ಬೆಂಗಳೂರು:ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮೇ 19ರಂದು ಹಿಂಪಡೆದಿದ್ದು, ಆ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಿ ಅವಧಿಯನ್ನೂ ನಿಗದಿ ಪಡಿಸಿದೆ.
ಅದರಂತೆ ನಾಳೆಯೇ ರಿಸರ್ವ್​ ಬ್ಯಾಂಕ್​ನ ಎಲ್ಲ ಪ್ರಾದೇಶಿಕ ಕಚೇರಿ ಹಾಗೂ ಎಲ್ಲ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲೂ ನೋಟು ವಿನಿಮಯ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ನೋಟು ಬದಲಾವಣೆಗೆ ಇದೇ ವರ್ಷದ ಸೆ. 30ರ ವರೆಗೂ ಕಾಲಾವಕಾಶ ಇರಲಿದೆ.
ಆದರೆ ನೋಟು ಬದಲಾವಣೆಗೆ 20 ಸಾವಿರ ರೂ. ಮಿತಿ ಹೊರತಾಗಿ ಬೇರೆ ಏನಾದರೂ ಷರತ್ತುಗಳಿವೆಯೇ? ಎಂಬ ಬಗ್ಗೆ ಜನರಲ್ಲಿ ಗೊಂದಲವಿದ್ದು, ಈ ನಿಟ್ಟಿನಲ್ಲಿ ಭಾರತೀಯ ಸ್ಟೇಟ್​ ಬ್ಯಾಂಕ್​ ತನ್ನ ನಿಲುವನ್ನು ಖಚಿತಪಡಿಸಿದೆ.
ಇದನ್ನೂ ಓದಿ:ಹೊಸ ಮನೆ ತೋರಿಸಲೆಂದು ಕುಟುಂಬಸ್ಥರನ್ನು ಕರೆದಾಕೆ, ಅವರ ಕಣ್ಮುಂದೆಯೇ ಸಾವಿಗೀಡಾದ್ಲು!; ಆಗಿದ್ದೇನು?
ಎರಡು ಸಾವಿರ ರೂಪಾಯಿ ನೋಟು ವಿನಿಮಯ ಎಲ್ಲ ಸಾರ್ವಜನಿಕರಿಗೂ ಅನ್ವಯಿಸಲಿದೆ ಎಂದಿರುವ ಎಸ್​ಬಿಐ, ಬ್ಯಾಂಕ್​ನಲ್ಲಿ ಖಾತೆ ಇರಲೇಬೇಕು ಎಂದೇನೂ ಇಲ್ಲ ಎಂಬುದನ್ನು ಈ ಮೂಲಕ ತಿಳಿಸಿದೆ. ಅಂದರೆ ಖಾತೆ ಇರದವರು ಬ್ಯಾಂಕ್​ನಲ್ಲಿ ಒಮ್ಮೆಗೆ 2 ಸಾವಿರದ ಹತ್ತು ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಖಾತೆ ಇದ್ದವರು ನೋಟು ವಿನಿಮಯ ಮಾಡಿಕೊಳ್ಳಬಹುದು ಇಲ್ಲವೇ ಖಾತೆಗೆ ಹಣ ಜಮಾ ಮಾಡಬಹುದು. ಹಣ ಜಮಾ ಮಾಡುವುದಾದರೆ ಅದಕ್ಕೆ 20 ಸಾವಿರ (2 ಸಾವಿರದ 10 ನೋಟು) ಮಿತಿ ಇರುವುದಿಲ್ಲ.
ಇದನ್ನೂ ಓದಿ:ಮುಖ್ಯಮಂತ್ರಿ ಮೊಮ್ಮಗ ಕೆನಡಿಯನ್ ಇಂಟರ್​​ನ್ಯಾಷನಲ್ ಸ್ಕೂಲ್​ನಲ್ಲಿ 12ನೇ ತರಗತಿ ಪಾಸ್; ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಿಎಂ
ಎರಡು ಸಾವಿರ ರೂ. ನೋಟು ವಿನಿಮಯಕ್ಕೆ ಯಾವುದೇ ಗುರುತಿನ ಚೀಟಿ ಬೇಕಾಗಿಲ್ಲ, ರಿಕ್ವಿಸಿಷನ್ ಸ್ಲಿಪ್ ಕೂಡ ಅಗತ್ಯವಿಲ್ಲ ಎಂದು ಎಸ್​ಬಿಐ ತನ್ನ ಬ್ಯಾಂಕ್ ಶಾಖೆಗಳಿಗೆ ನೀಡಿರುವ ಪರಿಷ್ಕೃತ ಆಂತರಿಕ ಸೂಚನೆಗಳಲ್ಲಿ ತಿಳಿಸಿವೆ. ಮತ್ತೊಂದೆಡೆ ಈ ಸಂಬಂಧ ಉಳಿದ ಬ್ಯಾಂಕ್​ಗಳು ಯಾವ ನಿಲುವು ತಳೆದಿವೆ ಎಂಬುದು ಇನ್ನೂ ಖಚಿತವಾಗಿಲ್ಲ.

ಅಂದು ‘ತಪ್ಪಾಯ್ತು ಕ್ಷಮಿಸಿ’ ಎಂದು ಕೈಮುಗಿದು ಕೇಳಿ ಇಂದು ಮತ್ತದೇ ತಪ್ಪು ಮಾಡಿದ ಜಮೀರ್​ ಅಹಮದ್​!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮತ್ತೊಂದು ನಿರ್ಧಾರ; ಇದು ಎಲ್ಲ ಕಡೆಗೂ ಅನ್ವಯ ಎಂದ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + fifteen =
Remember me
