ನವದೆಹಲಿ:ಮಿಸೆಸ್​ ವರ್ಲ್ಡ್​ 2022 ಆಗಿ ಭಾರತದ ಸರ್ಗಂ ಕೌಶಲ್ ಆಯ್ಕೆ ಆಗಿದ್ದು, 21 ವರ್ಷಗಳ ಬಳಿಕ ಭಾರತಕ್ಕೆ ಮತ್ತೆ ಮಿಸೆಸ್ ವರ್ಲ್ಡ್ ಪಟ್ಟ ಸಿಕ್ಕಂತಾಗಿದೆ. 63 ದೇಶಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಭಾರತದ ಸರ್ಗಂ ಕೌಶಲ್ ವಿಜೇತರಾಗಿದ್ದಾರೆ.
ಮಿಸೆಸ್​ ವರ್ಲ್ಡ್ 2021 ಆಗಿದ್ದ ಶಾಯ್ಲಿನ್ ಫೋರ್ಡ್ ಅವರು ಶನಿವಾರ ಸರ್ಗಂ ಕೌಶಲ್​ಗೆ ಮಿಸ್ ವರ್ಲ್ಡ್ ಕಿರೀಟವನ್ನು ತೊಡಿಸಿದರು. ಮಿಸೆಸ್ ಪಾಲಿನೇಷ್ಯಾ ಮತ್ತು ಮಿಸೆಸ್ ಕೆನಡಾ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್​ ಆದರು. 21 ವರ್ಷಗಳ ಬಳಿಕ ಮಿಸೆಸ್​ ವರ್ಲ್ಡ್ ಕಿರೀಟ ಮರಳಿ ನಮಗೆ ಸಿಕ್ಕಿದೆ ಎಂದು ಸರ್ಗಂ ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ. 2001ರಲ್ಲಿ ನಟಿ-ರೂಪದರ್ಶಿ ಅದಿತಿ ಗೋವಿತ್ರಿಕರ್ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸಿ ಮಿಸೆಸ್ ವರ್ಲ್ಡ್ ಗರಿ ಗಳಿಸಿದ್ದರು. ಅದಾಗ ಬಳಿಕ ಈಗಲೇ ಮಿಸೆಸ್ ವರ್ಲ್ಡ್ ಭಾರತಕ್ಕೆ ಸಿಕ್ಕಿರುವುದು.
ಜಮ್ಮು-ಕಾಶ್ಮೀರದ ಸರ್ಗಂ ಈ ತಿಂಗಳ ಜೂನ್​ನಲ್ಲಿ ಮಿಸೆಸ್ ಇಂಡಿಯಾ ವರ್ಲ್ಡ್​ 2022-23 ಆಗಿ ಆಯ್ಕೆ ಆಗಿದ್ದರು. ಈ ಮೂಲಕ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ, ಮಿಸೆಸ್ ವರ್ಲ್ಡ್ 2022 ಆಗಿ ಹೊರಹೊಮ್ಮಿದ್ದಾರೆ. ವಿವಾಹಿತೆಯರಿಗೆಂದೇ ಆಯೋಜಿಸಲಾಗುವ ಈ ಮಿಸೆಸ್ ವರ್ಲ್ಡ್ ಸ್ಪರ್ಧೆ 1984ರಲ್ಲಿ ಆರಂಭಗೊಂಡಿತ್ತು. ಆರಂಭದಲ್ಲಿ ಇದನ್ನು ಮಿಸೆಸ್​ ವುಮನ್ ಆಫ್​ ದ ವರ್ಲ್ಡ್ ಎಂದು ಕರೆಯಲಾಗುತ್ತಿತ್ತು. ಬಳಿಕ 1988ರಲ್ಲಿ ಇದನ್ನು ಮಿಸೆಸ್ ವರ್ಲ್ಡ್ ಎಂದು ಮರು ನಾಮಕರಣ ಮಾಡಲಾಯಿತು. ಸುಮಾರು 80 ರಾಷ್ಟ್ರಗಳು ಸಾಮಾನ್ಯವಾಗಿ ಇದರಲ್ಲಿ ಭಾಗವಹಿಸುತ್ತಿದ್ದು, ಬಹುತೇಕವಾಗಿ ಅಮೆರಿಕನ್ನರೇ ವಿಜೇತರಾಗುತ್ತಿದ್ದರು. –ಏಜೆನ್ಸೀಸ್
ಡಬಲ್ ಖುಷಿ: ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ-ಸದಸ್ಯರ ಗೌರವಧನ ಹೆಚ್ಚಳ; ಯಾರಿಗೆ ಎಷ್ಟು? ಇಲ್ಲಿದೆ ಮಾಹಿತಿ..

ಒಂದು ಕೊಲೆಯಾಗಿದ್ದ ಮನೆಯ ಸಂಪ್​ನಲ್ಲಿ ಮತ್ತೊಂದು ಶವ ಪತ್ತೆ; ಯಾರ ಮೇಲೆ ಅನುಮಾನವಿತ್ತೋ ಅವನೇ ಕೊಲೆಯಾಗಿದ್ದ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + ten =
Remember me
