ಮುಂಬೈ:ಲಡಾಖ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾ ವಿರೋಧಿ ಮನೋಭಾವ ಭಾರತದಲ್ಲಿ ಢಾಳಾಗಿದೆ. ಈ ಹಿನ್ನೆಲೆಯಲ್ಲಿ ಚೀನಾದಿಂದ ಆಮದು ಕಡಿಮೆ ಮಾಡುವ ಜತೆಗೆ ಅದರೊಂದಿಗಿನ ವಾಣಿಜ್ಯ ಸಂಬಂಧವನ್ನು ಯಾವ ರೀತಿ ನಿರ್ವಹಿಸಬೇಕು ಎಂಬ ಬಗ್ಗೆ ಅಧ್ಯಯನ ನಡೆದಿ ಭಾರತೀಯ ಸ್ಟೇಟ್​ ಬ್ಯಾಂಕ್​ (ಎಸ್​ಬಿಐ) ವರದಿ ನೀಡಿದೆ.
ನಿರ್ದಿಷ್ಟವಾದ ಕಾರ್ಯಸೂಚಿಯೊಂದಿಗೆ ಚೀನಾದಿಂದ ಭಾರಿ ಮತ್ತು ಕಡಿಮೆ ಮೌಲ್ಯದ ವಸ್ತುಗಳ ಆಮದನ್ನು ಕಡಿಮೆ ಮಾಡಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.
ಚೀನಾ ನಿಧಾನವಾಗಿ ಆದರೆ ಸ್ಥಿರವಾಗಿ ಭಾರಿ ಮತ್ತು ಕಡಿಮೆ ಮೌಲ್ಯದ ವಸ್ತುಗಳನ್ನು ರಫ್ತಿಗೆ ಭಾರತದಲ್ಲಿ ಭಾರಿ ತಳಹದಿಯನ್ನೇ ಹಾಕಿದೆ. ಈ ತಳಹದಿಯನ್ನು ಸಡಿಲಗೊಳಿಸಿ ಅಲ್ಲಿಂದ ಆಮದನ್ನು ಕಡಿಮೆ ಮಾಡಲು ನಿರ್ದಿಷ್ಟ ಕಾರ್ಯಸೂಚಿಯ ಅವಶ್ಯಕತೆ ಇದೆ ಎಂದು ವರದಿ ಪ್ರತಿಪಾದಿಸಿದೆ.ಚೀನಾ ಮೂಲದ 59 ಆ್ಯಪ್​ಗಳನ್ನು ನಿಷೇಧಿಸುವ ಮೂಲಕ ಭಾರತದಲ್ಲಿ ಸ್ವಂತ ಬಲದ ಮೇಲೆ ಆ್ಯಪ್​ಗಳನ್ನು ಸಿದ್ಧಪಡಿಸುವ ಕ್ಷಮತೆ ಇದೆ ಎಂಬುದನ್ನು ಚೀನಾಕ್ಕೆ ಸರ್ಕಾರ ತೋರಿಸಿಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಇದನ್ನೂ ಓದಿ:ನದಿಯ ಮೇಲೆ ಬೋಟ್​ಗಳಲ್ಲಿ ಕುಳಿತು ಸಿನಿಮಾ ನೋಡಿ; ಉಚಿತ ಪ್ರವೇಶ…!
ಸೇವಾ ವಲಯ ಮತ್ತು ಮರ್ಕಂಡೈಸ್​ ರಫ್ತಿನಲ್ಲಿ ಚೀನಾದೊಂದಿಗೆ ಸ್ಪರ್ಧಿಸುವ ಕ್ಷಮತೆ ಭಾರತಕ್ಕೆ ಇದೆ. ಚೀನಾಕ್ಕೆ ಹೋಲಿಸಿದರೆ ಭಾರತದ ಟೆಲಿಕಮ್ಯುನಿಕೇಷನ್ಸ್​, ಕಂಪ್ಯೂಟರ್​ ಮತ್ತು ಮಾಹಿತಿ ಸೇವೆಗಳ ರಫ್ತು ಹೆಚ್ಚಾಗಿದೆ. ಆದರೆ ಈ ಕೊರತೆಯನ್ನು ನೀಗಿಸಿಕೊಳ್ಳಲು ಚೀನಾ ತ್ವರಿತ ಕ್ರಮ ಕೈಗೊಳ್ಳುತ್ತಿದೆ. ಆದ್ದರಿಂದ, ಭಾರತ ಕೂಡ ಈ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿ ತನ್ನ ಬಲಸಂವರ್ಧನೆಗೆ ಮುಂದಾಗಬೇಕು ಎಂದು ಸಲಹೆ ನೀಡಲಾಗಿದೆ.
ಚೀನಾದ ವಸ್ತುಗಳನ್ನು ತತಕ್ಷಣವೇ ನಿಷೇಧಿಸುವುದರಿಂದ ಅನುಕೂಲಕ್ಕಿಂತ ಅನನಕೂಲವೇ ಹೆಚ್ಚು. ಆದ್ದರಿಂದ, ಚೀನಾದ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಿದೆ ಹಾಗೂ ಎಂಎಸ್​ಎಂಇಗಳಿಗೆ ಉತ್ತೇಜನ ನೀಡಲು ಸಾಧ್ಯವಿದೆ ಎಂಬಂಥ ನಿರ್ದಿಷ್ಟವಾದ ಉತ್ಪನ್ನಗಳನ್ನು ನಿರ್ಬಂಧಿಸುವ ಮೂಲಕ ಚೀನಾಕ್ಕೆ ಪೆಟ್ಟುಕೊಡಬೇಕು ಎಂದು ವರದಿ ಹೇಳಿದೆ.
ಕೊನೆಗೂ ಶುರುವಾಯ್ತು ಅಂತಾರಾಷ್ಟ್ರೀಯ ಕ್ರಿಕೆಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − sixteen =
Remember me
