ನವದೆಹಲಿ: ಅಡ್ವೋಕೇಟ್ ಪ್ರಶಾಂತ್ ಭೂಷಣ್ ಅವರು ಎರಡು ಟ್ವೀಟ್​ಗಳ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎನ್ನಲಾದ ಪ್ರಕರಣದ ವಿಚಾರಣೆ ನಾಳೆಯಿಂದ ಸುಪ್ರೀಂ ಕೋರ್ಟ್​ ನಲ್ಲಿ ಶುರುವಾಗಲಿದೆ. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿಆರ್ ಗವಾಯಿ, ಕೃಷ್ಣ ಮುರಾರಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಿದೆ.
ಪ್ರಶಾಂತ್ ಭೂಷಣ್ ಅವರು ತಮ್ಮ ಟ್ವೀಟ್​ನಲ್ಲಿ, ಕಳೆದ ಆರು ವರ್ಷಗಳಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಗೆಡಹುವಲ್ಲಿ ಈ ಹಿಂದಿನ ನಾಲ್ವರು ಸಿಜೆಐಗಳದ್ದೂ ಒಂದೊಂದು ಪಾತ್ರ ಇದೆ ಎಂಬರ್ಥದ ಸಂದೇಶ ಅಪ್ಡೇಟ್ ಮಾಡಿದ್ದರು. ಇದಲ್ಲದೆ, ಹಾಲಿ ಸಿಜೆಐ ಎಸ್​.ಎ.ಬೊಬ್ಡೆ ಅವರ ವಿರುದ್ಧವೂ ಆರೋಪ ಮಾಡಿದ್ದರು. ನ್ಯಾಯಮೂರ್ತಿ ಬೊಬ್ಡೆ ಅವರು ಕಳೆದ ತಿಂಗಳು ನಾಗಪುರದಲ್ಲಿ ಹಾರ್ಲೆ ಡೇವಿಡ್​ಸನ್ ಬೈಕ್​ನಲ್ಲಿ ಕುಳಿತ ಫೋಟೋ ಕುರಿತಾದ ಕಮೆಂಟ್ ಆಗಿತ್ತು ಅದು.
ಇದನ್ನೂ ಓದಿ:ಒಂದಿಷ್ಟು ಶುಲ್ಕ ಪಾವತಿಸಿದ್ರೆ 2 ಕೋಟಿ ನಿಮ್ದಾಗುತ್ತೆ, ಯಾಕೆ ಕಳ್ಕೋತೀರಿ? ಎಂದು ಹೇಳ್ತಾನೇ ವಂಚಿಸಿದ್ರು ನೋಡಿ..!
When historians in future look back at the last 6 years to see how democracy has been destroyed in India even without a formal Emergency, they will particularly mark the role of the Supreme Court in this destruction, & more particularly the role of the last 4 CJIs
— Prashant Bhushan (@pbhushan1)June 27, 2020

ಇದಲ್ಲದೆ, ಭೀಮಾ ಕೋರೇಗಾಂವ್ ಕೇಸ್​ನಲ್ಲಿ ಆರೋಪಿಗಳಾದ ವರವರ ರಾವ್​, ಸುಧಾ ಭಾರದ್ವಾಜ್ ಅವರನ್ನು ಜೈಲಿನಲ್ಲಿ ನಡೆಸಿಕೊಳ್ಳುತ್ತಿರುವ ರೀತಿಯನ್ನೂ ಟೀಕಿಸಿದ್ದರು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಶಾಂತ್ ಭೂಷಣ್ ಅವರ ವಿರುದ್ಧದ ಈ ನ್ಯಾಯಾಂಗ ನಿಂದನೆಯ ಪ್ರಕರಣ ವಿಚಾರಣೆ ಈಗ ಕುತೂಹಲ ಕೆರಳಿಸಿದೆ. (ಏಜೆನ್ಸೀಸ್)
‘ನಾನೇ ಫಸ್ಟ್ ಟೆರರಿಸ್ಟ್’ ಹೀಗಂತ ಸರ್ಕಾರ ಸ್ವತಃ ಘೋಷಿಸಬೇಕು- ಎಂಥ ವಿಚಿತ್ರ ಬೇಡಿಕೆ ಈತನದ್ದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
