ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದ ಆದಾಯ ತೆರಿಗೆ ವಿಚಾರದ ಕೇಸ್​ನ ಫೈನಲ್ ಹಿಯರಿಂಗ್​ ಅನ್ನು ಸೋಮವಾರ ಸುಪ್ರೀಂ ಕೋರ್ಟ್ ಮಾರ್ಚ್ 17ಕ್ಕೆ ನಿಗದಿ ಮಾಡಿದೆ.
ನ್ಯಾಷನಲ್ ಹೆರಾಲ್ಡ್​ ಕೇಸಿಗೆ ಸಂಬಂಧಿಸಿ 2011-12ರ ಆದಾಯ ತೆರಿಗೆ ರೀ ಅಸೆಸೆಮೆಂಟ್​ ಕುರಿತು ದೆಹಲಿ ಹೈಕೋರ್ಟ್ ನೀಡಿದ ತೀರ್ಪು ಪ್ರಶ್ನಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್​, ಫೈನಲ್ ಹಿಯರಿಂಗ್ ದಿನಾಂಕವನ್ನು ಮಾರ್ಚ್​ 17ಕ್ಕೆ ನಿಗದಿ ಮಾಡಿದೆ.
ಇನ್​ಕಂ ಟ್ಯಾಕ್ಸ್ ರೀ ಅಸೆಸ್​ಮೆಂಟ್ ಪ್ರಕರಣವು ಇನ್​ಕಂ ಟ್ಯಾಕ್ಸ್​ ಅಪ್ಪಿಲೆಟ್​ ಟ್ರಿಬ್ಯೂನಲ್​ನಲ್ಲಿ ಬಾಕಿ ಇರುವ ವಿಚಾರವನ್ನು ಪರಿಗಣಿಸಿಯೇ ಸುಪ್ರೀಂ ಕೋರ್ಟ್ ಅದರ ಫಲಿತಾಂಶ ಬರುವ ತನಕ ವಿಚಾರಣೆಯನ್ನು ಮುಂದೂಡಿದೆ. ಅದರ ಫಲಿತಾಂಶ ಮಾರ್ಚ್​ 17ರೊಳಗೆ ಬರುವ ನಿರೀಕ್ಷೆ ಇದೆ.
ಐಟಿಎಟಿಗೆ ಸೋನಿಯಾ ಗಾಂಧಿ ಮತ್ತು ಇತರರ ಪರವಾಗಿ ಹಾಜರಾಗುತ್ತಿರುವ ಹಿರಿಯ ಅಡ್ವೋಕೇಟ್​ ಪಿ.ಚಿದಂಬರಂ, ಐಟಿಎಟಿ ಈಗಾಗಲೇ ತೀರ್ಪು ನೀಡಿದೆ. ಆದರೆ, ಆರು ಇತರೆ ವಿಷಯಗಳು ಬಾಕಿ ಇವೆ. ಅವುಗಳನ್ನು ಮುಂದಿನ ಹಿಯರಿಂಗ್ ಫೆ.28ರಂದು ನಿಗದಿ ಮಾಡುವಂತೆ ಮನವಿ ಮಾಡಲಾಗಿದೆ ಎಂದಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − nine =
Remember me
