ನವದೆಹಲಿ:ಕೋಕಾಕೋಲಾ ಮತ್ತು ಥಮ್ಸ್ಅಪ್ ತಂಪು ಪಾನೀಯ ನಿಷೇಧ ಮಾಡುವಂತೆ ಹಾಗೂ ಸಾರ್ವಜನಿಕರು ಅದನ್ನು ಕುಡಿಯದಂತೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್​, ಅರ್ಜಿದಾರರಿಗೆ ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಇವೆರಡು ಪಾನೀಯಗಳು ಜನರ ಆರೋಗ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತವೆ. ಆದ್ದರಿಂದ ಅದರ ಮಾರಾಟ ಮತ್ತು ಬಳಕೆ ನಿಷೇಧಿಸಿ ಎಂದು ಸಾಮಾಜಿಕ ಹೋರಾಟಗಾರ ಉಮೇದಿಶ್ ಪಿ ಚಾವ್ಲಾ ಎನ್ನುವವರು ಮನವಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್, ಹೇಮಂತ್‌ ಗುಪ್ತಾ, ಅಜಯ್ ರಸ್ತೋಗಿ ಅವರನ್ನು ಒಳಗೊಂಡ ಪೀಠದ ಮುಂದೆ ಬಂದಿತ್ತು.
ಇದನ್ನೂ ಓದಿ:ಲಾಕ್​ಡೌನ್​ ಅವಧಿಯಲ್ಲಿ ಕಾರ್ಮಿಕರಿಗೆ ವೇತನ ವಿಚಾರ: ಸುಪ್ರೀಂಕೋರ್ಟ್​ ಹೇಳಿದ್ದೇನು?
ಆದರೆ ವಿಚಾರಣೆ ವೇಳೆ, ಕೆಲವೊಂದು ವಿಷಯಗಳಿಗೆ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅದೇನೆಂದರೆ, ಎಷ್ಟೊಂದು ತಂಪುಪಾನೀಯಗಳು ಇರುವಾಗ, ಇವೆರಡರ ಹೆಸರು ಹೇಳಿರುವುದು ಉದ್ದೇಶವೇನು ಎಂದು ಕೇಳಿದ ಪ್ರಶ್ನೆಗಳಿಗೆ ಅರ್ಜಿದಾರರ ಬಳಿ ಸರಿಯಾದ ಉತ್ತರ ಇರಲಿಲ್ಲ. ಅಷ್ಟೇ ಅಲ್ಲದೆ, ಇವು ದೇಹಕ್ಕೆ ಹಾನಿ ಎಂಬ ಬಗ್ಗೆ ತಿಳಿಸುವಂಥ ಯಾವುದೇ ದಾಖಲೆಗಳು ಅಥವಾ ಸೂಕ್ತವಾದ ವಿವರಣೆಗಳೂ ಇರಲಿಲ್ಲ.
ತಾಂತ್ರಿಕವಾಗಿ ಯಾವುದೇ ತಿಳಿವಳಿಕೆ ಇಲ್ಲದೇ ಕೋರ್ಟ್​ಗೆ ಅರ್ಜಿ ಸಲ್ಲಿಸಿ, ಸಮಯ ವ್ಯರ್ಥ ಮಾಡಲಾಗಿದೆ ಎಂದ ನ್ಯಾಯಮೂರ್ತಿಗಳು ದುಬಾರಿ ದಂಡವನ್ನು ವಿಧಿಸಿದರು. ಈ ಎರಡು ಪಾನೀಯಗಳನ್ನು ನಿಷೇಧಿಸಲು ಪರಿಪೂರ್ಣವಾದ ಸಾಕ್ಷ್ಯ ಒದಗಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ ಎಂದು ತೀರ್ಪಿನಲ್ಲಿ ಕೋರ್ಟ್​ ಹೇಳಿತು. ಒಂದು ತಿಂಗಳೊಳಗೆ ದಂಡ ಪಾವತಿಸಬೇಕೆಂದು ನಿರ್ದೇಶಿಸಿದೆ.
ಈ ದಂಡದ ಮೊತ್ತವನ್ನು ಸುಪ್ರೀಂಕೋರ್ಟ್​ ವಕೀಲರ ಸಂಘಕ್ಕೆ (SCAORA) ನೀಡುವಂತೆ ಆದೇಶಿಸಲಾಗಿದೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − twelve =
Remember me
