ನವದೆಹಲಿ:ಉಪ ಮುಖ್ಯಮಂತ್ರಿ ಪದನಾಮದಿಂದ ಯಾವುದೇ ಸ್ಥಾನಮಾನ ಬದಲಾಗುವುದಿಲ್ಲ ಎಂಬುದಾಗಿ ಸವೋರ್ಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ರಾಜ್ಯಗಳಿಗೆ ಡಿಸಿಎಂ ನೇಮಕ ಮಾಡುವ ಅಭ್ಯಾಸವನ್ನು ಪ್ರಶ್ನಿಸಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಿರಾಕರಿಸಿದ ಸುಪ್ರೀಂ ಕೋರ್ಟ್​ ಈ ಅಭಿಪ್ರಾಯ ವ್ಯಕ್ತಪಡಿಸಿದೆ. “ಅದು ಬರೀ ಒಂದು ಲೇಬಲ್​. ನೀವು ಯಾರನ್ನಾದರೂ ಉಪ ಮುಖ್ಯಮಂತ್ರಿ ಎಂದು ಕರೆದರೆ ಅದರಿಂದ ಸ್ಥಾನಮಾನ ಬದಲಾಗುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​, ನ್ಯಾಯಮೂರ್ತಿ ಮನೋಜ್​ ಮಿಶ್ರಾ, ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಈ ವಿಷಯವಾಗಿ ರಾಜಕೀಯ ಪಕ್ಷವೊಂದು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಪೀಠ, ಮುಖ್ಯಮಂತ್ರಿ ಯಾವುದೇ ರಾಜ್ಯ ಸರ್ಕಾರದ ಅಗ್ರಗಣ್ಯ ಮಂತ್ರಿ ಆಗಿರುತ್ತಾರೆ. ಉಪ ಮುಖ್ಯಮಂತ್ರಿ ನೇಮಕದಿಂದ ಸಂವಿಧಾನದ ಉಲ್ಲಂನೆ ಆಗುವುದಿಲ್ಲ ಎಂದೂ ಹೇಳಿದೆ.
ಡಿಸಿಎಂ ನೇಮಕದಿಂದ ರಾಜ್ಯಗಳು ತಪ್ಪು ಉದಾಹರಣೆಗಳನ್ನು ಸೃಷ್ಟಿಸುತ್ತಿದ್ದು, ಈ ಥರದ ನೇಮಕ ಸಂವಿಧಾನದ ಉಲ್ಲಂನೆ ಎಂದು ಅರ್ಜಿದಾರರ ಪರವಾಗಿ ಹಾಜರಿದ್ದ ವಕೀಲರು ವಾದಿಸಿದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 2 =
Remember me
