ಚಮೋಲಿ (ಉತ್ತರಖಂಡ):ಕಳೆದ ಭಾನುವಾರ ಜೋಶಿಮಠದ ಬಳಿ ಸಂಭವಿಸಿದ ಹಿಮಪಾತ ದುರಂತದಲ್ಲಿ 32 ಮಂದಿ ಅಸುನೀಗಿದ್ದು, 200 ಮಂದಿ ನಾಪತ್ತೆಯಾಗಿದ್ದಾರೆ. ಇಂದಿಗೂ ಸಹ ಶೋಧ ಕಾರ್ಯ ನಡೆಯುತ್ತಲೇ ಇದೆ. ಹೀಗಿರುವಾಗ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದಿದ್ದು, ಹಿಮಪಾತದ ಅವಶೇಷಗಳಿಂದ “ಅಪಾಯಕಾರಿ ಕೆರೆ” ರಚನೆಯಾಗಿರುವುದನ್ನು ಹೈ ರೆಸಲ್ಯೂಷನ್​ ಉಪಗ್ರಹ ಚಿತ್ರಗಳು ಗುರುತಿಸಿವೆ.
ಕರೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮತ್ತೊಂದು ಅನಾಹುತ ತಪ್ಪಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್​) ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಎನ್​ಡಿಆರ್​ಎಫ್​ ಮಹಾ ನಿರ್ದೇಶಕ ಎಸ್​. ಎನ್​. ಪ್ರಧಾನ್​ ಮಾತನಾಡಿ, ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈಗಾಗಲೇ ನಮ್ಮ ತಂಡಗಳು ಕೆರೆಯ ಜಾಗಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿವೆ. ಇಂದು ಬೆಳಗ್ಗೆ ಡ್ರೋನ್​, ಮಾನವರಹಿತ ವಿಮಾನ ಹಾಗೂ ಚಾಪರ್​ಗಳು ಆ ಏರಿಯಾದಲ್ಲಿ ಹಾರಾಟ ನಡೆಸಿ ಸ್ಥಳದ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿದೆ. ಆ ಜಾಗದಲ್ಲಿರುವುದನ್ನು ನೋಡಿ, ಮೌಲ್ಯಮಾಪನ ಮಾಡಿ ಸೂಕ್ತ ಕ್ರಿಯೆಯ ಅನುಸರಿಸುವ ಕೆಲಸದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ:ಸುಳ್ಳು ಸುದ್ದಿ, ದ್ವೇಷ ಹರಡುವ ಟ್ವೀಟ್​ಗಳು : ಟ್ವಿಟರ್ ಮತ್ತು ಸರ್ಕಾರಕ್ಕೆ ಸುಪ್ರೀಂ ನೋಟೀಸು
ಇದೀಗ ಹಿಮಪಾತದ ಅವಶೇಷಗಳಿಂದ ನಿರ್ಮಾಣ ಆಗಿರುವ ಕೆರೆಯಿಂದ ಮತ್ತೊಮ್ಮೆ ಅವಘಡ ಸಂಭವಿಸುವ ಆತಂಕ ಎದುರಾಗಿದೆ. ಅಲ್ಲದೆ, ಕೆರೆಯ ನೀರು ನಿರಂತರವಾಗಿ ಹೆಚ್ಚುತ್ತಿರುವುದು ಇನ್ನಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇದರ ಬೆನ್ನಲ್ಲೇ ಅವಶೇಷ ಮತ್ತು ಕೆರೆಯ ಆಳ ಮತ್ತು ಅಗಲವನ್ನು ಅಳತೆ ಮಾಡಲಾಗುತ್ತಿದೆ ಎಂದು ಎನ್​ಡಿಆರ್​ಎಫ್​ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ದುರಂತದ ನಂತರದ ಅದರ ಮೌಲ್ಯಮಾಪನಕ್ಕಾಗಿ ಸ್ಥಳಕ್ಕೆ ತೆರಳಿದ ಗರ್ವಾಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೈ.ಪಿ.ಸುಂಡ್ರಿಯಲ್, ನಿರ್ಮಾಣವಾಗಿರುವ ಕೆರೆ ರಚನೆಯು ಆತಂಕಕಾರಿಯಾಗಿದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಕೆರೆ ಯಾವಾಗ ಬೇಕಾದರೂ ಒಡೆಯಬಹುದು ಮತ್ತು ಪ್ರವಾಹಕ್ಕೆ ಕಾರಣವಾಗಬಹುದು ಎಂದು ತಜ್ಞರು ಸಹ ತಿಳಿಸಿದ್ದಾರೆ.(ಏಜೆನ್ಸೀಸ್​)
ಸುರಂಗ ಭೇದಿಸುವುದೇ ಸವಾಲು; ಪ್ರತ್ಯಕ್ಷ ವರದಿ

ಕಥೆಗಳನ್ನು ಹೇಳುವ ರೇಣಿ ಹಳ್ಳಿ!

ಉತ್ತರಾಖಂಡದಲ್ಲಿ ಮತ್ತೆ ಶಾಕ್​- ನದಿನೀರಿನ ಮಟ್ಟ ಹೆಚ್ಚಳ, 34 ಮೃತದೇಹ ಪತ್ತೆ; ರಕ್ಷಣಾ ಕಾರ್ಯ ಸ್ಥಗಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − ten =
Remember me
