ನವದೆಹಲಿ:ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್​ನ ಅಧ್ಯಕ್ಷ ಬಿ.ವಿ. ಶ್ರೀನಿವಾಸ್​ಗೆ ಸುಪ್ರೀಂ ಕೋರ್ಟ್​ ರಿಲೀಫ್​ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ವಿಚಾರವಾಗಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದ ಶ್ರೀನಿವಅಸ್​ಗೆ ನ್ಯಾಯಾಲಯ ಬಿಗ್​ ರಿಲೀಫ್​ ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ಬಿ.ಆರ್​. ಗವಾಯಿ ಮತ್ತು ಸಂಜಯ್​ ಕರೋಲ್​ ಅವರಿದ್ದ ದ್ವಿಸದಸ್ಯ ಪೀಠವು ವಾದ-ಪ್ರತಿವಾದವನ್ನು ಸುಧೀರ್ಘವಾಗಿ ಆಲಿಸಿ ಶ್ರೀನಿವಾಸ್​ ಅವರಿಗೆ ಜಾಮೀನು ಮಂಜುರು ಮಾಡಿದೆ.
ಇದನ್ನೂ ಓದಿ:ಬಿ.ವಿ. ಶ್ರೀನಿವಾಸ್​ ವಿರುದ್ಧ ಕಿರುಕುಳದ ಆರೋಪ; ಕಾಂಗ್ರೆಸ್​​ನಿಂದ ಮಹಿಳೆ ಉಚ್ಛಾಟನೆ
2023 ಫೆಬ್ರವರಿ ತಿಂಗಳಲ್ಲಿ ಛತ್ತೀಸ್​ಗಢದ ರಾಯ್​ಪುರದಲ್ಲಿ ಘಟನೆ ನಡೆದಿದೆ ಮತ್ತು ಏಪ್ರಿಲ್​ ತಿಂಗಳಲ್ಲಿ ಅಸ್ಸಾಂನಲ್ಲಿ ದೂರು ದಾಖಲಿಸಲಾಗಿದೆ. ಆದರೆ, ದೂರುದಾರರು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪಿಸಿಲ್ಲ ಎಂದು ಪೀಠ ಹೇಳಿದೆ.
FIR ದಾಖಲಿಸಲು ಸುಮಾರು ಎರಡು ತಿಂಗಳಉ ಗಲ ವಿಳಂಬವನ್ನು ಪರಿಗಣಿಸಿ ಅರ್ಜಿದಾರರು ಮಧ್ಯಂತರ ಜಾಮೀನಿಗೆ ಅರ್ಹರಾಗಿರುತ್ತಾರೆ. ಒಂದು ವೇಳೆ ಅವರನ್ನು ಬಂಧಿಸಿದ್ದರು 50,000 ಸಾವಿರ ಮೊತ್ತದ ಶ್ಯೂರಿಟಿ ಮೇಲೆ ಜಾಮೀನು ಮಂಜೂರು ಮಾಡಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಮೇ₹ 22ರಂದು ಪ್ರಕರಣ ವಿಚಾರಣೆ ನಡೆಸುತ್ತಿರುವ ತನಿಖಾಧಿಕಾರಿಯ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಜುಲೈನಲ್ಲಿ ಅರ್ಜಿ ವಿಚಾರಣೆ ನಡೆಸುವುದಾಗಿ ಪ್ರಕರಣವನ್ನು ಮುಂದೂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
