ನವದೆಹಲಿ:ಅವನ ಉದ್ದೇಶ ಏನು ಎಂಬುದು ನಮಗೆ ಗೊತ್ತಿಲ್ಲ. ನಾನು ಅವನನ್ನು ಅಲ್ಲಿ ಇಳಿಸಿ ಬಂದೆ. ಆಮೇಲೆ ನಾವು ನೋಡಿದ್ದು ಟಿವಿಯಲ್ಲಿ ಎಂದು ಶಹೀನಾ​ ಬಾಗ್​ನಲ್ಲಿ ಗುಂಡಿನ ದಾಳಿ ಮಾಡಿದ ಆರೋಪಿ ತಂದೆ ಗಜೆ ಸಿಂಗ್​ ಹೇಳಿದ್ದಾರೆ.
ನಾನು ಅವನನ್ನು ಭೇಟಿ ಮಾಡಲು ಹೋಗಿಲ್ಲ. ಬೆಳಗ್ಗೆಯಿಂದ ಮನೆಯಲ್ಲಿಯೇ ಇದ್ದೇನೆ. ಪೊಲೀಸರು ಬಂಧಿಸಿದ ನಂತರ ಅವನ ಬಗ್ಗೆ ತಿಳಿದಿಲ್ಲ. ಆದರೆ ಅವನ ಉದ್ದೇಶ ಏನು ಎಂಬುದು ಗೊತ್ತಿಲ್ಲ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಪಿ ಕಪಿಲ್​ ಗುಜ್ಜಾರ್​ನ ತಂದೆ, ಈ ಮೊದಲು ಅವನು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಸ್ಥಳಿಯವಾಗಿಯೂ ಅವನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಎಂದರು.
ಮಧ್ಯಾಹ್ನ 12ಕ್ಕೆ ಮನೆಯಲ್ಲಿಯೇ ಇದ್ದ. ಆದರೆ ಸಂಜೆ 4ಕ್ಕೆ ಶಹೀನಾ​ ಬಾಗ್ ಹೇಗೆ ತಲುಪಿದ ತಿಳಿಯದು. ಅವನು ಅದರಲ್ಲಿ ಭಾಗಿಯಾಗಿದ್ದು ನಮಗೆ ಟಿವಿ ನೋಡಿದ ನಂತರವೇ ತಿಳಿದಿದ್ದು ಎಂದು ಕಪಿಲ್​ ಚಿಕ್ಕಪ್ಪ ಫತೇ ಸಿಂಗ್​ ಹೇಳಿದರು.
ಬಂಧಿತ ಕಪಿಲ್​ ದೆಹಲಿ ನೋಯ್ಡಾ ಬಳಿಯ ದಲ್ಲುಪುರದ ನಿವಾಸಿ. ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಪಿಲ್​ನ ವಿಚಾರಣೆ ನಡೆಸಲಾಗುತ್ತಿದೆ. ಪ್ರತಿಭಟನೆಯಿಂದಾಗಿ ಟ್ರಾಫಿಕ್​ ಜಾಮ್​ ಆಗಿತ್ತು. ಸಂಬಂಧಿಕರ ಮದುವೆಗೆಂದು ತೆರಳುತ್ತಿದ್ದ ಕಪಿಲ್​ ಜಾಮ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಇದರಿಂದ ಬೇಸರಗೊಂಡು ಗಾಳಿಯಲ್ಲಿ ಗುಂಡು ಹಾರಿಸಿದೆ ಎಂದು ತಿಳಿಸಿದ್ದಾನೆ ಎಂದು ಡಿಸಿಪಿ ಚಿನ್ಮೊಯ್​ ಬಿಸ್ವಾಲ್​ ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 5 =
Remember me
