ನವದೆಹಲಿ: ಖಾಸಗಿ ಗೂಢಚಾರಿಕೆ ಕ್ಷೇತ್ರಕ್ಕೆ ನಿಯಮದ ಚೌಕಟ್ಟು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂಬ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ. ಅಲ್ಲದೆ, ಅಹವಾಲು ಅರ್ಜಿಯನ್ನು ಹಿಂಪಡೆಯಿರಿ ಅಥವಾ ವಜಾಗೊಳಿಸುತ್ತೇವೆ ಎಂದು ದೂರುದಾರರಿಗೆ ಕೋರ್ಟ್​ ತಾಕೀತು ಮಾಡಿತು.
ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳು ಅಕ್ರಮವಾಗಿ ವೈಯಕ್ತಿಕ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ವಿದೇಶ ಪ್ರವಾಸ ಮುಂತಾದ ವಿವರಗಳನ್ನು ಬಳಸುತ್ತಿವೆ ಎಂದು ಹರಿಯಾಣ ಮೂಲದ ಮಹಿಳೆಯೊಬ್ಬರು ದೆಹಲಿ ಮೂಲದ ಡಿಟೆಕ್ಟಿವ್ ಏಜೆನ್ಸಿಯ ಕೆಲಸ ಉಲ್ಲೇಖಿಸಿ ಪ್ರಕರಣ ದಾಖಲಿಸಿದ್ದರು. ಹಿರಿಯ ಅಡ್ವೋಕೇಟ್​ ವಿಭಾ ದತ್ತಾ ಮಖಿಜಾ ಈ ದಾವೆಯಲ್ಲಿ ಮಹಿಳೆಯ ಪರವಾಗಿ ವಾದ ಮಂಡಿಸುತ್ತಿದ್ದರು. ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳಿಗೆ ನಿಯಮದ ಚೌಕಟ್ಟು ಇಲ್ಲದ ಕಾರಣ ಬೇಕಾಬಿಟ್ಟಿ ವರ್ತಿಸುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಅದಕ್ಕೆ ಪೂರಕ ಸಾಕ್ಷ್ಯಗಳನ್ನು ನ್ಯಾಯಪೀಠಕ್ಕೆ ಒದಗಿಸಲು ಮುಂದಾಗಿದ್ದರು.
ಇದನ್ನೂ ಓದಿ:VIDEO: ಅಮೆರಿಕದಲ್ಲಿ ಜೋ ಬಿಡೆನ್​ ಗೆಲ್ಲಲಿದ್ದಾರೆಂದು ಭವಿಷ್ಯ ಹೇಳಿದ ರಷ್ಯಾದ ಕರಡಿ, ಹುಲಿಗಳು
ನ್ಯಾಯಮೂರ್ತಿ ಆರ್​.ಎಫ್​. ನಾರಿಮನ್​ ನೇತೃತ್ವದ ನ್ಯಾಯಪೀಠದ ಎದುರು ಇದು ವಿಚಾರಣೆಗೆ ಬಂದಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಆರಂಭಿಸಿದ ನ್ಯಾಯಪೀಠ, ಅಮೆರಿಕದಲ್ಲಿರುವ ವ್ಯಕ್ತಿಯಿಂದ ಖಾಸಗಿ ಡಿಟೆಕ್ಟಿವ್ ಏಜೆನ್ಸಿ ಮಾಹಿತಿ ಕಲೆ ಹಾಕಿದರೆ ಅದನ್ನು ತಡೆಯುವುದಕ್ಕೆ ಕಾನೂನು ಚೌಕಟ್ಟು ರೂಪಿಸುವುದು ಸಾಧ್ಯವೇ? ಎಂದು ಪ್ರಶ್ನಿಸಿತು. ಅಲ್ಲದೆ, ಇದು ಖಾಸಗಿ ವಿಚಾರವಾಗಿದ್ದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲಾಗದು ಎಂದು ಸ್ಪಷ್ಟಪಡಿಸಿತು. (ಏಜೆನ್ಸೀಸ್)
ತುರ್ತುಪರಿಸ್ಥಿತಿಯನ್ನು ನೆನಪಿಸುವಂತಿದೆ ಗೋಸ್ವಾಮಿ ಬಂಧನ: ಕೇಂದ್ರ ಸಚಿವ ಜಾವಡೇಕರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − twelve =
Remember me
