ಸುಪೌಲ್:ಚಿತ್ರ ವಿಚಿತ್ರ ಸುದ್ದಿಗಳಿಂದ ಬಿಹಾರ ಸದಾ ಸುದ್ದಿಯಲ್ಲಿರುವ ರಾಜ್ಯ. ಅಲ್ಲಿನ ಕಳ್ಳತನಗಳು, ಅಪರಾಧ ಸುದ್ದಿಗಳು, ಸೇತುವೆ ಕುಸಿತ ಎಲ್ಲವೂ ದೇಶದ ಜನತೆಗೆ ಮೀಮ್ಸ್​, ಟ್ರೋಲ್ಸ್​ಗಳಿಗೆ ಸರಕುಗಳಾಗಿ ನಗೆ ಹೊಮ್ಮಿಸುತ್ತಿತ್ತು. ಆದರೆ ಬಿಹಾರದಲ್ಲಿ ಇಂದು (ಬುಧವಾರ) ನಡೆದಿರುವ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ.
ಉತ್ತರ ಬಿಹಾರದ ಸುಪೌಲ್​ನ ಶಾಲೆಯೊಂದರಲ್ಲಿ ಶೂಟೌಟ್ ನಡೆದಿದೆ. ಶಾಲೆಗೆ ತನ್ನ ಬ್ಯಾಗ್​ನಲ್ಲಿ ಬಚ್ಚಿಟ್ಟು ಹ್ಯಾಂಡ್​ಗನ್ ತಂದಿದ್ದ ಐದು ವರ್ಷದ ಬಾಲಕ ಅದೇ ಶಾಲೆಯ ಮೂರನೆಯ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ ಹತ್ತು ವರ್ಷದ ಬಾಲಕ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಹ್ಯಾಂಡ್​ಗನ್​ನಿಂದ ಹಾರಿದ ಗುಂಡು ವಿದ್ಯಾರ್ಥಿಯ ಕೈಗೆ ತಲುಗಿದೆ. ಶಾಲೆಯ ಉಳಿದ ವಿದ್ಯಾರ್ಥಿಗಳ ಪೋಷಕರು ಭಯಭೀತರಾಗಿದ್ದಾರೆ.ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ದಾವಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಸ್​ಪಿ ಶೈಶವ್ ಯಾದವ್, ಬಾಲಕನಿಗೆ ಹ್ಯಾಂಡ್​ಗನ್ ಹೇಗೆ ದೊರಕಿತು ಮತ್ತು ಶಾಲೆಯೊಳಗೆ ಹೇಗೆ ತರಲಾಯಿತು ಎನ್ನುವುದನ್ನು ನಾವು ವಿಚಾರಿಸುತ್ತಿದ್ದೇವೆ. ಶಾಲಾ ಆಡಳಿತ ಮಂಡಳಿಗಳು ಮಕ್ಕಳ ವರ್ತನೆಯ ಬಗ್ಗೆ ಎಚ್ಚರದಿಂದಿರಬೇಕು ಮತ್ತು ನಿಯಮಿತವಾಗಿ ಅವರ ಬ್ಯಾಗ್​ಗಳ ಪರಿಶೀಲನೆ ಮಾಡುವ ಮೂಲಕ ನಿಗಾ ಇಡಬೇಕು ಎಂದು ಎಚ್ಚರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
