ನವದೆಹಲಿ: ಬಿಕ್ಕಟ್ಟಿಗೆ ಸಿಲುಕಿರುವ ರಿಲಯನ್ಸ್ ಕಮ್ಯುನಿಕೇಷನ್ಸ್ ಸಮೂಹದ ಮಾಲಿಕ ಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಾಲದ ಎರಡು ಖಾತರಿಗಳಿಗೆ (ಗ್ಯಾರಂಟಿ) ಸಂಬಂಧಿಸಿದಂತೆ 1,200 ಕೋಟಿ ರೂ.ಗಳನ್ನು ವಸೂಲಿ ಮಾಡುವ ಪ್ರಕ್ರಿಯೆಗೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ಚಾಲನೆ ನೀಡಿದೆ. ದಿವಾಳಿ ಕಾನೂನಿನ ವೈಯಕ್ತಿಕ ಗ್ಯಾರಂಟಿ ನಿಯಮದಡಿ 1,200 ಕೋಟಿ ರೂ. ವಸೂಲಿಗೆ ಎಸ್​ಬಿಐ ಮುಂದಾಗಿದೆ.
ಈ ಬಗ್ಗೆ ಒಬ್ಬ ವೃತ್ತಿಪರ ಸಲಹಾಕಾರರನ್ನು ನೇಮಿಸುವಂತೆ ಕೋರಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣಕ್ಕೆ (ಎನ್​ಸಿಎಲ್​ಟಿ) ಎಸ್​ಬಿಐ ಅರ್ಜಿ ಸಲ್ಲಿಸಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ರಿಲಯನ್ಸ್ ಇನ್​ಫ್ರಾಟೆಲ್ ಕಂಪನಿಗಳ ಬ್ಯಾಂಕ್ ಸಾಲಗಳಿಗೆ ಅನಿಲ್ ವೈಯಕ್ತಿಕ ಗ್ಯಾರಂಟಿ ನೀಡಿದ್ದರು.
ಇದನ್ನೂ ಓದಿ:ಷೇರು ವಿನಿಮಯ ಕೇಂದ್ರವಷ್ಟೇ ಅಲ್ಲ, ಇದೀಗ ಅನಿಲ ವಿನಿಮಯ ಕೇಂದ್ರವೂ ಆರಂಭವಾಗಿದೆ…!
ಈ ಪ್ರಕರಣದ ಸಂಬಂಧ ಗುರುವಾರದೊಳಗೆ ಉತ್ತರಿಸುವಂತೆ ಅನಿಲ್​ಗೆ ಗಡುವು ನೀಡಲಾಗಿದೆ. ವಿವಾದವು ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ರಿಲಯನ್ಸ್ ಇನ್​ಫ್ರಾಟೆಲ್​ಗೆ ಸಂಬಂಧಿಸಿದ್ದೇ ಹೊರತು ಇದು ವೈಯಕ್ತಿಕ ಸಾಲವಲ್ಲ ಎಂದು ಅನಿಲ್ ವಕ್ತಾರರು ತಿಳಿಸಿದ್ದಾರೆ. ಮುಕೇಶ್ ಈ ಹಿಂದೆ ತಮ್ಮಅನಿಲ್​ರನ್ನು ಇದೇ ರೀತಿಯ ಬಿಕ್ಕಟ್ಟಿನಿಂದ ಪಾರು ಮಾಡಿ ಜೈಲು ಪಾಲಾಗುವುದನ್ನು ತಪ್ಪಿಸಿದ್ದರು.
https://www.vijayavani.net/murder-convicts-presence-at-wedding-of-kerala-cms-daughter-kicks-up-row/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
