ನವದೆಹಲಿ:ಇಸ್ರೇಲಿ ನಿರ್ವಿುತ ಪೆಗಾಸಸ್ ತಂತ್ರಾಂಶ ಬಳಸಿ ಗೂಢಚರ್ಯು ಮಾಡಲಾಗುತ್ತಿದೆ ಎಂಬ ಆರೋಪ ಸಂಬಂಧಿಸಿ ತನಿಖೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಈ ವಿದ್ಯಮಾನ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆ ಉಂಟುಮಾಡಿದೆ.
ರಾಜಕೀಯವಾಗಿ ಗಮನಸೆಳೆದಿದ್ದ ಈ ಪ್ರಕರಣದಲ್ಲಿ, ಗೂಢಚರ್ಯು ಆರೋಪವನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ತಳ್ಳಿಹಾಕಿತ್ತು. ಸುಪ್ರೀಂ ಕೋರ್ಟ್ ನ್ಯಾಯಪೀಠ ಇದನ್ನು ಗಮನಿಸಿದ್ದು, ಪತ್ರಕರ್ತರು, ಹೋರಾಟಗಾರರು, ರಾಜಕಾರಣಿಗಳ ನಡೆಯನ್ನು ಅರಿಯಲು ಅವರ ಮೊಬೈಲ್ ಫೋನ್​ಗಳಲ್ಲಿ ಪೆಗಾಸಸ್ ತಂತ್ರಾಂಶ ಅಳವಡಿಸಿ ಗೂಢಚರ್ಯು ನಡೆಸಿದ್ದು ಹೌದಾದರೆ ಅದು ಖಚಿತವಾಗಿ ಮೈ ನಡುಕ ಹುಟ್ಟಿಸುವಂಥದ್ದು. ಇಂತಹ ಆರೋಪ ಎದುರಾದಾಗ ಸರ್ಕಾರ ಕೇವಲ ಆರೋಪ ನಿರಾಕರಿಸಿದರೆ ಸಾಲದು. ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಪ್ರತಿ ಸಲವೂ ರಾಷ್ಟ್ರೀಯ ಭದ್ರತೆಯ ವಿಚಾರ ಮುಂದಿಟ್ಟು ಎಲ್ಲದರಿಂದಲೂ ಪಾರಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಸಮಿತಿಯ ಹೊಣೆಗಾರಿಕೆ
ನ್ಯಾಯಾಂಗ ಸಮಿತಿ ರಚನೆ
ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿರುವಂಥದ್ದು. ಅವರಿಗೆ ನೆರವಾಗಲು ಒಬ್ಬ ಐಪಿಎಸ್ ಅಧಿಕಾರಿಯನ್ನು ಕೇಂದ್ರ ಸರ್ಕಾರ ನಿಯೋಜಿಸಬೇಕು. ಇದಲ್ಲದೆ, ನ್ಯಾಷನಲ್ ಫಾರೆನ್ಸಿಕ್ ಯೂನಿವರ್ಸಿಟಿಯ ಅಧಿಕಾರಿಗಳು ಕೂಡ ನ್ಯಾಯಮೂರ್ತಿಗೆ ನೆರವು ನೀಡಬೇಕು ಎಂದು ನ್ಯಾಯಪೀಠ ಸೂಚಿಸಿದೆ. ತನಿಖೆ ಮಾಡಿ ವರದಿ ಸಲ್ಲಿಸುವುದಕ್ಕೆ ಎರಡು ತಿಂಗಳ ಕಾಲಾವಕಾಶವನ್ನು ನೀಡಿದೆ.
ಸಮಿತಿ ಸದಸ್ಯರು
ಪೆಗಾಸಸ್ ವಿವಾದ ಪಥ
ಗಮನಸೆಳೆದ ಸಿಜೆಐ ಹೇಳಿಕೆ
ಪೆಗಾಸಸ್ ಕುರಿತ 12 ದಾವೆಗಳ ಸಂಯೋಜಿತ ಕೇಸ್​ನ ವಿಚಾರಣೆಯ ತೀರ್ಪು ಪ್ರಕಟಿಸುವ ಮುನ್ನ ಸಿಜೆಐ ಎನ್.ವಿ. ರಮಣ ಅವರು 1984ರಲ್ಲಿ ಇಂಗ್ಲಿಷ್ ಸಾಹಿತಿ ಜಾರ್ಜ್ ಆರ್ವೆಲ್ ನೀಡಿದ್ದ ‘ಒಂದು ರಹಸ್ಯವನ್ನು ಕಾಪಾಡಬೇಕು ಎಂದು ನೀವು ಬಯಸಿದರೆ, ಅದನ್ನು ನೀವು ನಿಮ್ಮಿಂದಲೇ ಬಚ್ಚಿಟ್ಟು ಕೊಳ್ಳಬೇಕು’ ಎಂಬ ಹೇಳಿಕೆಯನ್ನು ಉಲ್ಲೇಖಿಸಿದರು.
ಯಾವ ಆಧಾರದಲ್ಲಿ ಸಮಿತಿ ಕಾರ್ಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + one =
Remember me
