ನವದೆಹಲಿ: ಶಾಹೀನ್​ಬಾಘ್​ನಲ್ಲಿ ಮಾಧ್ಯಮಗಳು ಇದ್ದರೆ ಸಂಧಾನ ನಡೆಸಲು ಅಲ್ಲಿಗೆ ಇನ್ನು ಮುಂದೆ ತೆರಳುವುದಿಲ್ಲ ಎಂದು ಸುಪ್ರೀಂಕೋರ್ಟ್​ ನೇಮಕ ಮಾಡಿರುವ ಸಂಧಾನಕಾರರು ಷರತ್ತು ವಿಧಿಸಿದ್ದಾರೆ.
ಇಬ್ಬರು ಸಂಧಾನಕಾರರು ಬುಧವಾರ ಶಾಹೀನ್​ಬಾಘ್​ಗೆ ತೆರಳಿ ಪ್ರತಿಭಟನೆ ನಡೆಸುತ್ತಿದ್ದವರ ಜತೆ ಚರ್ಚೆ ನಡೆಸಿದ್ದರು. ಈ ವೇಳೆ ಅಲ್ಲಿ ಮಾಧ್ಯಮ ಪ್ರತಿನಿಧಿಗಳು ಇದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಜತೆ ಮುಕ್ತವಾಗಿ ಮಾತನಾಡಲು ಸಾಧ್ಯವಾಗಿರಲಿಲ್ಲ.
ಗುರುವಾರ ಸಂಧಾನ ನಡೆಸಲು ಮತ್ತೆ ಸ್ಥಳಕ್ಕೆ ತೆರಳಿದ ಸಮಯದಲ್ಲೂ ಅಲ್ಲಿ ಮಾಧ್ಯಮ ಪ್ರತಿನಿಧಿಗಳು ಇದ್ದರು. ಇದರಿಂದ ಬೇಸರಗೊಂಡ ಸಂಧಾನಕಾರರು ಮಾಧ್ಯಮ ಪ್ರತಿನಿಧಿಗಳು ಇದ್ದರೆ ಸಂಧಾನ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಶಾಹೀನ್​ಬಾಘ್​ನಲ್ಲಿ 2 ತಿಂಗಳಿಂದ ಪ್ರತಿಭಟನಾಕಾರರು ಧರಣಿ ನಡೆಸುತ್ತಿದ್ದು ಇವರ ಮನವೊಲಿಸುವಂತೆ ಸುಪ್ರೀಂಕೋರ್ಟ್​ ವಕೀಲ ಸಂಜಯ್​ ಹೆಗ್ಡೆ ಹಾಗೂ ಸಾಧನಾ ರಾಮಚಂದ್ರನ್​ ಅವರನ್ನು ನೇಮಕ ಮಾಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಕಳೆದ 2 ತಿಂಗಳಿಂದ ಶಾಹೀನ್​ಬಾಘ್​ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗಾಗಿ ರಸ್ತೆ ಬಂದ್​ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ ಪ್ರತಿಭಟನೆ ನಡೆಸುತ್ತಿರವವರೊಂದಿಗೆ ಮಾತನಾಡಿ ಮನವೊಲಿಸುವಂತೆ ಸುಪ್ರೀಂಕೋರ್ಟ್​ ಸಂಧಾನಕಾರರನ್ನು ನೇಮಕ ಮಾಡಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + eleven =
Remember me
