ನವದೆಹಲಿ:ಸಾಮಾನ್ಯವಾಗಿ ಜಿಮ್‌ಗೆ ಹೋಗುವ ಪ್ರತಿಯೊಬ್ಬರೂ ವಿಶೇಷವಾದ ಉಡುಗೆಯನ್ನು ಧರಿಸುತ್ತಾರೆ. ಪ್ರತಿಯೊಬ್ಬರೂ ವ್ಯಾಯಾಮ ಮಾಡಲು ಸುಲಭವಾದ ಜಿಮ್ ಉಡುಪುಗಳನ್ನು ಧರಿಸುತ್ತಾರೆ. ಅಂದರೆ, ಟಿ-ಶರ್ಟ್​ ಮತ್ತು ಸ್ಪೋರ್ಟ್ಸ್​ ಪ್ಯಾಂಟ್​ ಧರಿಸುತ್ತಾರೆ.
ಜಿಮ್‌ಗೆ ಹೋಗುವಾಗ ಜೀನ್ಸ್ ಆಗಲಿ ಅಥವಾ ಸೀರೆ ಆಗಲಿ ಧರಿಸುವುದೇ ಇಲ್ಲ. ಧರಿಸಿದವರಿಗೆ ಎಂಟ್ರಿಯು ಇರಲ್ಲ. ಆದರೆ, ಇಲ್ಲೊಬ್ಬ ಯುವತಿ ಸೀರೆಯಲ್ಲಿ ಜಿಮ್‌ಗೆ ಹೋಗಿದ್ದು, ಆಕೆ ವರ್ಕೌಟ್ ಮಾಡುವುದನ್ನು ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೀರೆಯಲ್ಲಿ ವರ್ಕೌಟ್​ ಮಾಡುತ್ತಿರುವ ಯುವತಿಯೇ ಇಡೀ ಜಿಮ್​ನಲ್ಲಿ ಎಲ್ಲರ ಆಕರ್ಷಣೆಯಾಗಿದ್ದಾಳೆ. ತನ್ನ ಮಾದಕ ನೋಟವನ್ನು ಬೀರುತ್ತಾ ವಿವಿಧ ರೀತಿಯ ವರ್ಕೌಟ್​ಗಳನ್ನು ಆಕೆ ಮಾಡಿದ್ದಾಳೆ. ಅದರಲ್ಲೂ ಯುವತಿಯ ಹಾಟ್​ನೆಸ್​ಗೆ ಎಲ್ಲರೂ ಫಿಧಾ ಆಗಿದ್ದಾರೆ.
ಈ ವಿಡಿಯೋವನ್ನು ‘ಬ್ಯೂಟಿ ಕ್ವೀನ್ಸ್ ಹಾ’ ಹೆಸರಿನ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋಗೆ ಲೈಕ್‌ಗಳು ಮತ್ತು ಕಾಮೆಂಟ್‌ಗಳ ಮಹಾಪೂರವೇ ಹರಿದು ಬರುತ್ತಿದೆ. ‘ಸೂಪರ್ ವರ್ಕೌಟ್’ ಎಂದು ಒಬ್ಬರು ಕಾಮೆಂಟ್ ಮಾಡಿದರೆ.. ಮತ್ತೊಬ್ಬರು ‘ಪ್ರಿಯಾ ಪ್ರಕಾಶ್ ವಾರಿಯರ್ ಗಿಂತ ಸುಂದರ ಕಣ್ಣುಗಳನ್ನು ಹೊಂದಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಹಿಂದೆ ರೀನಾ ಸಿಂಗ್ ಎಂಬ ಯುವತಿ ಸೀರೆಯಲ್ಲಿ ಜಿಮ್ ವರ್ಕೌಟ್​ ಮಾಡಿ ಎಲ್ಲರ ಗಮನ ಸೆಳೆದಿದ್ದರು.(ಏಜೆನ್ಸೀಸ್​)
ವಿಡಿಯೋಗಾಗಿ ಲಿಂಕ್​ ಮೇಲೆ ಕ್ಲಿಕ್​ ಮಾಡಿ:https://x.com/Lovely_Queens1/status/1809575845243043930
ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಧರಿಸಿದ್ದ ಈ ಸನ್​ಗ್ಲಾಸ್​ ಬೆಲೆ ಕೇಳಿದ್ರೆ ಬೆರಗಾಗೋದು ಖಂಡಿತ!

400 ಎಸ್‌ಐ ನೇಮಕಾತಿಗೆ ಶೀಘ್ರದಲ್ಲಿಯೇ ಅರ್ಜಿ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
