ನವದೆಹಲಿ:ಆನ್​ಲೈನ್​ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ದಿನೇದಿನೆ ಒಂದಲ್ಲ ಒಂದು ಕಡೆ ಒಂದಲ್ಲ ಒಂದು ರೀತಿಯಲ್ಲಿ ವಂಚಿಸಿ ಹಣ ಲಪಟಾಯಿಸುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದೆ.
ಅದರಲ್ಲೂ ಈ ಎರಡು ಮೊಬೈಲ್​ಫೋನ್​ ನಂಬರ್​ಗಳಿಂದ ಕರೆ ಬಂದರೆ ಹುಷಾರು ಎಂದು ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಮುನ್ನೆಚ್ಚರಿಕೆಯನ್ನು ನೀಡಿದೆ. ಎಸ್​​ಬಿಐ ಗ್ರಾಹಕರಿಗೆ +91-8294710946 ಮತ್ತು +91-7362951973 ನಂಬರ್​ಗಳಿಂದ ಬಹಳಷ್ಟು ಕರೆ ಹಾಗೂ ಸಂದೇಶಗಳು ಹೋಗುತ್ತಿದ್ದು, ಕೆವೈಸಿ ನೆಪದಲ್ಲಿ ಕೆಲವೊಂದು ಫಿಷಿಂಗ್ ಲಿಂಕ್​ ಕ್ಲಿಕ್ ಮಾಡುವಂತೆ ಕೇಳಿಕೊಳ್ಳಲಾಗುತ್ತಿದೆ.
ಆದರೆ ಬ್ಯಾಂಕ್ ಆ ರೀತಿ ಯಾರಿಗೂ ಕರೆ ಮಾಡಿ ಕೆವೈಸಿ ಇತ್ಯಾದಿ ಕೇಳವುದಿಲ್ಲ. ಮೇಲಿನ ಎರಡು ನಂಬರ್​ಗಳು ಬ್ಯಾಂಕ್​ಗೆ ಸಂಬಂಧಪಟ್ಟವಲ್ಲ ಎಂದು ಸ್ಪಷ್ಟನೆ ನೀಡಿರುವ ಎಸ್​ಬಿಐ, ಆ ನಂಬರ್​ಗಳ ಕರೆ ಮತ್ತು ಮೆಸೇಜ್​ಗಳಿಗೆ ಪ್ರತಿಕ್ರಿಯಿಸಬಾರದು ಎಂದು ತಿಳಿಸಿದೆ.
ಪೆಟ್ರೋಲ್ ಟ್ಯಾಂಕ್​ ಮೇಲೆ ಪ್ರೇಯಸಿ, ಬೈಕ್ ಚಲಾಯಿಸುತ್ತಲೇ ರೊಮ್ಯಾನ್ಸ್​: ಪ್ರೇಮಿ ಮೇಲೆ 3 ಕೇಸ್​…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 16 =
Remember me
