ನವದೆಹಲಿ:ಕರೊನಾ ಹೆಮ್ಮಾರಿಯ ರೌದ್ರನರ್ತನ ದೇಶಾದ್ಯಂತ ಮುಂದುವರಿದಿರುವಂತೆ ಆಯುರ್ವೇದ, ಹೋಮಿಯೋಪಥಿ ಮತ್ತು ಯುನಾನಿ ಸೇರಿ ಆಯುಷ್​ ಚಿಕಿತ್ಸಾ ಪದ್ಧತಿಯಲ್ಲಿ ಚಿಕಿತ್ಸೆ ಲಭ್ಯವಿದೆ. ಅದನ್ನು ಬಳಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಮೊದಲಿಗೆ ಕರೊನಾ ಸೋಂಕಿಗೆ ರೋಗನಿರೋಧಕ ಚುಚ್ಚುಮದ್ದು ಸಿದ್ಧವಾಗಲಿ. ಆ ಬಳಿಕ ಆಯುಷ್​ ಚಿಕಿತ್ಸಾ ಪದ್ಧತಿ ಬಗ್ಗೆ ನಿರ್ಧರಿಸೋಣ ಎಂದು ಹೇಳಿದ ನ್ಯಾಯಮೂರ್ತಿ ಎನ್​.ವಿ. ರಮಣ ನೇತೃತ್ವದ ನ್ಯಾಯಪೀಠ, ಸದ್ಯ ಕರೊನಾಕ್ಕೆ ಆಯುಷ್​ ಚಿಕಿತ್ಸೆ ನೀಡಲು ಅವಕಾಶ ನಿರಾಕರಿಸಿತು.
ಡಾ. ಸಿ.ಆರ್​. ಶಿವರಾಂ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಸಿದ ನ್ಯಾಯಪೀಠ, ಕರೊನಾ ವೈರಸ್​ ಹೊಸದಾಗಿದೆ. ಇದನ್ನು ನಿಯಂತ್ರಿಸುವ ವಿಷಯದಲ್ಲಿ ಸದ್ಯ ಪ್ರಯೋಗಗಳನ್ನು ಮಾಡಲು ಸಾಧ್ಯವಿಲ್ಲ. ತಜ್ಞರು ಮೊದಲು ಇದಕ್ಕೊಂದು ವ್ಯಾಕ್ಸಿನ್​ ಸಿದ್ಧಪಡಿಸಲು. ಆಮೇಲೆ ನೋಡೋಣ ಎಂದು ಹೇಳಿತು.
ಕೇರಳ ಹೈಕೋರ್ಟ್​ನಲ್ಲಿ ಪೆಂಡಿಂಗ್​:ಆಯುಷ್​ ಇಲಾಖೆ ಏಪ್ರಿಲ್​ 11ರಂದು ಬಿಡುಗಡೆ ಮಾಡಿದ್ದ ಸಲಹಾಪತ್ರದ ಪ್ರಕಾರ ಕೋವಿಡ್​ 19 ಚಿಕಿತ್ಸೆಯಲ್ಲಿ ಹೋಮಿಯೋಪಥಿಯನ್ನು ಬಳಸಬಹುದಾಗಿದೆ. ಇದಕ್ಕೆ ಅವಕಾಶ ಕೋರಿ ಕೇರಳ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.
ಈ ಬಗ್ಗೆ ಅಭಿಪ್ರಾಯ ಕೇಳಿ ಹೈಕೋರ್ಟ್​ ನ್ಯಾಯಪೀಠ ಕೇರಳ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ. ಸರ್ಕಾರ ಇನ್ನಷ್ಟೇ ಪ್ರಮಾಣಪತ್ರ ಸಲ್ಲಿಸಬೇಕಿರುವುದರಿಂದ, ಡಾ. ಎಂ.ಎಸ್​. ವಿನೀತ್​ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇನ್ನೂ ಬಾಕಿಯಾಗಿದೆ.
ಮಕ್ಕಳನ್ನು ನಲಿಸುತ್ತಾ ಕಲಿಸುವ ಮಕ್ಕಳವಾಣಿ ಯೂಟ್ಯೂಬ್​ ಚಾನಲ್​; ಸಿಎಂ ಬಿ.ಎಸ್​. ಯಡಿಯೂರಪ್ಪ ಅವರಿಂದ ಚಾಲನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + one =
Remember me
