ತಿರುವನಂತಪುರ:ಸೌದಿ ಅರೇಬಿಯಾ ಮೂಲದ ಮಹಿಳೆಯ ಮೇಲೆ ಕೇರಳದ ಖ್ಯಾತ ಯೂಟ್ಯೂಬರ್​ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಪ್ರಕರಣ ದಾಖಲಾಗಿದ್ದು, ಯೂಟ್ಯೂಬರ್​ ಬಂಧನಕ್ಕೆ ಬಲೆ ಬೀಸಲಾಗಿದೆ.
ಮಲ್ಲು ಟ್ರಾವೆಲ್ಲರ್​ ಅಲಿಯಾಸ್​ ಶಕೀರ್​ ಸುಭಾನ್​ ವಿರುದ್ಧ ಪ್ರಕರಣ ದಾಖಲಾಗಿದೆ. ಸೆ.13ರಂದು ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್​ ಮಾಡಿಕೊಳ್ಳುವ ಮೂಲಕ ಶಕೀರ್​ ಸುಭಾನ್​ ವಿರುದ್ಧ ಸಂತ್ರಸ್ತೆ ಆರೋಪಗಳ ಸುರಿಮಳೆಗೈದಿದ್ದಾರೆ.
ಇದನ್ನೂ ಓದಿ:PM Modi’s Birthday: ಪ್ರಧಾನಿ ಮೋದಿಗೆ ನೇರವಾಗಿ ಶುಭಕೋರುವುದು ಹೇಗೆ? ಇಲ್ಲಿದೆ ನಿಮಗೊಂದು ಅವಕಾಶ
ಶಕೀರ್ ಸಂದರ್ಶನಕ್ಕೆಂದು ಕೊಚ್ಚಿಯ ಖಾಸಗಿ ಹೋಟೆಲ್‌ಗೆ ಕರೆದನು. ನಾನು ಕೋಯಿಕ್ಕೋಡ್ ಮೂಲದ ನನ್ನ ಭಾವಿ ಪತಿಯೊಂದಿಗೆ ಹೋಟೆಲ್‌ಗೆ ಹೋಗಿದ್ದೆ. ನನ್ನ ಭಾವಿ ಪತಿ ಹೊರಗೆ ಹೋದಾಗ, ಶಕೀರ್ ನನ್ನ ಬಳಿಗೆ ಬಂದು ಮಾತನಾಡಿದನು. ನಂತರ ನನ್ನ ಕೈ ಹಿಡಿದು ಮತ್ತು ನನ್ನನ್ನು ಹಾಸಿಗೆಯ ಮೇಲೆ ತಳ್ಳಿದನು. ಬಳಿಕ ನನ್ನ ಖಾಸಗಿ ಅಂಗಗಳನ್ನು ಮುಟ್ಟಿದನು. ಈ ವೇಳೆ ನಾನು ಅವನನ್ನು ಬಲವಾಗಿ ತಳ್ಳಿದೆ ಮತ್ತು ನನ್ನ ಒಪ್ಪಿಗೆಯಿಲ್ಲದೆ ನನ್ನ ದೇಹವನ್ನು ಏಕೆ ಮುಟ್ಟಿದೆ ಎಂದು ಪ್ರಶ್ನೆ ಮಾಡಿದೆ. ನಾನು ಒಬ್ಬ ಮನುಷ್ಯ ಮತ್ತು ನನ್ನಲ್ಲೂ ಭಾವನೆಗಳಿವೆ ಎಂದು ಉತ್ತರಿಸಿದನು. ನನ್ನೊಂದಿಗೆ ಸಂಭೋಗಿಸಲು ಬಯಸುತ್ತಿರುವುದಾಗಿ ಎಂದು ಹೇಳಿದನು. ಆತನ ಉತ್ತರ ಕೇಳಿ ನನಗೆ ಆಘಾತವಾಯಿತು ಎಂದು ಸಂತ್ರಸ್ತೆ ವಿಡಿಯೋದಲ್ಲಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಶಕೀರ್ ಸುಭಾನ್ ಆರೋಪವನ್ನು ನಿರಾಕರಿಸಿದ್ದಾರೆ. ಕಿರುಕುಳದ ದೂರು ನಕಲಿಯಾಗಿದ್ದು, ಸಾಕ್ಷ್ಯಾಧಾರಗಳೊಂದಿಗೆ ಅದನ್ನು ಎದುರಿಸುತ್ತೇನೆ ಎಂದು ಶಕೀರ್ ಹೇಳಿದ್ದಾರೆ.(ಏಜೆನ್ಸೀಸ್​)
ಮಲ್ಲಿಕಾ ಮಧುರ ಗಾಯನ ; ವಿನಯ್ ರಾಜಕುಮಾರ್ ನಟಿಸುತ್ತಿರುವ ‘ಒಂದು ಸರಳ ಪ್ರೇಮಕಥೆ’

ಏಷ್ಯಾಡ್​ ನಿಯಮದಿಂದ ಕನ್ನಡಿಗ ಮನುಗೆ ತಪ್ಪಿದ ಸ್ಪರ್ಧೆ ಅವಕಾಶ

ಇಂಡಿಯಾ ಬ್ಲಾಕ್​ನಿಂದ 14 ನ್ಯೂಸ್​ ಆ್ಯಂಕರ್​ ಬಹಿಷ್ಕಾರ: ಅಚ್ಚರಿ ಮೂಡಿಸಿದ ನಿತೀಶ್​ ಕುಮಾರ್​ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − two =
Remember me
