ನವದೆಹಲಿ:ಇತ್ತಿಚಿಗೆ ಪುಲ್ವಾಮಾ ದಾಳಿ ಕುರಿತು ಹೇಳಿಕೆ ನಿಡಿದ ಸುದ್ದಿಯಲ್ಲಿದ್ದ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್​ಗೆ ಸಿಬಿಐ ನೋಟಿಸ್​ ಜಾರಿ ಮಾಡಿದೆ.
ಜಮ್ಮು-ಕಾಶ್ಮೀರದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಏಪ್ರಿಲ್​ನಲ್ಲಿ ಮಲ್ಲಿಕ್​ ಕಿರು ಹೈಡ್ರೋ ಎಲೆಕ್ಟ್ರಿಕ್​ ಪವರ್​ ಪ್ರಾಜೆಕ್ಟ್​ ಹಾಗೂ ಸರ್ಕಾರಿ ನೌಕರರಿಗೆ ವಿಮಾ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಕುರಿತು ಮಲಿಕ್​ ಆರೋಪಿಸಿದ್ದರು.
ಇದನ್ನೂ ಓದಿ:ಕಾಂಗ್ರೆಸ್​ ತೊರೆದು ಜೆಡಿಎಸ್​ ಸೇರ್ಪಡೆಯಾದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್​
ಮಲಿಕ್​ ಅವರು ಮಾಡಿರುವ ಆರೋಪಗಳ ಕುರಿತು ಸ್ಪಷ್ಟನೆ ನೀಡುವಂತೆ ಮತ್ತು ಸಾಕ್ಷ್ಯಾಧಾರಗಳಿದ್ದಲ್ಲಿ ಒದಗಿಸುವಂತೆ ಕೇಳಲಾಗಿದೆ. ಇತ್ತೀಚಿಗೆ ಖಾಸಗಿ ಸು್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಲಿಕ್​ ಭ್ರಷ್ಟಾಚಾರದ ವಿರುದ್ದ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾವುದೇ ಒಲವಿಲ್ಲ ಎಂದು ಆರೋಪಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಮಲಿಕ್​ ನನಗೆ ಯಾವುದೇ ನೋಟಿಸ್​ ನೀಡಿಲ್ಲ. ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವಂತೆ ತಿಳಿಸಲಾಗಿದೆ. ಏಪ್ರಿಲ್​ 28ರಂದು ದೆಹಲಿಯಲ್ಲಿರುವ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ಧಾರೆ.
ನಾನು ಸತ್ಯವನ್ನು ಹೇಳುವ ಮೂಲಕ ಕೆಲವರ ಪಾಪವನ್ನು ಬಯಲಿಗೆಳೆದಿದ್ದೇನೆ. ಬಹುಶಃ ಅದಕ್ಕಾಗಿಯೇ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ನಾನು ರೈತನ ಮಗನಾಗಿದ್ದು ಸತ್ಯದ ಪರ ನಿಲ್ಲುತ್ತೇನೆ ಎಂದು ಸತ್ಯಪಾಲ್​ ಮಲಿಕ್​ ಹೇಳಿದ್ದಾರೆ.
मैंने सच बोलकर कुछ लोगों के पाप उजागर किए हैं।शायद, इसलिए बुलावा आया है।मैं किसान का बेटा हूं, घबराऊंगा नहीं।सच्चाई के साथ खड़ा हूं।#CBI
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
