ಲಖನೌ:ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಚೇಷ್ಟೆ ಮಾಡಿದನೆಂದು ಮೊದಲನೇ ಮಹಡಿಯಿಂದ ಆತನ ಕಾಲು ಹಿಡಿದು ತಲೆಕೆಳಗಾಗಿ ನೇತಾಡಿಸಿ ಶಿಕ್ಷೆ ನೀಡಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಕೃತ್ಯದ ಚಿತ್ರವು ವೈರಲ್​ ಆದ ಬೆನ್ನಲ್ಲೇ ಸ್ಥಳೀಯ ಪೊಲೀಸರು ಸಂಬಂಧಿತ ಶಾಲೆಯ ಸಂಚಾಲಕನನ್ನು ಬಂಧಿಸಿದ್ದಾರೆ.
ಅ.27 ರಂದು 5 ವರ್ಷ ವಯಸ್ಸಿನ ನರ್ಸರಿ ವಿದ್ಯಾರ್ಥಿ ಸೋನೂ ಊಟದ ಬ್ರೇಕ್​ ವೇಳೆ ಇತರರಿಗೆ ಚೇಷ್ಟೆ ಮಾಡಿದ ಹಿನ್ನೆಲೆಯಲ್ಲಿ ಶಾಲೆಯ ಸಂಚಾಲಕ ಮನೋಜ್​ ವಿಶ್ವಕರ್ಮ, ಆತನನ್ನು ಮೊದಲನೇ ಮಹಡಿಯಿಂದ ಕಾಲು ಹಿಡಿದು ಕೆಳಕ್ಕೆ ನೇತಾಡಿಸಿದ್ದಾರೆ. ಬಾಲಕನನ್ನು ಈ ರೀತಿ ವಿಚಿತ್ರವಾಗಿ ಬೆದರಿಸುತ್ತಿರುವಾಗ ಶಾಲೆಯ ಇತರ ಮಕ್ಕಳು ನಿಂತು ನೋಡುತ್ತಿರುವ ಚಿತ್ರವು ವೈರಲ್​ ಆಗಿದೆ.
ಇದನ್ನೂ ಓದಿ:ಕಣ್ಣೀರ ಕಡಲಲ್ಲಿ ಕರುನಾಡು: ಬದುಕಿನ ಪಯಣ ಮುಗಿಸಿದ ‘ರಾಜಕುಮಾರ’
ಈ ಘಟನೆಯು ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಅಹ್ರೌರ ಪ್ರದೇಶದ ಸದ್ಭಾವನಾ ಶಿಕ್ಷಣ ಸಂಸ್ಥಾನ್ ಶಾಲೆಯಲ್ಲಿ ನಡೆದಿದ್ದು, ಈ ಬಗ್ಗೆ ಬಾಲಕ ಸೋನುವಿನ ತಂದೆ ರಣಜೀತ್​ ಯಾದವ್​ ಪೊಲೀಸರಿಗೆ ದೂರು ನೀಡಿದ್ದಾರೆ. ಸದರಿ ಶಾಲಾ ಸಂಚಾಲಕನನ್ನು ಬಂಧಿಸಿರುವ ಅಹ್ರೌರಾ ಪೊಲೀಸರು, ಜುವಿನೈಲ್​ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)
ಇನ್ನು ಈ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಭಾರೀ ಅಗ್ಗ! ವರ್ಷಕ್ಕೆ ಒಂದೂವರೆ ಲಕ್ಷ ರೂ. ಮಾತ್ರ

“ಹಿಂದೂಗಳ ಮೇಲೆ ಯೋಜನಾಬದ್ಧ ದಾಳಿ! ಬಾಂಗ್ಲಾ ಹಿಂಸಾಚಾರದ ಬಗ್ಗೆ ವಿಶ್ವ ಸಂಘಟನೆಗಳ ಮೌನವೇಕೆ?”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
