ಲಖನೌ:ಪರೀಕ್ಷೆಗಳಲ್ಲಿ ಮೋಸ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದ ಶಾಲೆ ಪ್ರಾಂಶುಪಾಲನನ್ನು ಬಂಧಿಸಲಾಗಿದೆ. ಲಖನೌದಿಂದ 300 ಕಿ.ಮೀ. ದೂರವಿರುವ ಮೌ ಜಿಲ್ಲೆಯ ಖಾಸಗಿ ಶಾಲೆಯ ಪ್ರಾಂಶುಪಾಲ, ಮ್ಯಾನೇಜರ್​ ಪ್ರವೀಣ್​​ ಮಲ್​ ಎಂಬಾತನೇ ಬಂಧಿತ ವ್ಯಕ್ತಿ.
ಶಾಲೆಯ ಪರೀಕ್ಷೆ ವೇಳೆ ಹೇಗೆ ಮೋಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಆತ ಮಾಹಿತಿ ನೀಡುತ್ತಿದ್ದ. ಇದನ್ನು ಅಲ್ಲೇ ಇದ್ದ ಒಬ್ಬರು ವಿಡಿಯೋ ಮಾಡಿದ್ದಾರೆ. ಅಲ್ಲಿ ಕೆಲ ಪಾಲಕರು ಉಪಸ್ಥಿತರಿದ್ದರು.
ಈ ವಿಡಿಯೋವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ರವಾನಿಸಲಾಗಿದ್ದು. ವಿಡಿಯೋ ಜತೆಗೆ ದೂರನ್ನು ಸಲ್ಲಿಸಲಾಗಿದೆ. ಇದರ ಆಧಾರದ ಮೇಲೆ ಪ್ರವೀಣ್​ನನ್ನು ಬಂಧಿಸಲಾಗಿದೆ.
“ನಾನು ಚಾಲೆಂಜ್​ ಮಾಡ್ತೀನಿ. ನಮ್ಮ ಯಾವ ವಿದ್ಯಾರ್ಥಿಗಳು ಫೇಲ್​ ಆಗುವುದಿಲ್ಲ. ನೀವು ಪರೀಕ್ಷೆ ಬರೆಯುವಾಗ ನಿಮ್ಮನಿಮ್ಮಲ್ಲಿ ಮಾತಾಡಿ. ನಂತರ ಉತ್ತರ ಬರೆಯಿರಿ. ನಿಮ್ಮ ಸರ್ಕಾರಿ ಪರೀಕ್ಷಾ ಕೇಂದ್ರಗಳಲ್ಲಿ ಇರುವವರು ನನಗೆ ಗೆಳೆಯರು. ಹೆದರಬೇಡಿ, ಮಾತಾಡಿ ಬರೆಯಿರಿ. ಯಾರಾದರೂ ಬಂದು ಕಪಾಳಕ್ಕೆ ಹೊಡೆದರೆ ಹೆದರಬೇಡಿ ಸಹಿಸಿಕೊಳ್ಳಿ” ಎಂದು ಪ್ರವೀಣ್​ ಮಾತನಾಡಿರುವುದು ವಿಡಿಯೋದಲ್ಲಿದೆ.
“ಯಾವ ಪ್ರಶ್ನೆಯನ್ನು ಉತ್ತರಿಸದೇ ಇರಬೇಡಿ. ಉತ್ತರ ಪತ್ರಿಕೆಯಲ್ಲಿ 100 ರೂಪಾಯಿ ನೋಟು ಇಡಿ. ಶಿಕ್ಷಕರು ಕಣ್ಣುಮುಚ್ಚಿಕೊಂಡು ಅಂಕಗಳನ್ನು ನೀಡುತ್ತಾರೆ. 4 ಅಂಕದ ಪ್ರಶ್ನೆಯಾಗಿದ್ದರೆ, 3 ಅಂಕಗಳನ್ನಾದರೂ ನೀಡುತ್ತಾರೆ” ಎಂದು ಪ್ರವೀಣ್​ ಆ ವಿಡಿಯೋದಲ್ಲಿ ಹೇಳಿದ್ದಾನೆ.”ಜೈ ಹಿಂದ್​, ಜೈ ಭಾರತ್​” ಎಂದು ಘೋಷಣೆ ಕೂಗಿ ತನ್ನ ಮಾತು ಮುಗಿಸಿದ್ದಾನೆ.
ಇದಕ್ಕೆ ಕೆಲ ಪಾಲಕರು ಸರಿ ಇದೆ.., ಸರಿ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ!(ಏಜೆನ್ಸೀಸ್​)
#WATCHMau: Manager of Harivansh Memorial Inter College gives instructions to students appearing in state board examination; says 'write your exam with the help of cheating and maintain discipline when your 'chit' is caught'. (18.02)pic.twitter.com/nMeiUQmQai
— ANI UP/Uttarakhand (@ANINewsUP)February 20, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 16 =
Remember me
