ಮುಂಬೈ:ಕರೊನಾ ವೈರಸ್​ ಯಾರನ್ನೂ ಬಿಡುತ್ತಿಲ್ಲ. ಗಣ್ಯಾತಿಗಣ್ಯರಿಂದ ಹಿಡಿದು ಕಟ್ಟಕಡೆಯ ವ್ಯಕ್ತಿಯ ದೇಹದೊಳಕ್ಕೂ ಇದು ಅತ್ಯಂತ ಸುಲಭದಲ್ಲಿ ಒಕ್ಕರಿಸಿಬಿಡುತ್ತಿದೆ. ಆದರೆ ಈ ವೈರಸ್​ ಒಂದು ಕಚೇರಿಯ ಒಬ್ಬ ವ್ಯಕ್ತಿಗೆ ಒಕ್ಕರಿಸಿ ಎಂದರೆ, ಇಡೀ ಕಚೇರಿಯೇ ಮುಚ್ಚಬೇಕಾಗುವಂಥ ಪರಿಸ್ಥಿತಿ ತಲೆದೋರುವುದೇ ಸಮಸ್ಯೆಯಾಗಿದೆ.
ಈಗ ಇಂಥದ್ದೇ ಸಮಸ್ಯೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಮುಂಬೈನ ಶಾಖೆ ಅನುಭವಿಸುತ್ತಿದೆ. ಮೂರು ಶಾಲೆಗಳಲ್ಲಿನ ಎಂಟು ಸಿಬ್ಬಂದಿಗೆ ಕೋವಿಡ್ 19 ಸೋಂಕು ಖಚಿತಪಟ್ಟಿರುವುದರಿಂದ ಮುಂಬೈ ಹಾಗೂ ಥಾಣೆಯ ಮೂರು ಎಸ್‌ಬಿಐ ಶಾಖೆಗಳನ್ನು ಮುಚ್ಚಲಾಗಿದೆ. ಈ ಪೈಕಿ ಎರಡು ಶಾಖೆ ಮುಂಬೈನಲ್ಲಿ ಹಾಗೂ ಥಾಣೆಯಲ್ಲಿ ಒಂದು ಶಾಖೆ ಮುಚ್ಚಲಾಗಿದೆ.
ಥಾಣೆಯ ಮುಖ್ಯ ಶಾಖೆಯಲ್ಲಿ 27 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಪೈಕು ಆರು ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಇನ್ನು ವಾಯುವ್ಯ ಮುಂಬೈ ಉಪನಗರ ಜೋಗೇಶ್ವರಿಯಲ್ಲಿರುವ (ಪೂರ್ವ) ಚೆಕ್ ಪ್ರೊಸೆಸಿಂಗ್ ಸೆಲ್​ನಲ್ಲಿ (ಎಲ್‌ಸಿಪಿಸಿ) ನಗದು ವಿಭಾಗದ ಅಧಿಕಾರಿಯೊಬ್ಬರು ಸೋಂಕಿಗೆ ಒಳಗಾಗಿದ್ದಾರೆ. ಇದನ್ನು ಹೊರತುಪಡಿಸಿದರೆ ಅಂಧೇರಿಯಲ್ಲಿರುವ ಎಲ್‌ಸಿಪಿಸಿಯಲ್ಲಿ ಗಾರ್ಡನ್ ಕೆಲಸ ಮಾಡುವ ಸಿಬ್ಬಂದಿಗೆ ಸೋಂಕು ದೃಢಪಟ್ಟಿರುವುದರಿಂದ ಒಟ್ಟು ಮೂರು ಶಾಖೆಗಳನ್ನು ಮುಚ್ಚಲಾಗಿದೆ ಎಂದು ಎಸ್‌ಬಿಐ ಉನ್ನತಾಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಕಂದಾಯ ಇಲಾಖೆ ಅಧಿಕಾರಿ ಆತ್ಮಹತ್ಯೆ: ಡೆತ್​ನೋಟ್​ ಸಿಕ್ಕರೂ ಕಾರಣ ನಿಗೂಢ!
ಕೆಲವು ಸಿಬ್ಬಂದಿ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಉಳಿದ ಸಿಬ್ಬಂದಿ ಆತಂಕ ಎದುರಿಸಬೇಕಾಗಿತ್ತು, ಮಾತ್ರವಲ್ಲದೇ ಬ್ಯಾಂಕ್​ಗಳಿಗೆ ಬರುವ ಗ್ರಾಹಕರ ಮೇಲೆಯೂ ಇದು ಪ್ರಭಾವ ಬೀರುತ್ತಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್​ ಮುಚ್ಚಲಾಗಿದೆ ಎಂದು ಎಸ್‌ಬಿಐ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.
“ಕರೊನಾ ವೈರಸ್​ ಹಿನ್ನೆಲೆಯಲ್ಲಿ ನಮ್ಮ ತಂಡವು ಇಡೀ ದೇಶದ ನಮ್ಮ ಬ್ಯಾಂಕುಗಳ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಮತ್ತು ಎಂಥದ್ದೇ ಸಂದರ್ಭದಲ್ಲಿ ವೈರಸ್​ ತಡೆ ನಿಯಮಾವಳಿಗಳನ್ನು ಅನುಸರಿಸಲಾಗುತ್ತದೆ. ಸೋಂಕಿಗೆ ಒಳಗಾದ ನಮ್ಮ ಅನೇಕ ಸಿಬ್ಬಂದಿ ಸದಸ್ಯರು ಚೇತರಿಸಿಕೊಂಡಿದ್ದಾರೆ” ಎಂದಿದ್ದಾರೆ.
ಕಾನೂನು ಸಲಹೆ: ಅಮ್ಮನಿಗಾಗಿ ಮದ್ವೆಯಾಗಿ ನಂತರ ವಿಚ್ಛೇದನ ಕೊಡಬಹುದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 17 =
Remember me
