ಹಾಥರಸ್​:ಜುಲೈ 02ರಂದು ಉತ್ತರಪ್ರದೇಶದ ಹಾಥರಸ್​ನಲ್ಲಿ ಸಂಭವಿಸಿದ ಭಿಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಪ್ರಮುಖ ಆರೋಪಿಯನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಐಜಿ ಶಲಭ್​ ಮಾಥುರ್, ಘಟನೆಗೆ ಸಂಬಂಧಿಸಿದಂತೆ ಆರು ಮಂದಿ ಸ್ವಯಂ ಸೇವಕರನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಮುಖ ಆರೋಪಿ ಪ್ರಕಾಶ್ ಮಧುಕರ್ ಬಂಧನಕ್ಕೆ ₹1 ಲಕ್ಷ ಬಹುಮಾನ ಘೋಷಿಸಲಾಗಿದೆ. ಶೀಘ್ರದಲ್ಲೇ ಆತನ ವಿರುದ್ಧ ಬಂಧನ ರಹಿತ ವಾರೆಂಟ್​ಅನ್ನು ಜಾರಿಗೊಳಿಸಲಾಗುವುದು.
#WATCH| On Hathras stampede incident, Aligarh IG Shalabh Mathur says, "We are inquiring about 'Bhole Baba's' criminal history. Permission for the event was not taken in his name. "pic.twitter.com/5mvGjDLeCY
ಇದನ್ನೂ ಓದಿ:ಯುವ-ಶ್ರೀದೇವಿ ಡಿವೋರ್ಸ್​ ಕೇಸ್​; ಮಹತ್ವದ ಸೂಚನೆ ನೀಡಿ ವಿಚಾರಣೆ ಮುಂದೂಡಿದ ಕೋರ್ಟ್​
ನಾವು ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದೇವೆ. ಸತ್ಸಂಗದ ಸ್ವಯಂಸೇವಕರು ಸತ್ಸಂಗ ಮುಗಿದ ನಂತರ ಜನಸಂದಣಿಯನ್ನು ನಿಭಾಯಿಸುವಾಗ ನಿರ್ಲಕ್ಷ್ಯ ತೋರಿದ್ದಾರೆ. ವಿಷಯಗಳು ಕೈ ಮೀರುತ್ತಿದ್ದಂತೆ, ಅವರು ಪರಾರಿಯಾಗಿದ್ದಾರೆ. ಘಟನೆಯ ಹಿಂದೆ ಪಿತೂರಿ ಇದೆಯೇ ಎಂಬುದರ ಕುರಿತು ತನಿಖೆ ಮಾಡಲಾಗುತ್ತಿದೆ. ಆಯೋಜಕರು ಭದ್ರತೆಗಾಗಿ ಬೌನ್ಸರ್​ಗಳನ್ನು ನೇಮಿಸಿದ್ದರು. ಪೊಲೀಸರನ್ನು ಒಳಬಿಡಲಿಲ್ಲ ಎಂಬ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಈ ವಿಚಾರವಾಗಿಯೂ ತನಿಖೆ ನಡೆಯುತ್ತಿದೆ.
ಎಫ್‌ಐಆರ್‌ನಲ್ಲಿ ಭೋಲೆ ಬಾಬಾ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ ಏಕೆಂದರೆ ಅವರ ಹೆಸರಿನಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅನುಮತಿ ಕೇಳಿರಲಿಲ್ಲ. ಅಗತ್ಯವಿದ್ದಲ್ಲಿ ಭೋಲೆ ಬಾಬಾನನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ತನಿಖೆಯಲ್ಲಿ ಸಿಗುವ ಅಂಶಗಳನ್ನು ಆಧರಿಸಿ ವಿಚಾರಣೆ ನಡೆಸಲಾಗುವುದು ಎಂದು ಐಜಿ ಶಲಭ್​ ಮಾಥುರ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
