ನವದೆಹಲಿ:ಯೆಸ್​ ಬ್ಯಾಂಕ್​ ಆರ್ಥಿಕವಾಗಿ ದಿವಾಳಿಯಾಗಿದ್ದು, ಭಾರತೀಯ ರಿಸರ್ವ್​ ಬ್ಯಾಂಕ್​ ಅದರ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಬ್ಯಾಂಕ್​ನ ಸುಪರ್ದಿಗೆ ತೆಗೆದುಕೊಂಡಿದೆ. ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ(ಎಸ್​ಬಿಐ)ಕ್ಕೆ ಯೆಸ್​ ಬ್ಯಾಂಕ್​ನ ಮೇಲೆ ಹೂಡಿಕೆ ಮಾಡುವಂತೆ ಆರ್​ಬಿಐ ತಿಳಿಸಿದೆ. ಹಾಗಾಗಿ ಯೆಸ್​ ಬ್ಯಾಂಕ್​ನ ಗ್ರಾಹಕರು ಹೆದರುವ ಅವಶ್ಯಕತೆ ಇಲ್ಲ ಎಂದು ಎಸ್​ಬಿಐನ ಮುಖ್ಯಸ್ಥ ರಜನೀಶ್​ ಕುಮಾರ್​ ತಿಳಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ರಜನೀಶ್​ ಕುಮಾರ್​, “ಎಸ್​ಬಿಐ ಹೆಜ್ಜೆ ಇಟ್ಟಿದೆ ಎಂದರೆ ಅಲ್ಲಿ ಗ್ರಾಹಕರು ಹೆದರುವ ಅವಶ್ಯಕತೆ ಇರುವುದಿಲ್ಲ. ಯೆಸ್​ ಬ್ಯಾಂಕ್​ನ ಆಡಳಿತ ವ್ಯವಸ್ಥೆಯನ್ನು ನಾವು ಸುಧಾರಿಸುತ್ತೇವೆ. ಗ್ರಾಹಕರು ಹೆದರಬೇಡಿ.” ಎಂದು ಹೇಳಿದ್ದಾರೆ.
ಆರ್​ಬಿಐ ತಮಗೆ ಯೆಸ್​ ಬ್ಯಾಂಕ್​ನ ಮೇಲೆ 10,000 ಕೋಟಿ ಹಣವನ್ನು ಹೂಡಿಕೆ ಮಾಡಲು ಹೇಳಿದೆ. ಆದರೆ ಯೆಸ್​ ಬ್ಯಾಂಕ್​ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕನಿಷ್ಠ 20ರಿಂದ 22 ಸಾವಿರ ಕೋಟಿ ಹಣದ ಅಗತ್ಯತೆ ಇದೆ. ಅದಕ್ಕೆ ಹೂಡಿಕೆ ಮಾಡಲು ಅನೇಕ ಹೂಡಿಕೆದಾರರು ಸಿದ್ಧರಾಗಿದ್ದಾರೆ. ನಾವು, ಆರ್​ಬಿಐ ಮತ್ತು ಸರ್ಕಾರ ಮೂವರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಆರ್​ಬಿಐ ಜತೆ ನಿಕಟ ಸಂಬಂಧ ಹೊಂದಿರುವ ನಾವು ಸಮಸ್ಯೆಯನ್ನು ಬಗೆಹರಿಸುತ್ತೇವೆ. ಇನ್ನು ಒಂದು ವಾರದಲ್ಲಿ ಹಣ ಮರುಪಡೆಯುವಿಕೆಯ ಮೇಲಿರುವ ನಿರ್ಬಂಧವನ್ನು ತೆಗೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.(ಏಜೆನ್ಸೀಸ್​)
ಯೆಸ್​ ಬ್ಯಾಂಕ್​ ಸಂಸ್ಥಾಪಕನ ಬೆನ್ನತ್ತಿದ ಇ.ಡಿ., ಸಿಬಿಐ ಅಧಿಕಾರಿಗಳು; ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದ ಪುತ್ರಿ ರೋಶಿಣಿ ಕಪೂರ್​

ಗ್ರಾಹಕರೇ ಎಚ್ಚರ, ಮಾ.16ರ ನಂತರ ನಿಮ್ಮ ಡೆಬಿಟ್​, ಕ್ರೆಡಿಟ್​ ಕಾರ್ಡ್​ ನಿಷ್ಕ್ರಿಯಗೊಳ್ಳಬಹುದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nine =
Remember me
