ನವದೆಹಲಿ: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಐಟಿ ಕೇಸ್​ನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಭಾರಿ ಹಿನ್ನಡೆ ಆಗಿದೆ. ಐಟಿ ಕೇಸ್​ನ ಕ್ರಿಮಿನಲ್ ಪ್ರೊಸೀಡಿಂಗ್ಸ್​ ಗೆ ತಡೆ ನೀಡಲು ಸುಪ್ರೀಂ ಕೋರ್ಟ್​ ಗುರುವಾರ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ, ನ್ಯಾಯಮೂರ್ತಿ ಎ.ಎಸ್​.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯಂ ಅವರನ್ನು ಒಳಗೊಂಡ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿದೆ. ಐಟಿ ಕೇಸಿನ ಕ್ರಿಮಿನಲ್​ ಪ್ರೊಸೀಡಿಂಗ್ಸ್​ ಗೆ ತಡೆ ನೀಡಲು ನಿರಾಕರಿಸಿದ ನ್ಯಾಯಪೀಠ, ಆದಾಯ ತೆರಿಗೆ ಇಲಾಖೆಗೂ ತಮ್ಮ ಪ್ರತಿಕ್ರಿಯೆ ದಾಖಲಿಸುವುದಕ್ಕೆ ಅವಕಾಶ ನೀಡಿದೆ.
ಇದನ್ನೂ ಓದಿ:ತಂದೆಯನ್ನು ಕೊಂದ ಮಗನ ಬಂಧನ, 2 ತಿಂಗಳ ಹಿಂದೆಯೇ ಸ್ಕೆಚ್ ಹಾಕಿದ್ದ ಆರೋಪಿ
ಐಟಿ ಇಲಾಖೆಯ ಪರವಾಗಿ ವಿಚಾರಣೆಗೆ ಹಾಜರಾದ ನ್ಯಾಯವಾದಿ ಝೊಹೇದ್ ಹುಸ್ಸೇನ್​ ಅವರು ಕೌಂಟರ್ ಅಫಿಡವಿಟ್​ ಸಲ್ಲಿಸುವುದಕ್ಕೆ ಎರಡು ವಾರಗಳ ಸಮಯಾವಕಾಶ ಬೇಕು ಎಂದು ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದ್ದರು. ನ್ಯಾಯಪೀಠ ಇದಕ್ಕೆ ಅನುಮತಿ ನೀಡಿದ್ದು, ಐಟಿ ಇಲಾಖೆ ಅಫಿಡವಿಟ್ ಸಲ್ಲಿಸಿದ ಒಂದು ವಾರದೊಳಗೆ ದೂರುದಾರರಿಗೆ ಏನಾದರೂ ಆಕ್ಷೇಪವಿದ್ದರೆ ಪ್ರತಿಕ್ರಿಯೆ ದಾಖಲಿಸಬಹುದು. ಮುಂದಿನ ವಿಚಾರಣೆ ನಾಲ್ಕು ವಾರದ ನಂತರ ಇರಲಿದೆ ಎಂದು ಹೇಳಿದೆ.
ಇದನ್ನೂ ಓದಿ:‘ಗ್ರೂಪ್ ಆಫ್​ 23’ ಮೇಲೆ ‘ಕೈ’ಕಮಾಂಡ್​ ಸರ್ಜಿಕಲ್ ಸ್ಟ್ರೈಕ್​ !: ಸಿಬಲ್​ ಕಳವಳ
ಡಿ.ಕೆ.ಶಿವಕುಮಾರ್ ವಿರುದ್ಧ ಐಟಿ ಇಲಾಖೆ 2017 ಆಗಸ್ಟ್​ನಲ್ಲಿ ತೆರಿಗೆ ವಂಚನೆ ಕೇಸ್ ದಾಖಲಿಸಿದ್ದು, ಬಳಿಕ ಐಪಿಸಿ ಪ್ರಕಾರವೂ ಕೇಸ್ ದಾಖಲಾಗಿತ್ತು. ವಿಚಾರಣಾ ಕೋರ್ಟ್​ನ ತೀರ್ಮಾನವನ್ನು ಕರ್ನಾಟಕ ಹೈಕೋರ್ಟ್​ 2019ರ ನವೆಂಬರ್​ನಲ್ಲಿ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಶಿವಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಶಿವಕುಮಾರ್ ಪರವಾಗಿ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ವಾದ ಮಂಡಿಸುತ್ತಿದ್ದಾರೆ. ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಿಮಿನಲ್ ಪ್ರೊಸೀಡಿಂಗ್ಸ್ ನಡೆದಂತೆ ಮಧ್ಯಂತರ ತಡೆಯನ್ನಾದರು ನೀಡಿ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. (ಏಜೆನ್ಸೀಸ್)
₹ 2.35 ಲಕ್ಷ ಕೋಟಿ ತೆರಿಗೆ ಕೊರತೆ: ರಾಜ್ಯಗಳ ಎದುರು ಎರಡು ಆಯ್ಕೆಗಳನ್ನಿಟ್ಟ ಕೇಂದ್ರ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 19 =
Remember me
