ನವದೆಹಲಿ:ಹವಾಲಾ ಹಣದ ಆರೋಪದ ಮೇಲೆ ಬಂಧಿತನಾಗಿರುವ ಆಮ್​ ಆದ್ಮಿ ಪಕ್ಷದ ಸಚಿವ ಸತ್ಯೇಂದರ್ ಜೈನ್​ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಗಾಗಿದ್ದು, ಈ ಸಂದರ್ಭದಲ್ಲಿ ಆತ ನೀಡಿರುವ ಉತ್ತರ ಇದೀಗ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ವಿಚಾರಣೆ ವೇಳೆ ಸತ್ಯೇಂದರ್​ ಪ್ರತಿಕ್ರಿಯೆ ಕುರಿತು ಇ.ಡಿ.ಯ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್​.ವಿ.ರಾಜು ಅವರು ವಿಚಾರಣಾ ನ್ಯಾಯಾಲಯಕ್ಕೆ ನೀಡಿರುವ ಮಾಹಿತಿ ವೇಳೆ ಸತ್ಯೇಂದರ್ ಕುರಿತ ಕೌತುಕದ ಅಂಶಗಳು ಬೆಳಕಿಗೆ ಬಂದಿವೆ.
ಇ.ಡಿ. ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ರಾಜು ಅವರು, ಸತ್ಯೇಂದರ್​​ನಿಂದ ಯಾವುದೇ ಹೇಳಿಕೆ ಪಡೆಯುವುದಿದ್ದರೂ ಲಿಖಿತ ರೂಪದಲ್ಲೇ ಪಡೆಯಬೇಕು. ಇಲ್ಲದಿದ್ದರೆ ಆತ ನಾನು ಹಾಗೆ ಹೇಳೇ ಇಲ್ಲ ಎಂದು ಬಿಡುತ್ತಾನೆ. ಆದರೆ ಆತ ತುಂಬಾ ನಿಧಾನವಾಗಿ ಬರೆಯತ್ತಾನೆ, ಒಂದು ಪುಟ ಬರೆಯಲು 2 ಗಂಟೆ ತೆಗೆದುಕೊಳ್ಳುತ್ತಾನೆ ಎಂದು ತಿಳಿಸಿದ್ದಾರೆ.
ಇನ್ನು ಹವಾಲಾ ವಹಿವಾಟು ಕುರಿತ ದಾಖಲೆಗಳನ್ನು ಸತ್ಯೇಂದರ್ ಮುಂದಿಟ್ಟರೆ, ಆತ ತನಗೆ ಕೋವಿಡ್ ಸೋಂಕು ತಗಲಿದ್ದು, ಆ ಬಳಿಕ ನೆನಪಿನ ಶಕ್ತಿ ಕಳೆದುಕೊಂಡಿದ್ದೇನೆ ಎಂಬುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಗಿ ರಾಜು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಅಕ್ರಮ ಹಣ ವಿನಿಮಯ ಆರೋಪದ ಮೇಲೆ ಮೇ 30ರಂದು ಸತ್ಯೇಂದರ್ ಬಂಧನವಾಗಿದ್ದು, ಅಕ್ರಮ ಸಂಪಾದನೆ ಆರೋಪದ ಮೇಲೆ ಸಚಿವರ ಕುಟುಂಬಕ್ಕೆ ಸೇರಿದ್ದ 4.81 ಕೋಟಿ ರೂ. ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಅಮ್ಮನಾದ ನಟಿ ಪ್ರಣೀತಾ; ಮುನ್ನಾಭಾಯಿ ಎಂಬಿಬಿಎಸ್​ ಚಿತ್ರದ ದೃಶ್ಯ ನೆನಪಿಸಿಕೊಂಡಿದ್ದೇಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
