ನವದೆಹಲಿ: ಶಬರಿಮಲೆ ಕೇಸ್​ನ ಹಿನ್ನೆಲೆಯಲ್ಲಿ ದೇಶಾದ್ಯಂತ ಇರುವ ವಿವಿಧ ಧಾರ್ಮಕ ಕೇಂದ್ರಗಳಲ್ಲಿ ಮಹಿಳೆಯರಿಗೆ ಆಗುತ್ತಿರುವ ತಾರತಮ್ಯಕ್ಕೆ ಸಂಬಂಧಿಸಿದ ಕಾನೂನು ವ್ಯಾಪ್ತಿಯ ಪ್ರಶ್ನೆಗಳ ಪರಾಮರ್ಶೆ ವಿಚಾರಣೆ ಗುರುವಾರ ನಡೆದಿದ್ದು,ಸುಪ್ರೀಂ ಕೋರ್ಟ್​ ಇದರ ತೀರ್ಪನ್ನು ಫೆ.10ಕ್ಕೆ ಕಾಯ್ದಿರಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಒಂಭತ್ತು ನ್ಯಾಯಮೂರ್ತಿಗಳ ಪೀಠ ಇಂದು ಬೆಳಗ್ಗೆಯಿಂದ ಸಂಜೆ ತನಕ ಇದರ ವಿಚಾರಣೆ ನಡೆಸಿದ್ದು, ಅಂತಿಮವಾಗಿ ಕಾನೂನು ಪ್ರಶ್ನೆಗಳ ನ್ಯಾಯ ಪರಾಮರ್ಶೆ ವಿಚಾರವನ್ನು ಉನ್ನತ ನ್ಯಾಯಪೀಠಕ್ಕೆ ವಹಿಸಬೇಕೋ ಬೇಡವೋ ಎಂಬುದನ್ನು ಫೆ.10ಕ್ಕೆ ಹೇಳುವುದಾಗಿ ತಿಳಿಸಿತು. ಅಲ್ಲದೆ, ಫೆ.12ರಿಂದ ನಿತ್ಯವೂ ಎಂಬಂತೆ ಈ ಪ್ರಕರಣದ ವಿಚಾರಣೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿತು.
ಶಬರಿಮಲೆ ಸೇರಿ ದೇಶದ ವಿವಿಧ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಮಹಿಳೆಯರಿಗೆ ಆಗುತ್ತಿರುವ ತಾರತಮ್ಯದ ವಿಚಾರವನ್ನು ನ್ಯಾಯಪೀಠ ಪರಿಗಣಿಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ನ್ಯಾಯ ತೀರ್ಮಾನ ಮಾಡುವ ಸಲುವಾಗಿ ಈ ವಿಚಾರಣೆ ನಡೆದಿದೆ. (ಏಜೆನ್ಸೀಸ್)
ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶ: ಕಾನೂನು ವ್ಯಾಪ್ತಿಯ ವಿಚಾರ ಪರಾಮರ್ಶೆ ಆರಂಭಿಸಿದ ಸುಪ್ರೀಂ ಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
