ನವದೆಹಲಿ:ದೇಶದ್ರೋಹದ ಆರೋಪ ಎದುರಿಸುತ್ತಿರುವ ಪತ್ರಕರ್ತ ವಿನೋದ್​ ದುವಾರಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್​ ಇಂದು ನಿರಾಕರಿಸಿದೆ.ಭಾನುವಾರ ವಿಶೇಷ ವಿಚಾರಣೆ ನಡೆಸಿದ ಕೋರ್ಟ್​, ಪೊಲೀಸರು ಇವರನ್ನು ತನಿಖೆಗೆ ಒಳಪಡಿಸಬಹುದು. ಆದರೆ 24 ಗಂಟೆಗೂ ಮುಂಚೆ ಅವರಿಗೆ ವಿಚಾರಣೆಗೆ ಸಂಬಂಧಿಸಿದಂತೆ ನೋಟಿಸ್​ ನೀಡಬೇಕು ಎಂದಿದೆ. ಇದೆ ವೇಳೆ ಜುಲೈ 6ರವರೆಗೆ ಅವರನ್ನು ಬಂಧಿಸದಂತೆಯೂ ಆದೇಶಿಸಿದೆ.
ಏನಿದು ಪ್ರಕರಣ: ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದಿದ್ದ ಕೋಮು ಹಿಂಸಾಚಾರದ ಬಗ್ಗೆ ಮನಸೋ ಇಚ್ಛೆ ವರದಿ ಮಾಡಿ, ಅದನ್ನು ಯೂಟ್ಯೂಬ್ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿರುವ ಆರೋಪ ವಿನೋದ್​ ಅವರ ಮೇಲಿದೆ. ಸಿಎಎ ವಿರುದ್ಧ ದೆಹಲಿಯಲ್ಲಿ ಫೆಬ್ರುವರಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಕೆಲವರ ಚಿತಾವಣಿ ಮೇರೆಗೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಹಿಂಸಾಚಾರದ ಕುರಿತಂತೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದ ವಿನೋದ್​, ಈ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದಿದ್ದರು.
ಇದನ್ನೂ ಓದಿ:ಇನ್ನೋರ್ವ ಕಪ್ಪುವರ್ಣೀಯನ ಹತ್ಯೆ! ಅಮೆರಿಕದಲ್ಲಿ ಭುಗಿಲೆದ್ದಿದೆ ಹಿಂಸಾಚಾರ
ಮಾತ್ರವಲ್ಲದೇ ತಮ್ಮ ಯೂಟ್ಯೂಬ್‌ನಲ್ಲಿ ‘ವಿನೋದ್ ದುವಾ ಶೋ’ ಕಾರ್ಯಕ್ರಮದಲ್ಲಿ ಈ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿಯವರೇ ಕಾರಣ ಎಂಬಂತೆ ಬಿಂಬಿಸಿ ಜನರ ಹಾದಿಯನ್ನೂ ತಪ್ಪಿಸಿರುವ ಅರೋಪ ಎದುರಿಸುತ್ತಿದ್ದಾರೆ. ಸಾಲದು ಎಂಬುದಕ್ಕೆ ಕೆಲವೊಂದು ಖಂಡನಾರ್ಹ ಶಬ್ದಗಳ ಬಳಕೆ ಮಾಡಿರುವ ಆರೋಪ ಇವರ ಮೇಲಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ವಕ್ತಾರ ನವೀನ್ ಕುಮಾರ್ ಇವರ ವಿರುದ್ಧ ದೇಶದ್ರೋಹದ ದೂರು ದಾಖಲು ಮಾಡಿದ್ದಾರೆ. ಇದರ ಜತೆಗೆ, ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆಗೊಂಡಿರುವ ಬಗ್ಗೆ ದುವಾರ ಪ್ರತಿಕ್ರಿಯೆ ಕೀಳುಮಟ್ಟದ್ದಾಗಿತ್ತು. ಅಲ್ಲದೆ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ವ್ಯಾಪಂ ಹಗರಣ ನಡೆದಿತ್ತು ಎಂದು ಹೇಳಿದ್ದರು . ಇವೂ ಸೇರಿದಂತೆ ವಿನೋದ್​ ಅವರು ಹಲವು ವಿಷಯಗಳ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿ ಜನರ ಹಾದಿ ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ನವೀನ್​ ದೂರಿದ್ದಾರೆ.
ಈ ಸಂಬಂಧ ದುವಾರ ವಿರುದ್ಧ ಐಪಿಸಿ ಸೆಕ್ಷನ್  290, 505 ಮತ್ತು 505(2) ಅಡಿ ದೂರು ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ. ಇದರ ರದ್ದತಿಗೆ ಅವರು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
