ನವದೆಹಲಿ :ದೇಶದ್ರೋಹದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ಮಣಿಪುರದ ರಾಜಕೀಯ ಚಳುವಳಿಗಾರ ಲೈಚೊಂಬಂ ಎರೆಂದ್ರೋ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್​ ಆದೇಶಿಸಿದೆ. ‘ಸಗಣಿ ಮತ್ತು ಗೋಮೂತ್ರ ಕೆಲಸ ಮಾಡುವುದಿಲ್ಲ’ ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದ ಸಂಬಂಧದಲ್ಲಿ 37 ವರ್ಷ ವಯಸ್ಸಿನ ಎರೆಂದ್ರೋ ಅವರನ್ನು ಮೇ ತಿಂಗಳಲ್ಲಿ ಬಂಧಿಸಲಾಗಿತ್ತು ಎನ್ನಲಾಗಿದೆ.
ಬಿಜೆಪಿಯ ಮಣಿಪುರ ರಾಜ್ಯಾಧ್ಯಕ್ಷ ಸೈಕೋಂ ತೀಕೇಂದ್ರ ಸಿಂಗ್​ ಅವರ ಸಾವಿನ ಬಗೆಗೆ ಎರೇಂದ್ರೋ ಫೇಸ್​ಬುಕ್​ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್​ ಮಾಡಿದ್ದರು ಎಂದು ದೂರು ಸಲ್ಲಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಎರೆಂದ್ರೋ ಅವರನ್ನು ಕಠಿಣ ಕಾನೂನಾದ ನ್ಯಾಷನಲ್ ಸೆಕ್ಯುರಿಟಿ ಆ್ಟಕ್ಟ್​ನಡಿಯಲ್ಲಿ ಬಂಧಿಸಿದ ಪೊಲೀಸರ ಕ್ರಮದ ವಿರುದ್ಧ ಅವರ ತಂದೆ ರಿಟ್​ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಬಿಜೆಪಿ ನಾಯಕನ ಸಾವಿನ ಬಗ್ಗೆ ವಿವಾದಾತ್ಮಕ ಪೋಸ್ಟ್​​ : ಇಬ್ಬರ ಬಂಧನ
ಎರೆಂದ್ರೊ ಅವರನ್ನು ಇಂದು ಸಂಜೆ 5 ಗಂಟೆಯೊಳಗೆ ಬಿಡುಗಡೆ ಮಾಡಬೇಕೆಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಂ.ಆರ್​.ಷಾ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿತು. ಅವರನ್ನು ಬಂಧನದಲ್ಲಿಡುವುದರಿಂದ ಸಂವಿಧಾನ ಪರಿಚ್ಛೇದ 21 ರಡಿಯ ಬದುಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, 1000 ರೂ.ಗಳ ವೈಯಕ್ತಿಕ ಬಾಂಡ್​ನ ಮೇಲೆ ಬಿಡುಗಡೆ ಮಾಡಬೇಕು ಎಂದಿತು.(ಏಜೆನ್ಸೀಸ್)
ಟೋಕಿಯೋ ಒಲಂಪಿಕ್ಸ್: ಕುದುರೆ ಸವಾರಿಯ ವಿಶಿಷ್ಟ ಸ್ಪರ್ಧೆಗೆ ಬೆಂಗಳೂರಿಗ
ಸಚಿವ ಸ್ಥಾನ ಹೋದರೆ ಗೂಟ ಹೋದಂತೆ: ವೈರಲ್​ ಆಡಿಯೋಗೆ ಈಶ್ವರಪ್ಪ ಪ್ರತಿಕ್ರಿಯೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
