ಪರಸ್ಸಾಲ:ಇನ್​​ಸ್ಟಾಗ್ರಾಂನಲ್ಲಿ ಪರಿಚಯವಾದ ಶಾಲಾ ಬಾಲಕಿಯ ಮೇಲೆ ಮದುವೆಯ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಇಬ್ಬರು ಯುವತಿಯರು ಸೇರಿದಂತೆ ಐವರು ಆರೋಪಿಗಳನ್ನು ಪರಸ್ಸಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಎರ್ನಾಕುಲಂ ಕಾಲಡಿ ನಿವಾಸಿಗಳಾದ ಅಜಿನ್​​ ಸ್ಯಾಮ್​, ಅಖಿಲೇಶ್​ ಸಾಬು, ಜಿತಿನ್​ ವರ್ಘೀಶ್​, ಪೂರ್ಣಿಮಾ ದಿನೇಶ್​ ಮತ್ತು ಶ್ರುತಿ ಸಿದ್ಧಾರ್ಥ್​ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಚೊಚ್ಚಲ ಐಪಿಎಲ್​ನ 3ನೇ ಪಂದ್ಯದಲ್ಲೇ ಕಳಪೆ ದಾಖಲೆ ಬರೆದ ಅರ್ಜುನ್​ ತೆಂಡೂಲ್ಕರ್​!
ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದ ಶಾಲಾ ಬಾಲಕಿಯ ಪ್ರಿಯಕರ ಮತ್ತು ಆತನ ಗ್ಯಾಂಗ್​ ಏಪ್ರಿಲ್ 17 ರಂದು ರಾತ್ರಿ ಕಲಿಯಕ್ಕವಿಲೈ ತಲುಪಿ ಸಂತ್ರಸ್ತೆಯನ್ನು ನೆಯ್ಯಂಟಿನ್‌ಕರದಲ್ಲಿರುವ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದೆ. ಗ್ಯಾಂಗ್​ನಲ್ಲಿ ಇಬ್ಬರು ಯುವತಿಯರು ಇದ್ದಾರೆ. ಮರುದಿನ ಆಕೆಯನ್ನು ಕಲಿಯಕ್ಕವಿಲೈಗೆ ಮರಳಿ ತಂದು ಬಿಟ್ಟಿದ್ದಾರೆ. ಬಳಿಕ ಹುಡುಗಿ ಪಾಲಕರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಪಾಲಕರು ನೀಡಿದ ದೂರಿನ ಆಧಾರದ ಮೇಲೆ ಪ್ರಿಯಕರ ಮತ್ತು ಆತನ ನಾಲ್ವರು ಸ್ನೇಹಿತರನ್ನು ಕಾಲಡಿಯಲ್ಲಿ ಬಂಧಿಸಲಾಗಿದೆ.
ಪರಸ್ಸಾಲ ಠಾಣೆಯ ಇನ್ಸ್‌ಪೆಕ್ಟರ್ ಆಜಾದ್ ಅಬ್ದುಲ್ ಕಲಾಂ ನೇತೃತ್ವದಲ್ಲಿ ಎಸ್‌ಐ ಸಜಿ, ಸಿಎಸ್‌ಎಸ್, ಎಎಸ್‌ಐ ಮಿನಿ, ಎಸ್‌ಸಿಪಿಒ ಸಾಬು, ಸಿಪಿಒ ಸುನೀಲ್ ಕುಮಾರ್, ಸಾಜನ್ ತಂಡ ಆರೋಪಿಗಳನ್ನು ಬಂಧಿಸಿದೆ. ಎಲ್ಲ ಆರೋಪಿಗಳನ್ನು ನೆಯ್ಯಟ್ಟಿಂಕರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.(ಏಜೆನ್ಸೀಸ್​)
ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

ಹೋಟೆಲ್​ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್​ ಹಿಂದಿರುವ ಕರಾಳತೆ ಬಯಲು

ಹೊಟ್ಟೆಪಾಡಿಗಾಗಿ ಸಾಬೂನು ಮಾರಲು ಬಿಡದ ಕಾಮುಕರು: ವಿಡಿಯೋ ಮೂಲಕ ನಟಿ ಐಶ್ವರ್ಯಾ ಬೇಸರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + eight =
Remember me
