ಸೊಲ್ಲಾಪುರ:ಪತ್ನಿಯೊಬ್ಬಳು ಪತಿ ಮುಂದೆಯೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದ ಸಂಗೋಳ ತಾಲೂಕಿನ ಅಜನಾಲೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಪ್ರಿಯಾಂಕಾ(29) ಎಂದು ಗುರುತಿಸಿಲಾಗಿದ್ದು, ಭಾನುವಾರ ಮಧ್ಯಾಹ್ನ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪತಿ ಪ್ರವೀಣ್ ಮತ್ತು ಪತ್ನಿ ಪ್ರಿಯಾಂಕಾ ದಾಳಿಂಬೆ ಟ್ರ್ಯಾಕ್ಟರ್‌ಗೆ ಜೋಡಿಸಲಾದ ಬ್ಲೋವರ್ ಘಟಕದ ಸಹಾಯದಿಂದ ದಾಳಿಂಬೆ ಮರಕ್ಕೆ ಸ್ಲರಿಯನ್ನು ಬಿಡುತ್ತಿದ್ದರು. ಈ ವೇಳೆ ಪತಿ ಟ್ರ್ಯಾಕ್ಟರ್​ನ್ನು ಚಲಾಯಿಸುತ್ತಿದ್ದು, ಆತ ಮುಂದಕ್ಕೆ ನೋಡುತ್ತಿದ್ದ.
ಇದನ್ನೂ ಓದಿ:ಶಿವನಿಗಾಗಿ ತನ್ನ ಕತ್ತನ್ನೇ ಕೊಯ್ದುಕೊಂಡ ಭಕ್ತ: ಭಕ್ತಿಯ ಪರಾಕಾಷ್ಠೆ..?
ಇತ್ತಿ ಪತ್ನಿ ಪ್ರಿಯಾಂಕಾ ಟ್ರ್ಯಾಕ್ಟರ್​ಗೆ ಅಳವಡಿಸಿದ್ದ ಬ್ಲೋವರ್ ಯೂನಿಟ್ ಸಹಾಯದಿಂದ ಮರಗಳ ಮೇಲೆ ಸ್ಲರಿ ಸುರಿಯುತ್ತಿದ್ದಳು. ಈ ಮಧ್ಯೆ ಬ್ಲೋವರ್​ನಲ್ಲಿ ಸೀರೆಯ ಸಿಲುಕಿಕೊಂಡು ಬ್ಲೋವರ್​ ಜಾಮ್ ಆಗಿದೆ. ಪತಿ ಕೂಡಲೇ ಹಿಂತಿರುಗಿ ನೋಡಿದ್ದು, ಸೀರೆಯು ತನ್ನ ಪತ್ನಿಯ ಕತ್ತಿಗೆ ಬಿಗಿದಿರುವುದನ್ನು ಕಂಡು ಕೂಡಲೇ ಟ್ರಾಕ್ಟರ್ ನಿಲ್ಲಿಸಿ ಸಹಾಯಕ್ಕೆ ಧಾವಿಸಿದ್ದಾನೆ.
ಪತ್ನಿಯ ಕೊರಳಲ್ಲಿ ನೇತಾಡುತ್ತಿದ್ದ ಸೀರೆಯನ್ನು ತೆಗೆದ ಪತಿ, ಕೂಡಲೇ ಆಕೆಯನ್ನು ಸಂಗೋಳ ಗ್ರಾಮಾಂತರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾನೆ. ಆದರೆ ದುರದೃಷ್ಟವಶಾತ್​, ಆಕೆ ಚಿಕಿತ್ಸೆಗೆ ಮುನ್ನವೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − fifteen =
Remember me
