ತಿರುವನಂತಪುರಂ:ಕೇರಳದ ತಿರುವಾಂಕೂರು ದೇವಸ್ವಂ ಬೋರ್ಡ್​ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರನ್ನೂ ಪಾರ್ಟ್​ ಟೈಮ್​ ಅರ್ಚಕರನ್ನಾಗಿ ನೇಮಿಸುವ ಐತಿಹಾಸಿಕ ನಿರ್ಧಾರವನ್ನು ಕೇರಳ ಸರ್ಕಾರ ಕೈಗೊಂಡಿದೆ.ಪರಿಶಿಷ್ಟ ಜಾತಿಯ 18 ಹಾಗೂ ಪರಿಶಿಷ್ಟ ಪಂಗಡದ ಒಬ್ಬರನ್ನು ತಿರುವಾಂಕೂರು ದೇವಸ್ವಂ ಮಂಡಳಿಯಲ್ಲಿ ಪಾರ್ಟ್​ ಟೈಮ್​ ಅರ್ಚಕರನ್ನಾಗಿ ನೇಮಿಸಿಕೊಳ್ಳಲು ಸರ್ಕಾರ ಶಿಫಾರಸು ಮಾಡಿದೆ ಎಂದು ಸಚಿವ ಕಡಕಂಪಳ್ಳಿ ಸುರೇಂದ್ರನ್​ ತಿಳಿಸಿದ್ದಾರೆ.
2017ರ ಆ. 23ರಂದು ಪ್ರಕಟವಾಗಿದ್ದ ರ‍್ಯಾಂಕ್​ ಲಿಸ್ಟ್​ ಪ್ರಕಾರ ತಿರುವಾಂಕೂರು ದೇವಸ್ವಂ ಮಂಡಳಿಯಲ್ಲಿ ಇದುವರೆಗೆ 310 ಜನರನ್ನು ಪಾರ್ಟ್ ಟೈಮ್​ ಅರ್ಚಕರನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಆದರೆ ಆ ಸಮಯದಲ್ಲಿ ಪರೀಕ್ಷೆಗೆ ಎಸ್​ಸಿ-ಎಸ್​ಟಿ ಕೆಟಗರಿಯಿಂದ ಸಾಕಷ್ಟು ಅಭ್ಯರ್ಥಿಗಳು ಬಂದಿರಲಿಲ್ಲ.
ಎಲ್​ಡಿಎಫ್​ ಸರ್ಕಾರ ರಚನೆಯಾದ ಬಳಿಕ ನೇಮಕ ಮಂಡಳಿಯನ್ನು ಮರು ರಚಿಸಿದ್ದು, ತಿರುವಾಂಕೂರು, ಕೊಚಿನ್​ ಮತ್ತು ಮಲಬಾರ್​ ದೇವಸ್ವಂ ಬೋರ್ಡ್​ಗಳ ವಿವಿಧ ಹುದ್ದೆಗಳಿಗೆ ಸುಮಾರು 815 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − 7 =
Remember me
