಗೂ ಚಾರ್ಜಿಂಗ್​ ಪಾಯಿಂಟ್​ ನೀಡಲಾಗಿದೆ.* ರೋಗಿಗಳ ಮನರಂಜನೆಗಾಗಿ ಅಲ್ಲಲ್ಲಿ ದೊಡ್ಡ ಎಲ್​ಇಡಿ ಸ್ಕ್ರೀನ್​ಗಳನ್ನು ಅಳವಡಿಸಲಾಗಿದೆ.* ದೆಹಲಿಯಲ್ಲಿ ಭಾರಿ ಸೆಖೆ ಇರುವುದರಿಂದ ಇಡೀ ಕೇಂದ್ರಕ್ಕೆ ಸೆಂಟ್ರಲೈಸ್ಡ್​ ಎಸಿ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ 18 ಸಾವಿರ ಟನ್​ ಸಾಮರ್ಥ್ಯದ ಎಸಿ ವ್ಯವಸ್ಥೆ ಇಲ್ಲಿದೆ.* ಇಲ್ಲಿಗೆ ವಿದ್ಯುತ್​ ವ್ಯವಸ್ಥೆ ಕಲ್ಪಿಸಲು 22 ಕಿಮೀ. ದೂರದಷ್ಟು ಭೂಗತ ಕೇಬಲ್​, 20 ಟ್ರಾನ್ಸಫಾರ್ಮರ್​ ಅಳವಡಿಸಲಾಗಿದೆ.
ಲಾಕ್​ಡೌನ್​ ಮರೆತು ಬಿಡಿ, ಅನ್​ ಲಾಕ್​ಡೌನ್ 2.0 ಗೆ ಸಿದ್ಧರಾಗಿ; ಶಾಲಾ- ಕಾಲೇಜು, ಮೆಟ್ರೋ ಆರಂಭಕ್ಕೆ ಮಾರ್ಗಸೂಚಿ ಸಜ್ಜು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − eight =
Remember me
