ನವದೆಹಲಿ: ಬಾಲಿವುಡ್​ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್​ ದಿಶಾ ಸಾಲ್ಯಾನ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್​) ಯನ್ನು ಸುಪ್ರೀಂ ಕೋರ್ಟ್​ ಸೋಮವಾರ ಒಂದು ವಾರದ ಮಟ್ಟಿಗೆ ಮುಂದೂಡಿದೆ. ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ಅವರ ನೇತೃತ್ವದ ನ್ಯಾಯಪೀಠ ಈ ದಾವೆಯ ವಿಚಾರಣೆ ಕೈಗೆತ್ತಿಕೊಂಡಿತ್ತು.
ದಾವೆದಾರರ ಪರವಾಗಿ ಯಾರೂ ಹಾಜರಾಗದ ಕಾರಣ ವಿಚಾರಣೆಯನ್ನು ನ್ಯಾಯಪೀಠ ಮುಂದೂಡಿದೆ. ಕಳೆದ ಬಾರಿಯೂ ಈ ದಾವೆಗೆ ಸಂಬಂಧಿಸಿ ಯಾರೂ ಹಾಜರಾಗಿರಲಿಲ್ಲ. ಕಳೆದ ಸಲವೇ ನಾವು ಈ ಪ್ರಕರಣವನ್ನು ಬಾಂಬೆ ಹೈಕೋರ್ಟ್​ನಲ್ಲಿ ನಡೆಸುವುದಕ್ಕೆ ಪರಿಗಣಿಸುವಂತೆ ದಾವೆದಾರರಿಗೆ ಸೂಚಿಸಿದ್ದೆವು. ಈಗ ನಾವೇನು ಮಾಡೋಣ? ಎಂದು ನ್ಯಾಯಪೀಠ ಪ್ರಶ್ನಿಸಿದೆ. ಅಲ್ಲದೆ, ಒಂದು ವಾರದ ಮಟ್ಟಿಗೆ ವಿಚಾರಣೆಯನ್ನು ಮುಂದೂಡಿದೆ.
ಇದನ್ನೂ ಓದಿ:ಖಾತೆ ಬದಲಾವಣೆ: ಸ್ಫೋಟಗೊಂಡ ಶ್ರೀರಾಮುಲು ಅಸಮಾಧಾನ
ವಕೀಲ ಪುನೀತ್ ಧಂಡಾ ಈ ದಾವೆಯನ್ನು ಹೂಡಿದ್ದು, ಸುಶಾಂತ್​ ಸಿಂಗ್ ರಜಪೂತ್ ಸಾವಿನ ಪ್ರಕರಣದ ಸುತ್ತಮುತ್ತ ಅನೇಕ ವಿವಾದಗಳು, ಪಿತೂರಿಗಳು ನಡೆಯುತ್ತಿದ್ದು, ದಿಶಾ ಸಾಲ್ಯಾನ್​ ಸಾವಿನ ಪ್ರಕರಣವನ್ನು ಕೋರ್ಟ್​ ನಿಗಾದಲ್ಲಿ ನಡೆಸುವುದಕ್ಕೆ ಮನವಿ ಮಾಡಿದ್ದರು. (ಏಜೆನ್ಸೀಸ್)
‘ಆರೋಗ್ಯಕ್ಷೇತ್ರದಲ್ಲಿ ಕ್ರಾಂತಿಕಾರಿ ಕೆಲಸದ ನಿರೀಕ್ಷೆಯೊಂದಿಗೆ ಹೊಣೆಗಾರಿಕೆ ನನ್ನ ಹೆಗಲೇರಿಸಿದ್ದಾರೆ ಸಿಎಂ’

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:11 − five =
Remember me
