ನವದೆಹಲಿ :ಇಂದು ಆಕಾಶದೆಡೆಗೆ ನಿಮ್ಮ ದೃಷ್ಟಿ ಹರಿಸುವುದಕ್ಕೆ ಒಳ್ಳೆಯ ಸಮಯ. ಟೆಲಿಸ್ಕೋಪ್​ ಇರುವವರಿಗೆ ವಿಸ್ಮಯಪೂರ್ಣ ಅನುಭವಕ್ಕೆ ಅವಕಾಶ. ಭೂಮಿ ಮತ್ತು ಶನಿಗ್ರಹದ ನಡುವಿನ ಅಂತರ ಇಂದು ಕಡಿಮೆಯಾಗಲಿದೆ. ಒಂದು ವರ್ಷ 13 ದಿನಗಳ ನಂತರ ಈ ಪ್ರಕ್ರಿಯೆ ಕಂಡುಬರುತ್ತಿದೆ.
ಭಾರತದಲ್ಲಿ ಇಂದು ಬೆಳಿಗ್ಗೆ 11.30 ಕ್ಕೆ ರಿಂಗ್​ಗಳನ್ನುಳ್ಳ ಬೃಹತ್​ ಶನಿಗ್ರಹವು ಆಕಾಶದಲ್ಲಿ ಹತ್ತಿರಕ್ಕೆ ಕಾಣುವುದು. ಇದೇ ಸಮಯಕ್ಕೆ ರಾತ್ರಿಯಾಗಿರುವ ದೇಶಗಳಲ್ಲಿ ಶನಿಗ್ರಹವು ಆಕಾಶದಲ್ಲಿ ಹೆಚ್ಚು ಹೊಳಪು ತೋರುವುದನ್ನು ನೋಡಬಹುದು. ಈ ತಿಂಗಳು ಪೂರ್ತಿ ಈ ಪ್ರಕ್ರಿಯೆ ಕಂಡುಬರಲಿದೆ ಎನ್ನಲಾಗಿದೆ.
ಇದನ್ನೂ ಓದಿ:Breaking: ಹಾಕಿಯಲ್ಲಿ ದಾಖಲೆ ಬರೆದ ಭಾರತದ ವನಿತೆಯರು: 41 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ
ಅಪೊಸಿಷನ್​ ಎಂದು ಕರೆಯಲಾಗುವ ಈ ಪ್ರಕ್ರಿಯೆಯಲ್ಲಿ ಭೂಮಿ ಮತ್ತು ಶನಿ ನಡುವೆ 120 ಕೋಟಿ ಕಿಲೋಮೀಟರ್ ಅಂತರ ಇರಲಿದೆ. ಇದು ಸಾಮಾನ್ಯಕ್ಕಿಂತ 50 ಕೋಟಿ ಕಿಮೀ ಕಡಿಮೆ ಅಂತರವಾಗಿದೆ ಎಂದು ಖಗೋಳಶಾಸ್ತ್ರಜ್ಞರಾದ ಡಾ.ಸುವೇಂದು ಪಟ್​​ನಾಯಕ್​ ಹೇಳಿದ್ದಾರೆ. ಇದೇ ರೀತಿಯ ಪ್ರಕ್ರಿಯೆ ಮತ್ತೆ 2022 ರ ಆಗಸ್ಟ್​ 14 ರಂದು ನಡೆಯಲಿದೆ ಎಂದಿದ್ದಾರೆ.(ಏಜೆನ್ಸೀಸ್)
VIDEO | ಒಲಿಂಪಿಕ್ಸ್​ನಲ್ಲಿ ಕಮಲ್​ಪ್ರೀತ್​ ಕೌರ್​ರ​ ಡಿಸ್ಕಸ್​ ಥ್ರೋ!

ಗ್ಯಾಸ್ಟ್ರಿಕ್ ಸಮಸ್ಯೆಗೆ, ಮಧುಮೇಹ ನಿಯಂತ್ರಣಕ್ಕೆ ಇದು ಬಲು ಉಪಯುಕ್ತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 3 =
Remember me
