ನವದೆಹಲಿ: ಚುನಾವಣಾ ಪ್ರಚಾರಕ್ಕಾಗಿ ಬ್ಯಾನರ್, ಹೋರ್ಡಿಂಗ್​, ಬಂಟಿಂಗ್ಸ್​ ಮತ್ತು ಇತರೆಡೆ ಪ್ಲಾಸ್ಟಿಕ್​ ಬಳಕೆ ಅವ್ಯಾಹತವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್​ ಗುರುವಾರ ನೋಟಿಸ್ ನೀಡಿದೆ.
ಡಬ್ಲ್ಯು. ಎಡ್ವಿನ್​ ವಿಲ್ಸನ್​ ಎಂಬುವವರು ನ್ಯಾಷನಲ್ ಗ್ರೀನ್​ ಟ್ರಿಬ್ಯೂನಲ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆನ್ಯಾಯಮೂರ್ತಿ ಎಲ್​.ನಾಗೇಶ್ವರ ರಾವ್​, ಚುನಾವಣೆ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ವಿಚಾರವಾಗಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದ್ದಾರೆ. ಅಲ್ಲದೆ, ಈ ಬಗ್ಗೆ ನಾಲ್ಕುವಾರದೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿದ್ದಾರೆ.
ದೂರು ಅರ್ಜಿಯ ಸಾರ: ಚುನಾವಣೆ ಸಂದರ್ಭದಲ್ಲಿ ಪಿವಿಸಿ ಬ್ಯಾನರ್​ಗಳ ಬಳಕೆ ವ್ಯಾಪಕವಾಗಿದ್ದು, ಅದನ್ನು ನಿಷೇಧಿಸಲು ಎನ್​ಜಿಟಿ ಯಾವುದೇ ಪರಿಣಾಮಕಾರಿ ಆದೇಶ ನೀಡಿಲ್ಲ. ಪ್ರಚಾರಕ್ಕೆ ಬಳಸಿದ ಪ್ಲಾಸ್ಟಿಕ್ ಬ್ಯಾನರ್​, ಬಂಟಿಂಗ್ಸ್​, ಹೋರ್ಡಿಂಗ್​ಗಳನ್ನು ಬಳಿಕ ತ್ಯಾಜ್ಯ ಎಂದು ಪರಿಗಣಿಸಲಾಗುತ್ತಿದ್ದು, ಇದರ ತಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಎಡ್ವಿನ್ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
